ಲಖನೌ–ಆಗ್ರಾ ಎಕ್ಸ್‌ಪ್ರೆಸ್‌ ಹೆದ್ದಾರಿಯಲ್ಲಿ ಇಳಿದ 20 ಯುದ್ಧ ವಿಮಾನಗಳು

ಭಾನುವಾರ, ಮೇ 26, 2019
32 °C

ಲಖನೌ–ಆಗ್ರಾ ಎಕ್ಸ್‌ಪ್ರೆಸ್‌ ಹೆದ್ದಾರಿಯಲ್ಲಿ ಇಳಿದ 20 ಯುದ್ಧ ವಿಮಾನಗಳು

Published:
Updated:
ಲಖನೌ–ಆಗ್ರಾ ಎಕ್ಸ್‌ಪ್ರೆಸ್‌ ಹೆದ್ದಾರಿಯಲ್ಲಿ ಇಳಿದ 20 ಯುದ್ಧ ವಿಮಾನಗಳು

ನವದೆಹಲಿ (ಪಿಟಿಐ): ಭಾರತೀಯ ವಾಯುಪಡೆಗೆ ಸೇರಿದ 20 ಯುದ್ಧ ವಿಮಾನಗಳನ್ನು ಮಂಗಳವಾರ ಬೆಳಗ್ಗೆ ಲಖನೌ–ಆಗ್ರಾ ಎಕ್ಸ್‌ಪ್ರೆಸ್‌ ಹೆದ್ದಾರಿಯಲ್ಲಿ ತರಬೇತಿಗಾಗಿ ಇಳಿಸಲಾಯಿತು.

ಎಂಟು ಪಥಗಳ ಲಖನೌ–ಆಗ್ರಾ ಎಕ್ಸ್‌ಪ್ರೆಸ್‌ ಹೆದ್ದಾರಿಯಲ್ಲಿ ಬೆಳಗ್ಗೆ 10.30ಕ್ಕೆ ಭಾರತೀಯ ಸೇನೆಗೆ ಸೇರಿದ ಮಿರಾಜ್‌ 2000 ಯುದ್ಧ ವಿಮಾನ ಯಶಸ್ವಿಯಾಗಿ  ಹೆದ್ದಾರಿ ಮೇಲೆ ಇಳಿಯಿತು. ನಂತರ ಸುಖೋಯ್‌, ಎಎನ್‌32 ಯುದ್ಧ ವಿಮಾನಗಳು ಸೇರಿದಂತೆ 20 ವಿಮಾನಗಳನ್ನು ಹೆದ್ದಾರಿಯಲ್ಲಿ ಯಶಸ್ವಿಯಾಗಿ ಇಳಿಸಲಾಯಿತು ಎಂದು ಭಾರತೀಯ ವಾಯುಪಡೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಭವಿಷ್ಯದಲ್ಲಿ ತುರ್ತು ಸಂದರ್ಭಗಳಲ್ಲಿ ವಿಮಾನಗಳನ್ನು ಹೆದ್ದಾರಿಗಳ ಮೇಲೆ ಇಳಿಸುವುದಕ್ಕೆ ಈ ಪ್ರಯೋಗ ಸಹಕಾರಿಯಾಗಲಿದೆ. ಕೆಲ ನಿಮಿಷಗಳ ಕಾಲ ರಸ್ತೆಯ ಮೇಲಿಂದ 15 ರಿಂದ 20 ಮೀಟರ್‌ ಎತ್ತರದಲ್ಲಿ ಹಾರಾಟ ನಡೆಸಿದ ವಿಮಾನಗಳು ನಂತರ ಯಶಸ್ವಿಯಾಗಿ ರಸ್ತೆಯ ಮೇಲೆ ಇಳಿದವು. ಇದಕ್ಕಾಗಿ ಕೆಲವು ಗಂಟೆಗಳ ಕಾಲ ಹೆದ್ದಾರಿಯನ್ನು ಬಂದ್‌ ಮಾಡಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ತರಬೇತಿಗೆ ಉನ್ನೊ ಜಿಲ್ಲೆಯ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್‌ ವರಿಷ್ಠಾಧಿಕಾರಿಗಳು ಸಹಕಾರ ನೀಡಿದರು ಎಂದು ಅವರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry