ಶುಕ್ರವಾರ, ಸೆಪ್ಟೆಂಬರ್ 20, 2019
28 °C

ರಸ್ತೆ ಒತ್ತುವರಿ ಆರೋಪ: ಪರಿಶೀಲನೆ

Published:
Updated:

ಪಾಂಡವಪುರ: ಪುರಸಭೆ ವ್ಯಾಪ್ತಿಯ ಗಾಂಧಿ ನಗರದಲ್ಲಿ ಎನ್.ಕೃಷ್ಣೇಗೌಡ ಎನ್ನುವವರು ರಸ್ತೆ ಒತ್ತುವರಿ ಮಾಡಿದ್ದಾರೆ ಎಂಬ ಬಗ್ಗೆ ಸಾರ್ವಜನಿಕರಿಂದ ದೂರು ಬಂದ ಕಾರಣ ಪುರಸಭೆ ಮುಖ್ಯಾಧಿಕಾರಿ ಮಂಜುನಾಥ್‌ ಬುಧವಾರ ಸ್ಥಳ ಪರಿಶೀಲನೆ ನಡೆಸಿದರು.

ಪುರಸಭೆ ಎಂಜಿನಿಯರ್ ಚೌಡಪ್ಪ ಹಾಗೂ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಬಂದ ಮುಖ್ಯಾಧಿಕಾರಿ ಮಂಜುನಾಥ್ ಅವರು ಮನೆಯನ್ನು ಅಳತೆ ಮಾಡಿಸಿದರು. ‘ಸುಮಾರು ಅರ್ಧ ಅಡಿ ಒತ್ತುವರಿ ಮಾಡಿಕೊಂಡಿದ್ದಾರೆ. ಮನೆ ನಿರ್ಮಾಣಕ್ಕೆ ಪುರಸಭೆಯಿಂದ ಪರವಾನಗಿ ಪಡೆದಿಲ್ಲ. ಅಕ್ರಮ ನಲ್ಲಿ ಸಂಪರ್ಕ ಪಡೆದಿದ್ದಾರೆ. ಯಾವುದೇ ಕಂದಾಯ ಪಾವತಿಸಿಲ್ಲ. ಈ ಸಂಬಂಧ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ಮಂಜುನಾಥ್‌ ಸುದ್ದಿಗಾರರಿಗೆ ತಿಳಿಸಿದರು.

Post Comments (+)