ಪಾಕಿಸ್ತಾನದ ಬಾಲಕಿಗೆ ವೀಸಾ ನೀಡಲು ಸುಷ್ಮಾ ಸ್ವರಾಜ್ ಸೂಚನೆ

ಭಾನುವಾರ, ಜೂನ್ 16, 2019
28 °C

ಪಾಕಿಸ್ತಾನದ ಬಾಲಕಿಗೆ ವೀಸಾ ನೀಡಲು ಸುಷ್ಮಾ ಸ್ವರಾಜ್ ಸೂಚನೆ

Published:
Updated:
ಪಾಕಿಸ್ತಾನದ ಬಾಲಕಿಗೆ ವೀಸಾ ನೀಡಲು ಸುಷ್ಮಾ ಸ್ವರಾಜ್ ಸೂಚನೆ

ನವದೆಹಲಿ: ಕಣ್ಣಿನ ಕ್ಯಾನ್ಸರ್‌ಗೆ ತುತ್ತಾಗಿರುವ ಐದು ವರ್ಷ ವಯಸ್ಸಿನ, ಪಾಕಿಸ್ತಾನದ ಬಾಲಕಿಗೆ ಚಿಕಿತ್ಸೆಗಾಗಿ ಭಾರತಕ್ಕೆ ಬರಲು ವೀಸಾ ನೀಡುವಂತೆ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳಿಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸೂಚಿಸಿದ್ದಾರೆ. ಬಾಲಕಿಯ ಪಾಲಕರು ಸುಷ್ಮಾ ಅವರ ಬಳಿ ನೆರವು ಕೋರಿದ್ದರು.

‘ಕಣ್ಣಿನ ಕ್ಯಾನ್ಸರ್‌ನಿಂದ ಬಳಲುತ್ತಿರುವ 5 ವರ್ಷದ ಬಾಲಕಿ ಅನಮ್ತಾ ಫಾರುಕ್‌ಗೆ ವೀಸಾ ನೀಡಬೇಕೆಂಬ ಮನವಿ ಮಾಡಲಾಗಿತ್ತು. ತಕ್ಷಣವೇ ವೀಸಾ ನೀಡುವಂತೆ ಸೂಚಿಸಿದ್ದೇನೆ’ ಎಂದು ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿದ್ದಾರೆ.

ಮೂಳೆ ಮಜ್ಜೆಯ ಕಸಿ ಚಿಕಿತ್ಸೆಗೆ ಒಳಗಾಗಲಿರುವ ಪಾಕಿಸ್ತಾನದ ಬಾಲಕನೊಬ್ಬನಿಗೂ ವೀಸಾ ನೀಡಲು ಸುಷ್ಮಾ ಸೂಚಿಸಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry