ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

27 ತಾಲಿಬಾನ್ ಉಗ್ರರನ್ನು ಹತ್ಯೆಗೈದ ಅಫ್ಘಾನಿಸ್ತಾನದ ಭದ್ರತಾ ಪಡೆ

Last Updated 11 ಅಕ್ಟೋಬರ್ 2017, 13:01 IST
ಅಕ್ಷರ ಗಾತ್ರ

ಕಾಬೂಲ್:  ಇಲ್ಲಿನ ಶಹಾಜೋಯ್ ಮತ್ತು ಮಿಜಾನ್ ಜಿಲ್ಲೆಗಳ ಬಳಿ ಭಯೋತ್ಪಾದನಾ ನಿಗ್ರಹ ಚಟುವಟಿಕೆ ಕೈಗೊಂಡ ಅಫ್ಘಾನಿಸ್ತಾನದ ಭದ್ರತಾ ಪಡೆ 27 ತಾಲಿಬಾನ್ ಉಗ್ರರನ್ನು ಹತ್ಯೆಗೈದಿದೆ. 28 ಮಂದಿಗೆ ಗಂಭೀರ ಗಾಯಗಳಾಗಿವೆ.

ಇದರ ಬಗ್ಗೆ ಸ್ಪಷ್ಟನೆ ನೀಡಿದ ಅಫ್ಘಾನಿಸ್ತಾನದ ರಕ್ಷಣಾ ಸಚಿವಾಲಯ ಭದ್ರತಾ ಪಡೆಯ ಕಾರ್ಯಾಚರಣೆಗೆ 27 ಮಂದಿ ಬಲಿಯಾಗಿದ್ದಾರೆ. ಶಹಾಜೋಯ್ ಮತ್ತು  ಮಿಜಾನ್ ಜಿಲ್ಲೆಗಳ ಬಳಿ ತಾಲಿಬಾನ್ ಉಗ್ರರನ್ನು ಹತ್ಯೆಗೈಯ್ಯಲಾಗಿದೆ ಎಂದು ಹೇಳಿದೆ.

ಮೃತರಲ್ಲಿ ಸ್ಥಳೀಯ ತಾಲೀಬಾನ್ ಮುಖಂಡರು, ತಾಲಿಬಾನಿನ ಶ್ಯಾಡೋ ಸೇನೆಯ ಮುಖ್ಯಸ್ಥ  ಮಿಜಾನ್ ಸಿದ್ದಿಖ್ ಆಘಾ, ಇವರ ಮೂವರು ಕಮಾಂಡರ್ ಕೂಡ ಸೇರಿದ್ದಾರೆ. ಅಫ್ಘಾನಿಸ್ತಾನದ ಬೇರೆ ಬೇರೆ ವಲಯಗಳಲ್ಲಿ ಕೈಗೊಂಡ ಕಾರ್ಯಾಚರಣೆಯಿಂದಾಗಿ ಹಲವು ಉಗ್ರರು ಗಾಯಗೊಂಡಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.

ಈ ವೇಳೆ ಹಲವು ಯುದ್ಧ ಸಾಮಾಗ್ರಿ, ಸ್ಫೋಟಕ, ಶಸ್ತ್ರಾಸ್ತ್ರಗಳು ಹಾಗೂ ವಾಹನಗಳನ್ನು ಭದ್ರತಾ ಪಡೆ ನಾಶಗೊಳಿಸಿದೆ.

ಅಫ್ಘಾನಿಸ್ತಾನದ ಕಮಾಂಡೊಗಳು ಹೆರಾತ್ ವಲಯದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ನಾಲ್ವರು ಪ್ರಮುಖ ತಾಲಿಬಾನ್ ಕಮಾಂಡೋಗಳು ಕೂಡ ಸಾವನ್ನಪ್ಪಿದ್ದಾರೆ ಎಂದು 207ನೇ ಜಾಫರ್ ಮಿಲಿಟರಿ ಪಡೆಯ ವಕ್ತಾರ ಅಬ್ದುಲ್ ಖ್ವಾಯಂ ನೂರಿಸ್ತಾನಿ ಹೇಳಿದ್ದಾರೆ.

’ಗೋಜಾರಾ ಜಿಲ್ಲೆಯ ಸುತ್ತಮುತ್ತ ವಲಯಗಳಲ್ಲಿ ಅಫ್ಘಾನಿಸ್ತಾನದ ಭದ್ರತಾ ಪಡೆ  ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ ಕೈಗೊಂಡಿತ್ತು. ಈ ವೇಳೆ ಹಲವು ಶಸ್ತ್ರಾಸ್ತ್ರಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ’ ಎಂದು ಟೋಲೋ ನ್ಯೂಸ್ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT