ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೇಳಿಕೆ ಖಂಡನೀಯ

Last Updated 17 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಮುಂದಿನ ತಿಂಗಳು ಮೈಸೂರಿನಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಗೆ ಆಯ್ಕೆಯಾಗಿರುವ ಚಂದ್ರಶೇಖರ ಪಾಟೀಲರು ಈಚೆಗೆ ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡುತ್ತ, ‘ಸ್ವಾತಂತ್ರ್ಯ ಬಂದಾಗಿನಿಂದ ಬ್ರಾಹ್ಮಣ– ಬನಿಯಾಗಳೇ ದೇಶದ ಆಳ್ವಿಕೆ ನಡೆಸುವ ಮೂಲಕ ದೇಶದಲ್ಲಿ ನಡೆಯುತ್ತಿರುವ ಅನಾಹುತಗಳಿಗೆ ಸಾಕ್ಷಿಯಾಗಿ ನಿಂತಿದ್ದಾರೆ’ ಎಂದು ಹೇಳಿರುವುದು ತೀವ್ರ ಖಂಡನೀಯ.

ರಾಮಕೃಷ್ಣ ಪರಮಹಂಸ, ಅರಬಿಂದೊ, ರಮಣ ಮಹರ್ಷಿ ಇಂತಹ ಸಂತರನ್ನು; ನೆಹರೂ, ಶಾಸ್ತ್ರಿ, ರಾಮಕೃಷ್ಣ ಹೆಗಡೆ ಇಂತಹ ಮುತ್ಸದ್ದಿಗಳನ್ನು ನೀಡಿರುವುದು ಬ್ರಾಹ್ಮಣ ಸಮಾಜ.

ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿಗಳನ್ನು ತಂದುಕೊಟ್ಟ ಗೋಕಾಕ್‌, ಅನಂತಮೂರ್ತಿ, ಗಿರೀಶ ಕಾರ್ನಾಡ ಅವರು ಹುಟ್ಟಿನಿಂದ ಬ್ರಾಹ್ಮಣರೇ. ನನ್ನ ಗುರುಗಳಾಗಿದ್ದ ತೀ.ನಂ.ಶ್ರೀ., ಡಿ.ಎಲ್‌.ಎನ್‌., ಕ.ವೆಂ.ರಾ. ಹಾಗೆಯೇ ಅವರಿಗಿಂತ ಹಿರಿಯರಾಗಿದ್ದ ಆರ್‌. ನರಸಿಂಹಾಚಾರ್‌, ಎಸ್‌.ಜಿ. ನರಸಿಂಹಾಚಾರ್‌ ಇವರೇ ಮೊದಲಾದವರು ಅದೇ ವರ್ಗದವರು.

ಈ ಪಟ್ಟಿಯನ್ನು ಬೆಳೆಸಬಹುದು. ಅವರು ಹುಟ್ಟಿನಿಂದ ಬ್ರಾಹ್ಮಣರಾಗಿದ್ದರೂ ಅದನ್ನು ಮೀರಿ ಬೆಳೆದವರು; ಭಾರತವನ್ನು, ಕರ್ನಾಟಕವನ್ನು, ಕನ್ನಡ ಭಾಷೆಯನ್ನು ಬೆಳೆಸಿದವರು. ಹೀಗಿರುವಾಗ ಒಂದು ಜಾತಿ ಅಥವಾ ವರ್ಗವನ್ನೇ ಅವಹೇಳನ ಮಾಡಿರುವುದು ಚಂಪಾ ಅವರಿಗೆ ತಕ್ಕುದಲ್ಲ. ಅವರು ಖಂಡಿಸುವುದಿದ್ದರೆ ವ್ಯಕ್ತಿಗಳನ್ನು, ಅವರ ದೌರ್ಬಲ್ಯ–ಅಕೃತ್ಯಗಳನ್ನು ನೇರವಾಗಿ ಬಯಲು ಮಾಡಲಿ. ಸದ್ಗುಣ, ಅಕೃತ್ಯ, ದಾಷ್ಟ್ಯ ಇವು ಯಾವುದೇ ವರ್ಗಕ್ಕೆ ಸೀಮಿತವಲ್ಲ ಎಂಬುದನ್ನು ಚಂಪಾ ಅವರಿಗೆ ತಿಳಿಸಿದರೂ ಪ್ರಯೋಜನವಿಲ್ಲ. ಕೆಟ್ಟ ಮನಸ್ಸಿನ ಕೆಟ್ಟ ಮಾತು, ವ್ಯಂಗ್ಯ ಅವರ ಸ್ವಭಾವದ ಭಾಗವೇ ಆಗಿದೆ ಎಂಬುದನ್ನು ಹಲವರು ಬಲ್ಲರು.

ಡಾ. ಎಂ . ಚಿದಾನಂದಮೂರ್ತಿ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT