ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಟ್ಯಾಂಡರ್ಡ್‌ ಚಾರ್ಟರ್ಡ್‌ ಬ್ಯಾಂಕ್‌ನ ಜಾಗತಿಕ ಸೇವಾ ಕೇಂದ್ರ ಉದ್ಘಾಟನೆ

Last Updated 10 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಜಾಗತಿಕ ಬ್ಯಾಂಕಿಂಗ್ ವಹಿವಾಟಿಗೆ ಮರು ವ್ಯಾಖ್ಯಾನ ನೀಡುವುದಕ್ಕೆ ಸ್ಥಳೀಯ ಪ್ರತಿಭಾನ್ವಿತರನ್ನು ನೇಮಿಸಿಕೊಳ್ಳುವ ಉದ್ದೇಶದಿಂದ ಜಾಗತಿಕ ಉದ್ದಿಮೆ ಸೇವಾ ಕೇಂದ್ರವನ್ನು ಬೆಂಗಳೂರಿನಲ್ಲಿ ಆರಂಭಿಸಲಾಗುತ್ತಿದೆ’ ಎಂದು ಸ್ಟ್ಯಾಂಡರ್ಡ್‌ ಚಾರ್ಟರ್ಡ್‌ ಗ್ರೂಪ್‌ನ ಮುಖ್ಯ ಮಾಹಿತಿ ಅಧಿಕಾರಿ ಮೈಕೆಲ್‌ ಗೊರಿಜ್‌ ಅವರು ಅಭಿಪ್ರಾಯಪಟ್ಟಿದ್ದಾರೆ.

ಮಂಗಳವಾರ ಇಲ್ಲಿ ನಡೆದ ಸ್ಟ್ಯಾಂಡರ್ಡ್‌ ಚಾರ್ಟರ್ಡ್‌ ಬ್ಯಾಂಕ್‌ನ ಜಾಗತಿಕ ಉದ್ದಿಮೆ ಸೇವಾ ಕೇಂದ್ರದ (ಜಿಬಿಎಸ್‌) ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು. ಈ ಅತ್ಯಾಧುನಿಕ ‘ಜಿಬಿಎಸ್‌’ ಕೇಂದ್ರವು, ಕಾರ್ಪೊರೇಟ್‌, ಸಾಂಸ್ಥಿಕ ಬ್ಯಾಂಕಿಂಗ್‌, ರಿಟೇಲ್‌ ಬ್ಯಾಂಕಿಂಗ್‌, ಮಾನವ ಸಂಪನ್ಮೂಲ, ರೋಬೊ ತಂತ್ರಜ್ಞಾನ ಮತ್ತು ಸಾಫ್ಟ್‌ವೇರ್‌ ಅಭಿವೃದ್ಧಿಯಲ್ಲಿ ಸೇವೆ ಒದಗಿಸಲಿದೆ.

‘ಬ್ಯಾಂಕಿಂಗ್‌ ವಲಯದಲ್ಲಿ ಡಿಜಿಟಲೀಕರಣ ಹೆಚ್ಚುತ್ತಿದ್ದಂತೆ ಗ್ರಾಹಕರಿಗೆ ಇನ್ನಷ್ಟು ವಿಶ್ವಾಸಾರ್ಹವಾದ ಮತ್ತು ಸುರಕ್ಷಿಕ ಬ್ಯಾಂಕಿಂಗ್‌ ಸೇವೆ ಒದಗಿಸಲು ಸಾಧ್ಯವಾಗಲಿದೆ’ ಎಂದು ಬ್ಯಾಂಕ್‌ನ ಸಿಇಒ ಝರೀನ್‌ ದಾರೂವಾಲಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT