ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೃಷ್ಟಿಯೊಳಗಿನ ಸೃಷ್ಟಿಕರ್ತ ವಿಶ್ವಕರ್ಮ: ಸ್ವಾಮೀಜಿ

Last Updated 15 ಅಕ್ಟೋಬರ್ 2017, 10:13 IST
ಅಕ್ಷರ ಗಾತ್ರ

ಕೆಂಭಾವಿ: ಸಮಾಜ ಬಾಂಧವರು ವಿಶ್ವಕರ್ಮ ರಾಜ್ಯ ಘಟಕದ ಅಧ್ಯಕ್ಷ ಕೆ.ಪಿ ನಂಜುಂಡಿ ಹೋರಾಟಕ್ಕೆ ಸಹಕಾರ ನೀಡಿ ವಿಶ್ವಕರ್ಮ ಸಂಘಟನೆಯಾಗಿದ್ದರ ಫಲವಾಗಿಯೇ ಇಂದು ಸರ್ಕಾರ ವಿಶ್ವಕರ್ಮ ಜಯಂತಿ ಆಚರಿಸುತ್ತಿದೆ ಎಂದು ಶಹಾಪುರದ ವಿಶ್ವಕರ್ಮ ಏಕದಂಡಗಿ ಮಠದ ಕಾಳಹಸ್ತೇಂದ್ರ ಸ್ವಾಮೀಜಿ ಹೇಳಿದರು.

ಸಮೀಪದ ನಗನೂರು ಗ್ರಾಮದಲ್ಲಿ ಗುರುವಾರ ನಡೆದ ವಿಶ್ವಕರ್ಮ ಪೂಜಾ ಮಹೋತ್ಸವ ಮತ್ತು ವಿಶ್ವಕರ್ಮ ಯುವ ಘಟಕ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದರು.
‘ಸೃಷ್ಟಿಯೊಳಗಿನ ಸೃಷ್ಟಿಕರ್ತ ವಿಶ್ವಕರ್ಮ ಹಾಗೂ ಅನ್ನ ನೀಡುವ ರೈತರನ್ನು ಪ್ರತಿಯೊಬ್ಬರು ನೆನೆಯಬೇಕು’ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಶಂಕ್ರಣ್ಣ ವಣಕಿಹಾಳ ಮಾತನಾಡಿ,‘ರೈತನಿಗೆ ಉಪಕಾರಿಯಾದ ವಿಶ್ವಕರ್ಮ ಸಮಾಜವು ಕಲೆ, ಸಂಸ್ಕಾರ, ಸಂಸ್ಕೃತಿಯಂತಹ ದೈವದತ್ತ ಸಂಪತ್ತನ್ನು ಹೊಂದಿರುವ ಬುದ್ಧಿವಂತ ಸಮಾಜ’ ಎಂದು ಹೇಳಿದರು.

ಹೈದರಾಬಾದ ಕರ್ನಾಟಕ ವಿಶ್ವಕರ್ಮ ಮಹಾಸಭಾ ಸಂಚಾಲಕ ಮೌನೇಶ ಪತ್ತಾರ ಕೆಂಭಾವಿ ಮಾತನಾಡಿ, ಹಿಂದುಳಿದ 103 ಜಾತಿಗಳಲ್ಲಿ ವಿಶ್ವಕರ್ಮ ಸಮುದಾಯಕ್ಕೆ ರಾಜಕೀಯ ಒಳ ಮೀಸಾಲಾತಿ ದೊರೆಯಬೇಕಾಗಿದೆ ವಿಶ್ವಕರ್ಮ ಅಭಿವೃದ್ಧಿ ನಿಗಮಕ್ಕೆ ಹೆಚ್ಚು ಹಣ ಬಿಡುಗಡೆ ಮಾಡಬೇಕು, ಸ್ಥಳಿಯ ಸಂಸ್ಥೆಗಳಲ್ಲಿ ವಿಶ್ವಕರ್ಮ ಸಮುದಾಯಕ್ಕೆ ನಾಮ ನಿರ್ದೇಶನ ಸದಸ್ಯತ್ವ ಸ್ಥಾನಮಾನ ಕಲ್ಪಿಸುವಂತಾಗಬೇಕಾಗಿದೆ ಎಂದು ಹೇಳಿದರು.

ಕಾರ್ಯಕ್ರಮದ ಸಾನಿಧ್ಯವಹಿಸಿದ ಅಜೇಂದ್ರ ಮಹಾಸ್ವಾಮಿಗಳು ಹಾಗೂ ಅಧ್ಯಕ್ಷತೆ ವಹಿಸಿದ ನಗನೂರು ಸೂಗೂರೇಶ್ವರ ಶಿವಾಚಾರ್ಯರು ಮಾತನಾಡಿದರು.
ನಗನೂರು ದಾಸೋಹ ಮಠದ ಶರಣಪ್ಪ ಶರಣರು ನೇತೃತ್ವ ವಹಿಸಿದ್ದರು. ಶಿವರಾಜ್ ಸಾಹು ಬೂದೂರ್ ಉದ್ಘಾಟಿಸಿದರು.

ಮುಖಂಡರಾದ ಅಶೋಕ ಗೂಗಲ್, ರಾವ್ ಸಾಹೇಬ್ ದೇಸಾಯಿ, ಶ್ವೇತಾ ಅಪ್ಪಾಗೋಳ, ಹಳ್ಳೆಪ್ಪ ಹವಲ್ದಾರ್, ವಿಶ್ವಕರ್ಮ ಸಮುದಾಯದ ಅಭಿವೃದ್ಧಿ ನಿಗಮದ ನಾಮನಿರ್ದೇಶಿತ ಸದಸ್ಯ ದೇವಿಂದ್ರ ವಿಶ್ವಕರ್ಮ, ನಗನೂರು ಯುವ ಘಟಕದ ಅಧ್ಯಕ್ಷ ಮನೋಹರ ವಿಶ್ವಕರ್ಮ ಏವೂರ, ಮಹೇಶ ವಿಶ್ವಕರ್ಮ ಶಾರದಳ್ಳಿ, ಜಿಲ್ಲಾ ಗೌರವ ಅಧ್ಯಕ್ಷ ದೇವಿಂದ್ರ ವಿಶ್ವಕರ್ಮ, ಶಹಾಪುರ ತಾಲ್ಲೂಕು ಅಧ್ಯಕ್ಷ ಶಂಕರ ಘತ್ತರಗಿ, ಶಿವಣ್ಣ ಹೂನೂರ, ಬಸವರಾಜ ಸೈದಾಪೂರ, ನಾಗಭೂಷಣ ವಿಶ್ವಕರ್ಮ, ಶರಣು ವಿಶ್ವಕರ್ಮ, ವೀರಭದ್ರ ಬಡಿಗೇರ ಭಾಗವಹಿಸಿದ್ದರು. ವಿವಿಧ ವಾದ್ಯ ಮೇಳಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳ ಮೂಲಕ ವಿಶ್ವಕರ್ಮ ಭಾವಚಿತ್ರ ಮೆರವಣಿಗೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT