ಬೆಂಗಳೂರು: ಯಾವುದೇ ಬ್ರ್ಯಾಂಡ್ ಸ್ಮಾರ್ಟ್ ಫೋನ್ ಖರೀದಿಯೊಂದಿಗೆ ಮುಂಚಿತವಾಗಿಯೇ ಅಳವಡಿಸಲಾಗಿರುವ ಗೂಗಲ್ ಆ್ಯಪ್‌ಗಳು ಲಭ್ಯವಿರುತ್ತವೆ. ಆದರೆ, ಈ ಆ್ಯಪ್‌ಗಳನ್ನು ಮೊಬೈಲ್ ಸಂಸ್ಥೆಗಳು ನೀಡುತ್ತವೆಯೋ ಅಥವಾ ಗೂಗಲ್?

ಎಲ್ಲ ಸ್ಮಾರ್ಟ್ ಫೋನ್‌ಗಳಲ್ಲಿ ಗೂಗಲ್ ಆ್ಯಪ್‌ಗಳು ಮುಂಚಿತವಾಗಿಯೇ ಇರುವಂತೆ ಗೂಗಲ್ ಸಂಸ್ಥೆ ನೋಡಿಕೊಳ್ಳುತ್ತದೆ. ಇದಕ್ಕಾಗಿ ಮೊಬೈಲ್ ಸಂಸ್ಥೆಗಳಿಗೆ ಸ್ವತಃ ಗೂಗಲ್ ಹಣ ನೀಡುತ್ತದೆ.

ಜಿಮೇಲ್, ಯುಟ್ಯೂಬ್, ಗೂಗಲ್ ಡ್ರೈವ್ ಸೇರಿ ಗೂಗಲ್‌ನ ಆ್ಯಪ್‌ಗಳು ಕಾರ್ಯನಿರ್ವಹಣೆಗೆ ಸಿದ್ಧವಿರಲು ಮೊಬೈಲ್ ಉತ್ಪಾದನಾ ಸಂಸ್ಥೆಗಳಿಗೆ ಗೂಗಲ್ ಕಳೆದ ವರ್ಷ ₹46,800 ಕೋಟಿ(7.2 ಬಿಲಿಯನ್ ಡಾಲರ್) ನೀಡಿರುವುದಾಗಿ ವರದಿಯಾಗಿತ್ತು. ಆ್ಯಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಜತೆಗೆ ಐ–ಫೋನ್, ಮ್ಯಾಕ್ ಕಂಪ್ಯೂಟರ್‌ಗಳಲ್ಲಿಯೂ ಪೂರ್ವ ನಿಯೋಜಿತವಾಗಿ ಗೂಗಲ್ ಸರ್ಚ್ ಇಂಜಿನ್ ಅಳವಡಿಕೆಗೆ ಆ್ಯಪಲ್ ಸಂಸ್ಥೆಗೆ ₹19,500 ಕೋಟಿ ಪಾವತಿಸಿದೆ.

ಸ್ಮಾರ್ಟ್ ಫೋನ್ ಬಳಕೆದಾರರು ತನ್ನ ಆ್ಯಪ್ ಮೂಲಕವೇ ಹೆಚ್ಚು ಹುಡುಕಾಟ ನಡೆಸುವಂತೆ ಸೆಳೆಯಲು ಟಿಎಸಿ( traffic acquisition costs)ಗಾಗಿ ಗೂಗಲ್ ವಾರ್ಷಿಕ ಅಂದಾಜು ₹1,23,000 ಕೋಟಿ(19 ಬಿಲಿಯನ್ ಡಾಲರ್) ವ್ಯಯಿಸುತ್ತಿದೆ. ಗೂಗಲ್ ಬಳಸುವವರ ಸಂಖ್ಯೆ ಹೆಚ್ಚಿದಂತೆ ಆ ಸಂಸ್ಥೆಯ ಆದಾಯವೂ ಹೆಚ್ಚುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.