ದೇಹದ ತೂಕ ಇಳಿಸಲು ಉಪವಾಸ ಕ್ರಮ: 16 ವಾರಗಳ ಸಂಶೋಧನೆ

ಮಂಗಳವಾರ, ಜೂನ್ 18, 2019
25 °C
ಎರಡು ದಿನಗಳ ಬಳಿಕ ಒಂದು ದಿನದ ಉಪವಾಸ

ದೇಹದ ತೂಕ ಇಳಿಸಲು ಉಪವಾಸ ಕ್ರಮ: 16 ವಾರಗಳ ಸಂಶೋಧನೆ

Published:
Updated:
ದೇಹದ ತೂಕ ಇಳಿಸಲು ಉಪವಾಸ ಕ್ರಮ: 16 ವಾರಗಳ ಸಂಶೋಧನೆ

ವಾಷಿಂಗ್ಟನ್‌: ಬಿಡುವಿಲ್ಲದ ನಿತ್ಯದ ಬದುಕಿನಲ್ಲಿ ಆಹಾರ ಕ್ರಮದ ಕಡೆಗೆ ಗಮನಿಸಲಾಗದೆ ಬೊಜ್ಜು, ಅಜೀರ್ಣ ಸಮಸ್ಯೆ ಹೆಚ್ಚುತ್ತಿದೆ. ಎರಡು ದಿನ ಬಿಟ್ಟು ಒಂದು ದಿನದ ಉಪವಾಸ ಆಚರಣೆ ನಡೆಸುವುದು ಇದಕ್ಕೆ ಪರಿಹಾರ ಎಂದು ಅಧ್ಯಯನವೊಂದು ತಿಳಿಸಿದೆ.

ನಿರಂತರ 16 ವಾರಗಳವರೆಗೆ ಪ್ರತಿ ಎರಡು ದಿನಗಳ ನಂತರ ಒಂದು ದಿನ ಉಪವಾಸ ಮಾಡಿದರೆ ದೇಹದಲ್ಲಿ ಆಗುವ ಬದಲಾವಣೆ ಗಮನಕ್ಕೆ ಬರುತ್ತದೆ. ಆಹಾರ ಕ್ರಮದಲ್ಲಿ ಆಗುವ ಏರು–ಪೇರಿನಿಂದ ಉಂಟಾದ ಅಜೀರ್ಣ ಹಾಗೂ ಬೊಜ್ಜಿನ ಸಮಸ್ಯೆಯಿಂದ ಮುಕ್ತಿ ಸಿಗುತ್ತದೆ ಎನ್ನುತ್ತಾರೆ ಸಂಶೋಧಕರು.

ಕೆನಡಾ ಸಂಶೋಧಕರ ತಂಡ ಇಲಿಗಳ ಮೇಲಿನ ನಡೆಸಿರುವ ಪ್ರಯೋಗದಿಂದ ಇದು ಸಾಬೀತಾಗಿದೆ. ನಿಗದಿತ ಉಪವಾಸದಿಂದಾಗಿ ಪಚನಕ್ರಿಯೆ ನಿಯಂತ್ರಣಕ್ಕೆ ಬರುತ್ತದೆ ಹಾಗೂ ದೇಹದಲ್ಲಿ ಉಷ್ಣತೆ ಹೆಚ್ಚಿ ಕೊಬ್ಬಿನಾಂಶ ಕರಗುತ್ತದೆ ಎಂದಿದ್ದಾರೆ.

ನೀಡುವ ಆಹಾರದಲ್ಲಿ ಯಾವುದೇ ಬದಲಾವಣೆ ಮಾಡದೆ 16 ವಾರಗಳು ನಿಗದಿತ ಉಪವಾಸ ಕ್ರಮವನ್ನು ಕೆಲವು ಇಲಿಗಳ ಮೇಲೆ ಪ್ರಯೋಗಿಸಿದ್ದಾರೆ. ಮತ್ತೊಂದು ಕಡೆ ನಿತ್ಯವೂ ಸಮಾನ ಪ್ರಮಾಣದ ಆಹಾರ ಸೇವಿಸುತ್ತಿರುವ ಇಲಿಗಳನ್ನು ಗಮನಿಸಲಾಗಿದೆ.

ನಾಲ್ಕು ತಿಂಗಳ ಬಳಿಕ ಉಪವಾಸ ಕ್ರಮದಲ್ಲಿದ್ದ ಇಲಿಗಳ ತೂಕದಲ್ಲಿ ಇಳಿಕೆಯಾಗಿದೆ ಹಾಗೂ ಆರೋಗ್ಯ ದೃಢವಾಗಿರುವುದನ್ನು ಗಮನಿಸಲಾಗಿದೆ. ಹಾಗಾಗಿ, ಸೇವಿಸುವ ಆಹಾರದಲ್ಲಿನ ಕ್ಯಾಲೋರಿ ಪ್ರಮಾಣವನ್ನು ಪರಿಗಣಿಸದೆ ಉಪವಾಸ ಕ್ರಮದಿಂದಲೂ ದೇಹದ ತೂಕ ಇಳಿಸುವುದು ಸಾಧ್ಯ ಎನ್ನಲಾಗಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry