ಶನಿವಾರ, ಸೆಪ್ಟೆಂಬರ್ 21, 2019
24 °C

ಸ್ವತಂತ್ರ ಧರ್ಮ ಮಾನ್ಯತೆ: ದಾವಣಗೆರೆಯಲ್ಲಿ ಸಭೆ

Published:
Updated:

ದಾವಣಗೆರೆ: ವೀರಶೈವ–ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆ ಸಂಬಂಧ ತಜ್ಞರ ಸಮಿತಿ ರಚಿಸುವ ವಿಚಾರವಾಗಿ ನಗರದ ರೇಣುಕಾ ಮಂದಿರದಲ್ಲಿ ರಂಭಾಪುರಿ ಪೀಠದ ಪ್ರಸನ್ನ ರೇಣುಕಾ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಭಾನುವಾರ ಸಂಜೆ ಸುಮಾರು ಎರಡು ಗಂಟೆ ಸಭೆ ನಡೆಯಿತು.

ಹಾಲಕೆರೆ ಅನ್ನದಾನೀಶ್ವರ ಸಂಸ್ಥಾನ ಮಠದ ಅಭಿನವ ಅನ್ನದಾನ ಸ್ವಾಮೀಜಿ ಹಾಗೂ ರಂಭಾಪುರಿ ಶ್ರೀಗಳು ದೀರ್ಘಕಾಲದ ಬಳಿಕ ಒಂದೇ ವೇದಿಕೆಯಲ್ಲಿ ಚರ್ಚೆ ನಡೆಸಿದ್ದು ವಿಶೇಷವಾಗಿತ್ತು. ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ, ಉಪಾಧ್ಯಕ್ಷರಾದ ಅಥಣಿ ವೀರಣ್ಣ, ಎ.ಸಿ.ಜಯಣ್ಣ, ಅಣಬೇರು ರಾಜಣ್ಣ, ಎಸ್‌.ಎಸ್‌.ಗಣೇಶ್‌ ಹಾಗೂ ವೀರಶೈವ ಸಮಾಜದ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.

ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅಥಣಿ ವೀರಣ್ಣ, ‘ಸ್ವತಂತ್ರ ಧರ್ಮ ಮಾನ್ಯತೆಗೆ ಸಂಬಂಧಿಸಿದಂತೆ ಉಭಯ ಬಣಗಳಿಂದ ತಜ್ಞರ ಸಮಿತಿ ರಚನೆ ವಿಚಾರವಾಗಿ ಚರ್ಚಿಸಲಾಯಿತು. ಉಭಯ ಬಣದವರು ಶೀಘ್ರ ತಜ್ಞರ ಸಮಿತಿ ರಚಿಸಿ ವೀರಶೈವ ಮಹಾಸಭಾದ ಅಧ್ಯಕ್ಷರಿಗೆ ವರದಿ ಸಲ್ಲಿಸಲು ನಿರ್ಧರಿಸಲಾಯಿತು’ ಎಂದರು.

Post Comments (+)