ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋಡಬಿತ್ತನೆ ವಿಜ್ಞಾನದ ಗೆಲುವು: ಎಚ್‌.ಕೆ ಪಾಟೀಲ

Last Updated 19 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಗಜೇಂದ್ರಗಡ: ‘ರಾಜ್ಯದಲ್ಲಿ ಮೋಡಬಿತ್ತನೆಯಿಂದ ಉತ್ತಮ ಮಳೆಯಾಗಿದ್ದು, ಇದು ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂದ ಗೆಲುವು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಕೆ.ಪಾಟೀಲ ಹೇಳಿದರು.

ಪಟ್ಟಣದಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ‘ಮೋಡಬಿತ್ತನೆ ಪರಿಣಾಮದ ಕುರಿತು ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ ಅವರನ್ನೇ ಕೇಳಬಹುದು. ಅವರು ಪದೇ ಪದೇ ಮಳೆ ಎಲ್ಲಿದೆ ಎಂದು ಕೇಳುತ್ತಿದ್ದರು. ಕೊನೆಗೆ ಅವರೇ ಮಳೆಯಿಂದ ನೆನೆದುಕೊಂಡು ಮನೆ ಸೇರುವಂತಾಯಿತು’ ಎಂದು ವ್ಯಂಗ್ಯವಾಡಿದರು.

‘ವೈಜ್ಞಾನಿಕ ಪ್ರಗತಿಯ ಬಗ್ಗೆ ಅರಿವುಳ್ಳವರು ಮೋಡಬಿತ್ತನೆ ಅಲ್ಲಗಳೆಯಲಾರರು. ಇದು ಪಾರದರ್ಶಕವಾಗಿ ನಡೆದಿದೆ. ಕತ್ತೆ ಮದುವೆ, ಕಪ್ಪೆ ಮದುವೆಯಿಂದ ಮಳೆ ಬರುತ್ತದೆ ಎಂಬ ಮೋಢನಂಬಿಕೆ ಹೊಂದಿದವರು ಇದನ್ನು ವಿರೋಧಿಸುವುದು ಸಹಜ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT