ಭಾನುವಾರ, ಸೆಪ್ಟೆಂಬರ್ 22, 2019
23 °C

ಗೃಹೋಪಯೋಗಿ ಉತ್ಪನ್ನ ಖರೀದಿ ಆಸಕ್ತಿ

Published:
Updated:
ಗೃಹೋಪಯೋಗಿ ಉತ್ಪನ್ನ ಖರೀದಿ ಆಸಕ್ತಿ

ಬೆಂಗಳೂರು: ಈ ಹಬ್ಬದ ಋತುವಿನಲ್ಲಿ ಗೃಹೋಪಯೋಗಿ ಉತ್ಪನ್ನ ಮತ್ತು ಟೆಲಿವಿಷನ್‌ಗಳ  ಮಾರಾಟದಲ್ಲಿ  ಬೆಂಗಳೂರಿನ ಗ್ರಾಹಕರು ದೇಶದಲ್ಲೇ ಮೊದಲ ಸ್ಥಾನದಲ್ಲಿ ಇದ್ದಾರೆ ಎಂದು ಅಮೆಜಾನ್‌ಡಾಟ್‌ಇನ್ ಪ್ರಕಟಿಸಿದೆ.

2016ರ ಹಬ್ಬದ ಋತುವಿಗೆ ಹೋಲಿಸಿದರೆ ಬೆಂಗಳೂರಿನ ಗ್ರಾಹಕರಿಂದ ಈ ಸರಕುಗಳ ಖರೀದಿಯಲ್ಲಿ ಈ ವರ್ಷ ಮೂರು ಪಟ್ಟು ಹೆಚ್ಚಳ ಕಂಡು ಬಂದಿದೆ.  ಉತ್ಪನ್ನಗಳ ಬೇಡಿಕೆಯ ಆಧಾರದಲ್ಲಿ ಮೈಸೂರು ಎರಡನೇ ಸ್ಥಾನ ಪಡೆದಿದೆ. ಈ ಉತ್ಪನ್ನಗಳ ಖರೀದಿಯಲ್ಲಿ ಎರಡನೇ ಹಂತದ ನಗರಗಳೂ ಮುಂಚೂಣಿಯಲ್ಲಿದ್ದು ಹುಬ್ಬಳ್ಳಿ, ಧಾರವಾಡ ಮತ್ತು ಬೆಳಗಾವಿ ನಗರಗಳ ಗ್ರಾಹಕರಿಂದಲೂ ಗರಿಷ್ಠ ಪ್ರಮಾಣದ ಬೇಡಿಕೆ ವ್ಯಕ್ತವಾಗಿದೆ.

ಅಮೆಜಾನ್‌ಡಾಟ್‌ಇನ್  ಕೊಡುಗೆಗಳಾದ ವಿನಿಮಯ ಮತ್ತು   ಇಎಂಐ ಸೌಲಭ್ಯಗಳನ್ನು ಬಳಸಿಕೊಳ್ಳುವಲ್ಲಿ ಕರ್ನಾಟಕದ ಗ್ರಾಹಕರು ಮುಂಚೂಣಿಯಲ್ಲಿ ಇದ್ದಾರೆ.

ಶೇ 65ರಷ್ಟು ಖರೀದಿಗಳನ್ನು ಡಿಜಿಟಲ್ ಪಾವತಿಯ ಮೂಲಕ ಮಾಡಿರುವುದು ಈ ವಹಿವಾಟಿನ ಇನ್ನೊಂದು ವಿಶೇಷತೆಯಾಗಿದೆ ಎಂದು ಸಂಸ್ಥೆ ತಿಳಿಸಿದೆ.

Post Comments (+)