ಗುಜರಾತ್‌ ಚುನಾವಣೆ ದಿನಾಂಕ ಪ್ರಕಟವಾದರೆ ಪ್ರವಾಹ ಪರಿಹಾರ ಕಾರ್ಯಗಳಿಗೆ ಅಡ್ಡಿ: ಚುನಾವಣಾ ಆಯೋಗ

ಶುಕ್ರವಾರ, ಮೇ 24, 2019
29 °C

ಗುಜರಾತ್‌ ಚುನಾವಣೆ ದಿನಾಂಕ ಪ್ರಕಟವಾದರೆ ಪ್ರವಾಹ ಪರಿಹಾರ ಕಾರ್ಯಗಳಿಗೆ ಅಡ್ಡಿ: ಚುನಾವಣಾ ಆಯೋಗ

Published:
Updated:
ಗುಜರಾತ್‌ ಚುನಾವಣೆ ದಿನಾಂಕ ಪ್ರಕಟವಾದರೆ ಪ್ರವಾಹ ಪರಿಹಾರ ಕಾರ್ಯಗಳಿಗೆ ಅಡ್ಡಿ: ಚುನಾವಣಾ ಆಯೋಗ

ನವದೆಹಲಿ: ಗುಜರಾತ್‌ ಚುನಾವಣೆ ದಿನಾಂಕ ಪ್ರಕಟಣೆ ತಡವಾಗಿರುವ ಕುರಿತು ಚುನಾವಣಾ ಆಯೋಗ ಮೌನ ಮುರಿದಿದೆ. ಚುನಾವಣಾ ನೀತಿ ಸಂಹಿತೆ ಜಾರಿಯಾದರೆ ಗುಜರಾತ್‌ನಲ್ಲಿ ಪ್ರವಾಹ ಪರಿಹಾರ ಕಾರ್ಯಗಳಿಗೆ ಅಡ್ಡಿ ಉಂಟಾಗಲಿದೆ ಎಂದು ಪ್ರತಿಕ್ರಿಯಿಸಿದೆ.

ಅ.9 ಮತ್ತು 10ರಂದು ಚುನಾವಣಾ ಆಯೋಗದ ಅಧಿಕಾರಿಗಳು ಗುಜರಾತ್‌ ಭೇಟಿ ನೀಡಿದ್ದು, ಅಲ್ಲಿನ ಪರಿಸ್ಥಿತಿ ಅವಲೋಕಿಸಿದ್ದಾರೆ. ಪ‍್ರವಾಹ ಪರಿಸ್ಥಿತಿ ಎದುರಿಸಿರುವ ಜಿಲ್ಲೆಗಳಿಂದ ಮಾಹಿತಿ ಪಡೆಯಲಾಗಿದ್ದು, ಚುನಾವಣೆ ನೀತಿ ಸಂಹಿತೆ ಜಾರಿಯಾದರೆ ಪರಿಹಾರ ಕಾರ್ಯಗಳಿಗೆ ಅಡ್ಡಿಯಾಗಲಿದೆ ಎಂದು ಚುನಾವಣಾ ಆಯುಕ್ತ ಒ.ಪಿ.ರಾವತ್‌ ತಿಳಿಸಿರುವುದಾಗಿ ಔಟ್‌ಲುಕ್‌ ವೆಬ್‌ಸೈಟ್‌ ವರದಿ ಮಾಡಿದೆ.

ಗುಜರಾತ್‌ ವಿಧಾನಸಭೆ ಚುನಾವಣೆಯ ದಿನಾಂಕ ನಿಗದಿ ಮಾಡುವ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಹಿಸಿ ಚುನಾವಣಾ ಆಯೋಗ ‘ದೀರ್ಘ ರಜೆ’ಯಲ್ಲಿ ತೆರಳಿದೆ ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡ ಪಿ. ಚಿದಂಬರಂ ಟ್ವಿಟರ್‌ ಮೂಲಕ ಟೀಕಿಸಿದ್ದರು.

‘ತಮ್ಮ ರ‍್ಯಾಲಿಯಲ್ಲಿ ಗುಜರಾತ್‌ ಚುನಾವಣೆಯ ದಿನಾಂಕ ಘೋಷಿಸಲು ಪ್ರಧಾನಿಗೆ ಅವಕಾಶ ಕೊಡಲಾಗಿದೆ ಮತ್ತು ದಿನಾಂಕವನ್ನು ದಯವಿಟ್ಟು ನಮಗೆ ತಿಳಿಸಿ ಎಂದು ಆಯೋಗ ಹೇಳಿದೆ’ ಎಂದು ಆಯೋಗದ ಬಗ್ಗೆ ವ್ಯಂಗ್ಯವಾಡಿದ್ದರು.

ಅ.12ರಂದು ಹಿಮಾಚಲ ಪ್ರದೇಶ ಹಾಗೂ ಗುಜರಾತ್‌ ರಾಜ್ಯಗಳ ಚುನಾವಣೆ ದಿನಾಂಕ ಪ್ರಕಟಣೆ ನಿಗದಿಯಾಗಿತ್ತಾದರೂ ಚುನಾವಣಾ ಆಯೋಗ ಹಿಮಾಚಲ ಪ್ರದೇಶ ಚುನಾವಣೆ ಕುರಿತ ವಿವರ ಮಾತ್ರ ಘೋಷಿಸಿತ್ತು. ಹಿಮಾಚಲ ಪ್ರದೇಶ ಚುನಾವಣೆಯ ಫಲಿತಾಂಶಕ್ಕೂ(ಡಿ.18) ಮುನ್ನ ಗುಜರಾತ್‌ ಚುನಾವಣೆ ನಡೆಸುವುದಾಗಿ ಮುಖ್ಯ ಚುನಾವಣಾ ಆಯುಕ್ತ ಎ.ಕೆ.ಜ್ಯೋತಿ ಹೇಳಿದ್ದರು.

ಮೂಲ ವರದಿ ಲಿಂಕ್‌: ಔಟ್‌ಲುಕ್‌ ವೆಬ್‌ಸೈಟ್‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry