ಬುಧವಾರ, ಸೆಪ್ಟೆಂಬರ್ 18, 2019
21 °C

ಬೈಕ್‌ನಿಂದ ಬಾಲಕಿಗೆ ಗುದ್ದಿ ತಲೆಮರೆಸಿಕೊಂಡಿದ್ದವ ಸೆರೆ

Published:
Updated:

ಬೆಂಗಳೂರು: ಮಾರನಾಯಕನಹಳ್ಳಿ ಕಾಲೊನಿಯಲ್ಲಿ ಬೈಕ್ ಡಿಕ್ಕಿಯಾಗಿ ಬಾಲಕಿ ಸಹನಾ(7) ಮೃತಪಟ್ಟ ಪ್ರಕರಣ ಸಂಬಂಧ ಸವಾರ ರಾಜು (18) ಅಲಿಯಾಸ್ ಬಂಗಾರಿಯನ್ನು ಚಿಕ್ಕಜಾಲ ಪೊಲೀಸರು ಬಂಧಿಸಿದ್ದಾರೆ.

ಬಾಲಕಿ ಪೋಷಕರು ಶುಕ್ರವಾರ ಠಾಣೆಗೆ ದೂರು ಕೊಟ್ಟಿದ್ದಾರೆ. ಪ್ರಕರಣ ದಾಖಲಿಸಿಕೊಂಡಿದ್ದು, ಮಾರನಾಯಕನಹಳ್ಳಿಯ ಅತ್ತೆ ಮನೆಯಲ್ಲಿ ಅಡಗಿದ್ದ ಆತನನ್ನು ಬಂಧಿಸಿದ್ದೇವೆ ಎಂದು ಪೊಲೀಸರು ತಿಳಿಸಿದರು. ರಾಜು ವಾಹನ ಚಾಲನಾ ಪರವಾನಗಿ ಹೊಂದಿಲ್ಲ. ತಂದೆಗೆ ಮಾಹಿತಿ ನೀಡದೆಯೇ ಬೈಕ್ ಓಡಿಸಿಕೊಂಡು ಬಂದಿದ್ದ. ಆಗ ಅಪ‍ಘಾತ ಸಂಭವಿಸಿದೆ. ಆರೋಪಿಯ ತಂದೆಯ ಹೆಸರಿನಲ್ಲಿ ಬೈಕ್  ನೋಂದಣಿಯಾಗಿದ್ದು, ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದೇವೆ ಎಂದರು.

ಕಾಲೊನಿಯ ನಿವಾಸಿ ವೆಂಕಟೇಶ್ ಎಂಬುವರ ಮಗಳಾದ ಸಹನಾ ಗುರುವಾರ ಸಂಜೆ ಮನೆ ಮುಂದೆ ನಿಂತು ಪಟಾಕಿ ಸಿಡಿಸುವುದನ್ನು ನೋಡು

ತ್ತಿದ್ದಳು. ಈ ವೇಳೆ ಅಡ್ಡಾದಿಡ್ಡಿ ಬೈಕ್ ಓಡಿಸಿಕೊಂಡು ಬಂದ ರಾಜು ಆಕೆಗೆ ಗುದ್ದಿ ಪರಾರಿಯಾಗಿದ್ದ. ಚಿಕಿತ್ಸೆಗೆ ಸ್ಪಂದಿಸದೆ ಆಕೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ.

Post Comments (+)