ಹಾಸನದ ಸ್ನೇಹ ಮಿಸ್ ಗ್ರ್ಯಾಂಡ್ ಸೌತ್ ಇಂಡಿಯಾ

ಬುಧವಾರ, ಜೂನ್ 19, 2019
28 °C
ಜೆಪ್ಪಿನಮೊಗರುವಿನಲ್ಲಿ ಮಿಸ್ ಗ್ರೌಂಡ್ ಸೌತ್ ಇಂಡಿಯಾ-2017 ಸೌಂದರ್ಯ ಸ್ಪರ್ಧೆ

ಹಾಸನದ ಸ್ನೇಹ ಮಿಸ್ ಗ್ರ್ಯಾಂಡ್ ಸೌತ್ ಇಂಡಿಯಾ

Published:
Updated:
ಹಾಸನದ ಸ್ನೇಹ ಮಿಸ್ ಗ್ರ್ಯಾಂಡ್ ಸೌತ್ ಇಂಡಿಯಾ

ಉಳ್ಳಾಲ: ಮಂಗಳೂರಿನ ಆರ್ಟ್ ಬ್ಯಾಟಲ್ ಸಂಸ್ಥೆ ನಡೆಸಿದ ಮಿಸ್ಟರ್ ಆ್ಯಂಡ್ ಮಿಸ್ ಗ್ರ್ಯಾಂಡ್‌ ಸೌತ್ ಇಂಡಿಯಾ-2017 ಸೌಂದರ್ಯ ಸ್ಪರ್ಧೆಯಲ್ಲಿ ಮಿಸ್ ಗ್ರ್ಯಾಂಡ್ ಸೌತ್ ಇಂಡಿಯಾ ಆಗಿ ಹಾಸನದ ಸ್ನೇಹಾ ಹಾಗೂ ಮಿಸ್ಟರ್ ಗ್ರ್ಯಾಂಡ್ ಸೌತ್ ಇಂಡಿಯಾ ಆಗಿ ಬೆಂಗಳೂರಿನ ಕೌಶಲ್ ಚೌಧರಿ ವಿಜೇತರಾಗಿದ್ದಾರೆ.

ಜೆಪ್ಪಿನಮೊಗರು ರಿವರ್ ಡೇಲ್‌ನಲ್ಲಿ ನಡೆದ ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ, ಬೆಂಗಳೂರು, ತೆಲಂಗಾಣ, ಆಂಧ್ರ, ಗೋವಾ ಕೇರಳ ಹಾಗೂ ತಮಿಳುನಾಡಿನಿಂದ ಭಾಗವಹಿಸಿದ್ದ ಸ್ಪರ್ಧಿಗಳ ಪೈಕಿ ಈ ಇಬ್ಬರು ವಿಜೇತರಾಗಿದ್ದಾರೆ.

ಮಿಸ್ ಗ್ರ್ಯಾಂಡ್ ಸೌತ್ ಇಂಡಿಯಾದ ಮೊದಲ ರನ್ನರ್ ಅಪ್ ಆಗಿ ಮಂಗಳೂರಿನ ಬಿಂದು ಶೆಟ್ಟಿ, ಎರಡನೇ ರನ್ನರ್ ಅಪ್‌ ಆಗಿ ಮಂಗಳೂರಿನ ಆಶಿಕಾ, ಮಿಸ್ಟರ್ ಗ್ರ್ಯಾಂಡ್‌ ಸೌತ್ ಇಂಡಿಯಾದ ಮೊದಲ ರನ್ನರ್ ಅಪ್ ಆಗಿ ಬೆಂಗಳೂರಿನ ಸ್ಟೀಫನ್ ಮತ್ತು ಚಂದ್ರು, ಎರಡನೇ ರನ್ನರ್‌ ಅಪ್‌ ಆಗಿ ಬೆಂಗಳೂರಿನ ಕಾರ್ತಿಕ್ ಅಯ್ಕೆಯಾಗಿದ್ದಾರೆ.

ಮಂಗಳೂರಿನ ಮಹಮ್ಮದ್ ಸಲೀಂ ಅವರಿಗೆ ‘ಮಿಸ್ಟರ್ ಕೇರಳ’ ಬಹುಮಾನ ಲಭಿಸಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry