ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆದ್ದಾರಿ ತಡೆ, ಪ್ರಯಾಣಿಕರ ಪರದಾಟ

Last Updated 14 ಅಕ್ಟೋಬರ್ 2017, 7:25 IST
ಅಕ್ಷರ ಗಾತ್ರ

ಆಳಂದ: ಪಟ್ಟಣದ ಪುರಸಭೆ ಸಮೀಪದಲ್ಲಿನ ಸಿದ್ಧಾರ್ಥ ಚೌಕ್‌ನಲ್ಲಿದ್ದ ಪಂಚಶೀಲ ಧ್ವಜಸ್ತಂಭ ಗುರುವಾರ ರಾತ್ರಿ ವಾಹನ ಡಿಕ್ಕಿ ಹೊಡೆದ ಘಟನೆಯನ್ನು ಖಂಡಿಸಿ ವಿವಿಧ ದಲಿತ ಸಂಘಟನೆ ಮುಖಂಡರು, ಕಾರ್ಯಕರ್ತರು ಮುಖ್ಯರಸ್ತೆ ತಡೆದು ಬೆಳಿಗ್ಗೆಯಿಂದಲೆ ಪ್ರತಿಭಟನೆ ಹಮ್ಮಿಕೊಂಡಿದ್ದರಿಂದ ಆಳಂದ–ಉಮರ್ಗಾ ಮಾರ್ಗದ ವಾಹನ ಸಂಚಾರ ಮಧ್ಯಾಹ್ನದವರೆಗೆ ಸ್ಥಗಿತಗೊಂಡು ಪ್ರಯಾಣಿಕರು ಪರದಾಡಬೇಕಾಯಿತು.

ಆಳಂದ–ಉಮರ್ಗಾ ರಾಜ್ಯ ಹೆದ್ದಾರಿ ಮೇಲೆ ಮಾನವ ಸರಪಳಿ ನಿರ್ಮಿಸಿ, ವಾಹನಗಳ ಟೈರ್‌ಗೆ ಬೆಂಕಿ ಹಚ್ಚಿ ದಿನವಿಡೀ ಪ್ರತಿಭಟನೆ ನಡೆಸಿದ್ದರಿಂದ ಪರಿಸ್ಥಿತಿ ಬಿಗಡಾಯಿಸಿತ್ತು. ಘಟನೆಗೆ ಕಾರಣವಾದ ವಾಹನ ಚಾಲಕನ ವಿರುದ್ಧ ದೂರು ದಾಖಲಿಸಿ, ಬಂಧಿಸಬೇಕು. ಇದ್ದ ಸ್ಥಳದಲ್ಲಿಯೇ ಪಂಚಶೀಲ ಧ್ವಜದ ಕಟ್ಟೆ ನಿರ್ಮಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಸ್ಥಳಕ್ಕೆ ತಹಶೀಲ್ದಾರ್ ಬಸವರಾಜ ಬೆಣ್ಣೆಶಿರೂರು, ಪುರಸಭೆ ಮುಖ್ಯಾಧಿಕಾರಿ ಚಂದ್ರಕಾಂತ ಪಾಟೀಲ, ಡಿವೈಎಸ್‌ಪಿ ಪಿ.ಕೆ.ಚೌಧುರಿ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿದ್ದು ಫಲಕಾರಿಯಾಗಲಿಲ್ಲ. ಜಿಲ್ಲಾಧಿಕಾರಿ ಸ್ಥಳಕ್ಕೆ ಆಗಮಿಸಿ ಬೇಡಿಕೆ ಈಡೇರಿಸಬೇಕೆಂದು ಮುಖಂಡರು ಪಟ್ಟು ಹಿಡಿದರು.

ಹೆದ್ದಾರಿ ತಡೆ, ಪ್ರಯಾಣಿಕರ ಪರದಾಟ ಎಂದು ಮುಖಂಡ ಮಹಾದೇವ ಧನ್ನಿ, ಪಾಂಡುರಂಗ ಮೊದಲೆ, ರಾಜಕುಮಾರ ಮುದಗಲೆ, ಪ್ರಹ್ಲಾದ ಸಿಂಗೆ, ಅಂಬಾರಾಯ ಬೆಳಮಗಿ, ಭೀಮಾಶಂಕರ ತಳಕೇರಿ, ಸೂರ್ಯಕಾಂತ ಜಿಡಗಾ, ಅಫ್ಜಲ್ ಅನ್ಸಾರಿ, ಬಾಬುರಾವ ಬೀಳಗಿ ಮತ್ತಿತರರು ಪಟ್ಟು ಬಿಡದ ಕಾರಣ ಪ್ರತಿಭಟನೆ ಮುಂದುವರಿಯಿತು.

ತಹಶೀಲ್ದಾರ್ ಕಚೇರಿಯಲ್ಲಿ ಮುಖಂಡರೊಂದಿಗೆ ಪ್ರತಿಭಟನೆ ಹಿಂದಕ್ಕೆ ಪಡೆಯಲು ನಿರಂತರ ಮಾತುಕತೆ ನಡೆಯಿತು. ಆದರೆ, ಕೆಲವರು ಪ್ರತಿಭಟನೆ ಮುಂದುವರಿಸಿದ ಕಾರಣ ಮಧ್ಯಾಹ್ನ 3ಗಂಟೆಯ ನಂತರ ಡಿವೈಎಎಸ್‌ಪಿ ಪಿ.ಕೆ.ಚೌಧರಿ ನೇತೃತ್ವದಲ್ಲಿ ಪೊಲೀಸರು ಪ್ರಯಾಣಿಕರಿಗೆ ತೊಂದರೆ ಆಗದಂತೆ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.

ಮುಖಂಡರಾದ ದಯಾನಂದ ಶೇರಿಕಾರ, ಪ್ರಕಾಶ ಮೂಲಭಾರತಿ, ಮಲ್ಲಿಕಾರ್ಜುನ ಬೋಳಣಿ, ಶಿವಪುತ್ರ ನಡಗೇರಿ, ಬಾಬುರಾವ ಅರಣೋದಯ, ಆನಂದ ಗಾಯಕವಾಡ, ದತ್ತಾ ಅಟ್ಟೂರು, ಜೈಭೀಮ ಡೊಣಿ, ವಿಕ್ರಮ ಅಷ್ಟಗಿ, ಮಹೇಶ ಕೋಚಿ, ಧರ್ಮಾ ಬಂಗರಗಾ, ಲಕ್ಷ್ಮಣ ಝಳಕಿ, ದಿಲೀಪ ಕ್ಷೀರಸಾಗರ, ಆನಂದ ಜಂಗಲೆ, ತುಕರಾಮ ಹೆಬಳಿ, ರಾಜು ಮೊದಲೆ ಇದ್ದರು. ತಾಲ್ಲೂಕಿನ ವಿವಿಧ ದಲಿತಪರ ಸಂಘಟನೆ ಮುಖಂಡರು, ಯುವಕರು ದಿನವೀಡಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಐವತ್ತಕ್ಕೂ ಹೆಚ್ಚು ಕಾರ್ಯಕರ್ತರು ರಾತ್ರಿಯೂ ಸ್ಥಳದಲ್ಲೇ ಪ್ರತಿಭಟನೆ ಮುಂದುವರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT