ಬ್ಯಾಸ್ಕೆಟ್‌ಬಾಲ್‌: ಕರ್ನಾಟಕದ ತಂಡಗಳಿಗೆ ಜಯ

ಬುಧವಾರ, ಜೂನ್ 26, 2019
24 °C

ಬ್ಯಾಸ್ಕೆಟ್‌ಬಾಲ್‌: ಕರ್ನಾಟಕದ ತಂಡಗಳಿಗೆ ಜಯ

Published:
Updated:

ಬೆಂಗಳೂರು: ಕರ್ನಾಟಕ ಬಾಲಕರ ಮತ್ತು ಬಾಲಕಿಯರ ತಂಡದವರು ರಾಜ ಸ್ತಾನದ ದಿಡ್ವಾನದಲ್ಲಿ ನಡೆಯುತ್ತಿರುವ 44ನೇ ರಾಷ್ಟ್ರೀಯ ಸಬ್‌ ಜೂನಿಯರ್‌ ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಗೆಲುವಿನ ಸಿಹಿ ಸವಿದಿದ್ದಾರೆ.

ಬಾಂಗೌರ್‌ ಕಾಲೇಜು ಮೈದಾನದಲ್ಲಿ ಬುಧವಾರ ನಡೆದ ‘ಬಿ’ ಗುಂಪಿನ ಪಂದ್ಯದಲ್ಲಿ ಕರ್ನಾಟಕ ಬಾಲಕಿಯರ ತಂಡ 69–49 ಪಾಯಿಂಟ್ಸ್‌ನಿಂದ ಕೇರಳ ತಂಡವನ್ನು ಪರಾಭವಗೊಳಿಸಿತು.

ಆರಂಭದಿಂದಲೇ ಚುರುಕಿನ ಆಟ ಆಡಿದ ರಾಜ್ಯ ತಂಡದ ಪರ ಸುನೀಕ್ಷಾ ಮತ್ತು ಸ್ಮೃತಿ ಕ್ರಮವಾಗಿ 14 ಮತ್ತು 10 ಪಾಯಿಂಟ್ಸ್‌ ಸಂಗ್ರಹಿಸಿ ಮಿಂಚಿದರು.

ಮೊದಲ ಕ್ವಾರ್ಟರ್‌ನ ಅಂತ್ಯಕ್ಕೆ 13–16ರಿಂದ ಹಿಂದಿದ್ದ ರಾಜ್ಯ ತಂಡ ದವರು ನಂತರ ಮೋಡಿ ಮಾಡಿದರು. ಎರಡನೇ ಕ್ವಾರ್ಟರ್‌ನಲ್ಲಿ 11–4ರಿಂದ ಮುನ್ನಡೆ ಗಳಿಸಿದ ತಂಡ ನಂತರದ ಕ್ವಾರ್ಟರ್‌ಗಳಲ್ಲೂ (14–14, 22–15) ಪ್ರಾಬಲ್ಯ ಮೆರೆಯಿತು.

ಬಾಲಕರಿಗೂ ಜಯ: ಬಾಲಕರ ವಿಭಾಗದಲ್ಲಿ ಕರ್ನಾಟಕ ತಂಡ ಎರಡು ಪಂದ್ಯ ಗಳಲ್ಲಿ ಗೆದ್ದಿತು. ಮೊದಲ ಪಂದ್ಯದಲ್ಲಿ 35–21ರಿಂದ ಗುಜರಾತ್‌ ತಂಡವನ್ನು ಮಣಿಸಿದ ತಂಡ ನಂತರ 50–26ರಿಂದ ನಾಗಲ್ಯಾಂಡ್‌ ಸವಾಲು ಮೀರಿ ನಿಂತಿತು. ಕರ್ನಾಟಕದ ಪರ ಹರ್ಷ (9 ಪಾಯಿಂಟ್ಸ್‌) ಮತ್ತು ಅಕ್ಷಯ್‌ (12) ಮಿಂಚಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry