ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲೋ ಹುಡುಕಿದೆ ಇಲ್ಲದ ರಸ್ತೆಯ, ಕಲ್ಲು ಮಣ್ಣಿನ ಗುಂಡಿಯೊಳಗೆ!

Last Updated 10 ಅಕ್ಟೋಬರ್ 2017, 19:54 IST
ಅಕ್ಷರ ಗಾತ್ರ

ಬೆಂಗಳೂರು: ‘ನಗರದಲ್ಲಿ ಬಿದ್ದಿರುವ ರಸ್ತೆ ಗುಂಡಿಗಳನ್ನು ಸಮರೋಪಾದಿಯಲ್ಲಿ ಮುಚ್ಚಬೇಕು. ಮಳೆ ಬಂದರೂ ಈ ಕೆಲಸ ನಿಲ್ಲಿಸಬಾರದು’ ಎಂದು ಮೇಯರ್‌ ಆರ್‌.ಸಂಪತ್‌ ರಾಜ್‌ ಸೂಚಿಸಿದರು.

ನಗರದಲ್ಲಿ ಮಂಗಳವಾರ ರಸ್ತೆ ಗುಂಡಿಗಳು ಹಾಗೂ ‌ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

‘ಚುನಾಯಿತ ಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗುಂಡಿಗಳನ್ನು ತುರ್ತಾಗಿ ಮುಚ್ಚಬೇಕು. ತಮ್ಮ ವ್ಯಾಪ್ತಿಯಲ್ಲಿ ಬರುವ ರಸ್ತೆಗಳ ಗುಂಡಿಗಳನ್ನು ಮುಚ್ಚಲು ಗುತ್ತಿಗೆದಾರರನ್ನು ಶೀಘ್ರದಲ್ಲೇ ನಿಯೋಜಿಸಬೇಕು. ಇಲ್ಲವಾದರೆ ಮುಖ್ಯ ಎಂಜಿನಿಯರ್‌ಗಳನ್ನೇ ಹೊಣೆಗಾರರನ್ನಾಗಿ ಮಾಡುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

‘ಗುತ್ತಿಗೆದಾರರು ಡಾಂಬರೀಕರಣ ಮಾಡಿದ ರಸ್ತೆಗಳ ನಿರ್ವಹಣಾ ಅವಧಿಯ ಬಗ್ಗೆ ಪಾಲಿಕೆಯ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡಬೇಕು. ಅಂತಹ ರಸ್ತೆಗಳಲ್ಲಿರುವ ಗುಂಡಿಗಳನ್ನು ಅವರಿಂದಲೇ ಮುಚ್ಚಿಸಬೇಕು. ಉಳಿದ ರಸ್ತೆಗಳ ಗುಂಡಿಗಳನ್ನು ಪಾಲಿಕೆಯ ನಿರ್ವಹಣಾ ವೆಚ್ಚದಲ್ಲೇ ಮುಚ್ಚಿಸಬೇಕು. ಇದಕ್ಕಾಗಿ ಪ್ರತ್ಯೇಕವಾಗಿ ಹಣ ಬಿಡುಗಡೆ ಮಾಡುವುದಿಲ್ಲ’ ಎಂದು ತಿಳಿಸಿದರು.

ಮಳೆ ಮುನ್ಸೂಚನೆ ತಂತ್ರಾಂಶ ಪ್ರಾತ್ಯಕ್ಷಿಕೆ: ದೆಹಲಿಯ ವಿಜ್‌ ಎಕ್ಸ್‌ಪರ್ಟ್‌ ಸಂಸ್ಥೆಯು ಮಳೆಯ ಮುನ್ಸೂಚನೆ ನೀಡುವ ತಂತ್ರಾಂಶವನ್ನು ಸಿದ್ಧಪಡಿಸಿದ್ದು, ಅದರ ಪ್ರಾತ್ಯಕ್ಷಿಕೆ ನೀಡಲಾಯಿತು.

‘ನಗರದಲ್ಲಿ ಯಾವ ಪ್ರದೇಶದಲ್ಲಿ ಎಷ್ಟು ಮಳೆ ಬೀಳಲಿದೆ ಎಂಬುದರ ಬಗ್ಗೆ 5 ಗಂಟೆಗಳ ಮುನ್ನವೇ ಮಾಹಿತಿ ನೀಡಲಿದೆ. ಇದರಿಂದ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಸಾಧ್ಯವಾಗಲಿದೆ’ ಎಂದು ಸಂಪತ್‌ ರಾಜ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT