ಭೀಮೇಶ್ವರ ಜೋಷಿ ಖಾತೆಗೆ ಹಣ ವಾಪಸ್‌

ಗುರುವಾರ , ಜೂನ್ 20, 2019
26 °C

ಭೀಮೇಶ್ವರ ಜೋಷಿ ಖಾತೆಗೆ ಹಣ ವಾಪಸ್‌

Published:
Updated:

ಕಳಸ: ಕಳೆದ ತಿಂಗಳು ಯೂರೋಪ್‌ ಪ್ರವಾಸದಲ್ಲಿದ್ದಾಗ ಆನ್‌ಲೈನ್‌ ಚೋರರಿಂದ ₹20 ಲಕ್ಷಕ್ಕೂ ಹೆಚ್ಚು ಹಣ ಕಳೆದುಕೊಂಡಿದ್ದ ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮದರ್ಶಿ ಜಿ.ಭೀಮೇಶ್ವರ ಜೋಷಿ ಅವರಿಗೆ ಆ ಹಣ ಮರಳಿ ಬಂದಿದೆ.

ಜೋಷಿ ಅವರ ಡೆಬಿಟ್‌ ಕಾರ್ಡ್‌ ಹ್ಯಾಕ್ ಮಾಡಿದ್ದ ಚೋರರು ₹20ಲಕ್ಷಕ್ಕೂ ಹೆಚ್ಚು ಹಣ ಲಪಟಾಯಿಸಿದ್ದರು. ಈ ಬಗ್ಗೆ ಜೋಷಿ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ಪ್ರಗತಿಯಲ್ಲಿ ಇರುವಾಗಲೇ ಕರ್ಣಾಟಕ ಬ್ಯಾಂಕ್‌ ಜೋಷಿ ಕಳೆದಕೊಂಡಿದ್ದ ₹20.89 ಲಕ್ಷವನ್ನು ಜೋಷಿ ಅವರ ಖಾತೆಗೆ ಜಮಾ ಮಾಡಿದೆ.

ಈ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಭೀಮೇಶ್ವರ ಜೋಷಿ, ಕರ್ಣಾಟಕ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಮಹಾಬಲೇಶ್ವರ ಎಂ.ಎಸ್‌.ಅವರನ್ನು ಅಭಿನಂದಿಸಿದ್ದಾರೆ. ಬ್ಯಾಂಕ್‌ ವ್ಯವಹಾರ ಶ್ರೇಷ್ಠತೆಯ ಜತೆಗೆ ಮಾನವೀಯ ಸಂಬಂಧಗಳ ಮೌಲ್ಯ ಕಾಪಾಡುವಲ್ಲಿ ಬದ್ಧತೆ ತೋರಿದೆ ಎಂದು ಅವರು ತಿಳಿಸಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry