5

ಮನದ ನೆಮ್ಮದಿಯ ದಿಕ್ಕು

Published:
Updated:
ಮನದ ನೆಮ್ಮದಿಯ ದಿಕ್ಕು

ಮನೆಯಲ್ಲಿ ಸುಖ, ಶಾಂತಿ ನೆಲೆಸಿರಬೇಕೆಂದರೆ ವಾಸ್ತುವಿಗೆ ಮಹತ್ವ ನೀಡಬೇಕು. ಇದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ಇರುತ್ತದೆ. ಮನೆಮಂದಿಯ ಮನಸ್ಸಿನಲ್ಲಿ ಗೊಂದಲವಿರುವುದಿಲ್ಲ ಎನ್ನುತ್ತದೆ ವಾಸ್ತುಶಾಸ್ತ್ರ.

ಮನೆಯ ಪೂರ್ವ ದಿಕ್ಕಿಗೆ ಬಚ್ಚಲು ಮನೆಯಿರಲಿ. ದಕ್ಷಿಣಕ್ಕೆ ಮಲಗುವ ಕೋಣೆಯಿರಲಿ.

ಮನೆಯ ಪೂರ್ವ, ಪಶ್ಚಿಮ, ಉತ್ತರ ದಿಕ್ಕುಗಳಲ್ಲಿ ಬಾವಿ ತೋಡಿಸಿದರೆ ಆ ಮನೆಯಲ್ಲಿ ಧನಲಕ್ಷ್ಮಿ ನೆಲೆಸುತ್ತಾಳೆ.

ಪೂರ್ವ ದಿಕ್ಕು ಶ್ರೇಯಸ್ಸಿಗೆ ಪೂರಕ. ಹೀಗಾಗಿ ಮುಖ್ಯದ್ವಾರ ಪೂರ್ವ ದಿಕ್ಕಿಗಿರಲಿ. ಸೂರ್ಯನ ಎಳೆ ಬಿಸಿಲು ಮನೆ ಒಳಗೆ ಪ್ರವೇಶಿಸುವುದರಿಂದ ಧನಾತ್ಮಕ ಶಕ್ತಿ ಮನೆ ಒಳಗೆ ಹರಿದಾಡುತ್ತದೆ.

ಮಲಗುವ ಕೋಣೆಯಲ್ಲಿ ಕನ್ನಡಿಯಿದ್ದರೆ ಆರೋಗ್ಯ ಹದಗೆಡುತ್ತದೆ. ಕನ್ನಡಿ ಸೇರಿದಂತೆ ಪ್ರತಿಬಿಂಬ ತೋರಿಸುವ ಯಾವುದೇ ವಸ್ತುವಿದ್ದರೂ  ಮಲಗುವ ಸಮಯದಲ್ಲಿ ಅದನ್ನು ಮುಚ್ಚಿಡಬೇಕು.

ಹೂ ಕುಂಡಗಳು ಸಕಾರಾತ್ಮಕ ಶಕ್ತಿ ಒದಗಿಸುವ ಅತಿದೊಡ್ಡ ಮೂಲ. ಹಾಗೆಂದು ಎಲ್ಲಾ ಗಿಡಗಳೂ ವಾಸ್ತುಸ್ನೇಹಿ ಆಗಿರುವುದಿಲ್ಲ. ಕ್ಯಾಕ್ಟಸ್‌, ರಬ್ಬರ್‌ನಂಥ ಗಿಡಗಳಿಗೆ ಮನೆಯಲ್ಲಿ ಜಾಗ ಬೇಡ.

ಮನೆಯ ಈಶಾನ್ಯ ದಿಕ್ಕಿನಲ್ಲಿ ಸಣ್ಣ ನೀರಿನ ಕಾರಂಜಿ ಇಟ್ಟರೆ ಮನೆ ಮಂದಿಯ ನಡುವೆ ಸಾಮರಸ್ಯ ಇರುತ್ತದೆ.

ಮನೆಯಲ್ಲಿ ಪಿರಮಿಡ್‌ ಇಡುವುದರಿಂದ ಸಮಸ್ಯೆಗಳು ಕಡಿಮೆಯಾಗುತ್ತದೆ.

ಅನಾವಶ್ಯಕ ವಸ್ತುಗಳನ್ನು ಕೆಲವರು ಮನೆಯಲ್ಲಿ ಇರಿಸುತ್ತಾರೆ. ಇದರಿಂದ ಹಣಕಾಸು ಮುಗ್ಗಟ್ಟು ಎದುರಾಗುತ್ತದೆ.

ಚಿಕ್ಕ ಗಂಟೆಗಳ ನಾದ ಕಿವಿಗೆ ಇಂಪು ನೀಡುತ್ತದೆ. ಹೀಗಾಗಿ ದೇವರ ಕೋಣೆಯ ಬಾಗಿಲಿಗೆ ಚಿಕ್ಕ ಗಂಟೆಗಳನ್ನು ಅಳವಡಿಸಿ.

(ಆಧಾರ: ವಾಸ್ತುಶಾಸ್ತ್ರ .ಕಾಮ್‌)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry