ರಸ್ತೆಯುದ್ದಕ್ಕೂ ಗುಂಡಿಗಳು, ಪ್ರಯಾಣವೇ ಪ್ರಯಾಸ

ಬುಧವಾರ, ಜೂನ್ 19, 2019
27 °C

ರಸ್ತೆಯುದ್ದಕ್ಕೂ ಗುಂಡಿಗಳು, ಪ್ರಯಾಣವೇ ಪ್ರಯಾಸ

Published:
Updated:
ರಸ್ತೆಯುದ್ದಕ್ಕೂ ಗುಂಡಿಗಳು, ಪ್ರಯಾಣವೇ ಪ್ರಯಾಸ

ಗುರುಮಠಕಲ್: ಕರ್ನಾಟಕದ ಪ್ರತಿಷ್ಠಿತ ಮತಕ್ಷೇತ್ರಗಳಲ್ಲಿ ಒಂದಾಗಿದ್ದ ಗುರುಮಠಕಲ್ ಮತಕ್ಷೇತ್ರದ ಗುರುಮಠಕಲ್ ಹೋಬಳಿ ವ್ಯಾಪ್ತಿಯಲ್ಲಿ ರಸ್ತೆ ಸಂಚರಿಸುವುದು ಸರ್ಕಸ್ ಮಾಡಿದ ಅನುಭವ ನೀಡುತ್ತಿದೆ. ರಸ್ತೆಯಲ್ಲಿ ಗುಂಡಿಗಳದ್ದೇ ಕಾರುಬಾರು.

ನಜರಾಪೂರ, ಮಿನಾಸಪೂರ, ಅಮ್ಮಪಲ್ಲಿ, ಮುಸ್ಲೇಪಲ್ಲಿ, ಇಂದಿರಾನಗರ, ಕಮಲಾಮಗರ, ಹಿಮಾಲಪೂರ, ಹಿಮಾಲಪೂರ ತಾಂಡಾ, ಚಿಂತರಪಲ್ಲಿ, ರಾಂಪೂರ, ಶಿವಪೂರ, ಕೋಟಗೇರಾ, ಗಾಜರಕೋಟ, ಹೊಸಳ್ಳಿ, ಚಿನ್ನಾಕಾರ, ಮೋಟನಳ್ಳಿ ಸೇರಿದಂತೆ ಬಹುತೇಕ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಹದಗೆಟ್ಟಿವೆ. ಯಾರೊಬ್ಬರೂ ರಸ್ತೆ ದುರಸ್ತಿಗೆ ಬಗ್ಗೆ ಯೋಚಿಸಿಲ್ಲ.

‘ಯಾವುದೇ ಪ್ರದೇಶ ವ್ಯಾಪಾರದ ದೃಷ್ಟಿಯಿಂದ, ಆರ್ಥಿಕತೆಯ ದೃಷ್ಟಿಯಿಂದ ಅಭಿವೃದ್ಧಿ ಹೊಂದಲು ಮೂಲ ಸೌಕರ್ಯಗಳು, ಸ್ಥಳೀಯ ಸಂಪನ್ಮೂಲಗಳು, ಮಾನವ ಸಂಪನ್ಮೂಲ ಪ್ರಮುಖವಾದದ್ದು. ಇದರ ಜತೆಗೆ ಸಾರಿಗೆ ಸಂಪರ್ಕದ ಜಾಲವೂ ಪ್ರಮುಖ ಪಾತ್ರವಹಿಸುತ್ತದೆ.

ಯಾವ ಪ್ರದೇಶಕ್ಕೆ ಉತ್ತಮ ಸಾರಿಗೆ ಸಂಪರ್ಕ ಸಾಧ್ಯವಿಲ್ಲವೋ ಅಂತಹ ಪ್ರದೇಶಗಳು ಅಭಿವೃದ್ಧಿಯ ವಿಷಯದಲ್ಲಿ ಹಿಂದುಳಿಯುವುದು ಬಹುತೇಕ ಖಚಿತ. ಇದನ್ನು ಗಮನದಲ್ಲಿಟ್ಟುಕೊಂಡು ರಸ್ತೆ ಸಂಪರ್ಕ ಜಾಲವನ್ನು ಅಭಿವೃದ್ಧಿಪಡಿಸಬೇಕು’ ಎನ್ನುತ್ತಾರೆ ಅರ್ಥಶಾಸ್ತ್ರ ಉಪನ್ಯಾಸಕ ವೀರೇಶ ಆವಂಟಿ.

’5 ಕಿ.ಮೀ ಹಾದಿಯ ರಸ್ತೆಯನ್ನು ಕ್ರಮಿಸಲು ಸಾಮಾನ್ಯವಾಗಿ 10ರಿಂದ 15 ನಿಮಿಷದ ಸಮಯ ತಗುಲುತ್ತದೆ. ಆದರೆ, ರಸ್ತೆಯಲ್ಲಿ ಗುಂಡಿಗಳು ಬಿದ್ದಿರುವುದರಿಂದ ‘ನಮ್ಮೂರಿಂದ 5 ಕಿ.ಮೀ ದೂರದ ಗುರುಮಠಕಲ್ ಪಟ್ಟಣಕ್ಕೆ ಬರಲು ಬರೋಬ್ಬರಿ 40 ನಿಮಿಷ ಬೇಕಾಗುತ್ತದೆ’ ಎನ್ನುತ್ತಾರೆ ರಾಮಯ್ಯ, ವೆಂಕಟಪ್ಪ, ಮೌನೇಶ ಹಾಗೂ ಸಿದ್ದಣ್ಣ.

ಮತಕ್ಷೇತ್ರದಲ್ಲಿ ರಸ್ತೆಗಳಲ್ಲಿ ಸಂಚರಿಸುವುದು ಎಂದರೆ ಮುಖ ಕಿವುಚಿಕೊಂಡು ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಮಳೆಗಾಲ ಬಂದರೆ ರಸ್ತೆ ಸಂಚಾರವೇ ಬೇಡ ಎನ್ನುವಂತಾಗಿದೆ. ಈ ರಸ್ತೆಗಳಲ್ಲಿ ಅಫಘಾತಗಳು ಸಂಭವಿಸುವುದು ಸಾಮಾನ್ಯವಾಗಿದೆ. ಅಫಘಾತದ ಸ್ಥಳಕ್ಕೆ ಅಂಬುಲೆನ್ಸ್ ಬರುವುದು ಕಷ್ಟಕರವಾಗಿದೆ. ಗರ್ಭಿಣಿಯರನ್ನು, ರೋಗಿಗಳನ್ನು, ಮುದುಕರನ್ನು ಹಳ್ಳಿಗಳಿಂದ ಪಟ್ಟಣಕ್ಕೆ ತರುವುದು ಸಾಹಸದ ಕೆಲಸದಂತಾಗಿದೆ’ ಎನ್ನುತ್ತಾರೆ ನರಸಿಂಹ, ಅಮರ, ಮಲ್ಲಿಕಾರ್ಜುನಪ್ಪ ಹಾಗೂ ಸಿ.ಎಂ.ಮಹಾದೇವ.

ಹೆದ್ದಾರಿಯೂ ಹೊರತಾಗಿಲ್ಲ: ವಿಜಯಪುರ- ಹೈದರಾಬಾದ್ ರಾಜ್ಯ ಹೆದ್ದಾರಿಯೂ ಗುಂಡಿಗಳಿಂದ ಮುಕ್ತವಾಗಿಲ್ಲ. ಬೋರಬಂಡಾ, ಧರ್ಮಾಪೂರ, ಬೆಟ್ಟದಹಳ್ಳಿ, ಚಿನ್ನಾಕರ ಗ್ರಾಮಗಳ ಹತ್ತಿರದಲ್ಲಿ ಗುಂಡಿಗಳು ಬಿದ್ದಿದ್ದು ಹೆದ್ದಾರಿಯೂ ಸುಗಮ ಸಂಚಾರಕ್ಕೆ ಅನುಕೂಲವಾಗಿಲ್ಲ.

 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry