ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಷ್ಟು ಸರಿ?

Last Updated 11 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಈಚೆಗೆ ಮಂಗಳೂರಿನಲ್ಲಿ ನಡೆದ ಅಡಿಕೆ ಬೆಳೆಗಾರರ ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿದ್ದೆ. ಮಧ್ಯಾಹ್ನ ರುಚಿಕಟ್ಟಾದ ಭೋಜನ ವ್ಯವಸ್ಥೆಯಿತ್ತು. ಊಟ ಮಾಡಿದ ಮೇಲೆ ನಾನು ಪ್ಲೇಟ್ ಎಲ್ಲಿ ಹಾಕುವುದೆಂದು ಹುಡುಕಲು ಹೋದೆ.

ಅಲ್ಲಿ ಒಂದು ಕಡೆ ಸುಮಾರು 18-20 ವಯಸ್ಸಿನ ಇಬ್ಬರು ಹುಡುಗರು ಪ್ಲೇಟಿನಲ್ಲಿರುವ ತ್ಯಾಜ್ಯ ವಸ್ತುಗಳನ್ನು ಕೈಯಿಂದ ತೆಗೆದು ಬಕೆಟ್‌ಗೆ ಹಾಕಿ ಆ ಖಾಲಿ ಮಾಡಿದ ಪ್ಲೇಟನ್ನು ತೊಳೆಯುವವರಿಗೆ ಕೊಡಲು ಇನ್ನೊಂದು ಬಕೆಟ್‌ನಲ್ಲಿ ಹಾಕಿ ಇಡುತ್ತಿದ್ದರು.

ನಾನು ಅವರಲ್ಲಿ ‘ಇನ್ನೊಬ್ಬರು ತಿಂದು ಬಿಟ್ಟ ಪದಾರ್ಥವನ್ನು ನೀವು ಏಕೆ ತೆಗೆಯುತ್ತೀರಿ? ಅದಕ್ಕಾಗಿ ಪ್ರತ್ಯೇಕ ಒಂದು ಬಕೆಟ್ ಇಡಿ. ಊಟ ಮಾಡಿ ಪ್ಲೇಟ್ ಇಡಲು ಬಂದವರಲ್ಲಿ ತ್ಯಾಜ್ಯ ವಸ್ತುಗಳನ್ನು ಆ ಬಕೆಟಿಗೇ ಹಾಕಲು ಹೇಳಿ’ ಎಂದೆ. ಅದಕ್ಕೆ ಅವರು ‘ಬೇರೆ ಸಮಾರಂಭಗಳಲ್ಲಿ ಹಾಗೆ ಪ್ರತ್ಯೇಕ ಬಕೆಟ್ ಇಟ್ಟು ನೋಡಿದ್ದೇವೆ. ಆದರೆ ಯಾರೂ ಅದಕ್ಕೆ ತ್ಯಾಜ್ಯವನ್ನು ಹಾಕುವುದಿಲ್ಲ. ಹಾಗಾಗಿ ನಾವೇ ಆ ಕೆಲಸ ಮಾಡುತ್ತೇವೆ’ ಎಂದರು.

21ನೇ ಶತಮಾನದಲ್ಲಿರುವ ಪ್ರಜ್ಞಾವಂತ ನಾಗರಿಕರಾದ ನಾವು ಹೀಗೆ ಮಾಡುವುದು ಎಷ್ಟು ಸರಿ? ಊಟ ಮಾಡಿದವರಿಗೆ ಪ್ಲೇಟಲ್ಲಿ ಉಳಿಸಿದ ಆಹಾರ ಪದಾರ್ಥವನ್ನು ತೆಗೆದು ಬಕೆಟ್‌ಗೆ ಹಾಕುವುದು ಅಷ್ಟೊಂದು ಕಷ್ಟದ ಕೆಲಸವೇ? ಆ ಹುಡುಗರ ಸ್ಥಾನದಲ್ಲಿ ನಾವಿರುತ್ತಿದ್ದರೆ, ನಮ್ಮ ಮಕ್ಕಳು ಇರುತ್ತಿದ್ದರೆ ಎಂದು ನಾವು ಏಕೆ ಯೋಚಿಸುವುದಿಲ್ಲ?
-ಸಹನಾ ಕಾಂತಬೈಲು, ಮಡಿಕೇರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT