ಡಿ.1 ರಿಂದ ರಾಜ್ಯಮಟ್ಟದ ಕುಸ್ತಿ

ಭಾನುವಾರ, ಮೇ 26, 2019
30 °C
ನುಡಿಸಿರಿ ಪ್ರಯುಕ್ತ ಮೂಡುಬಿದಿರೆಯಲ್ಲಿ

ಡಿ.1 ರಿಂದ ರಾಜ್ಯಮಟ್ಟದ ಕುಸ್ತಿ

Published:
Updated:

ಮಂಗಳೂರು: ಆಳ್ವಾಸ್‌ ನುಡಿಸಿರಿ– 2017ರ ಪ್ರಯುಕ್ತ ಬೆಂಗಳೂರಿನ ಕರ್ನಾಟಕ ಕುಸ್ತಿ ಸಂಘ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರ್‌ ಕುಸ್ತಿ ಸಂಘದ ಆಶ್ರಯದಲ್ಲಿ ಎರಡನೇ ಬಾರಿ ರಾಜ್ಯಮಟ್ಟದ ಪುರುಷ ಮತ್ತು ಮಹಿಳೆಯರ ಕುಸ್ತಿ ಟೂರ್ನಿಯು ಡಿ.1 ಮತ್ತು 2ರಂದು ಆಳ್ವಾಸ್‌ ಕಾಲೇಜಿನ ವಿದ್ಯಾಗಿರಿ ಅಖಾಡದಲ್ಲಿ ನಡೆಯಲಿದೆ ಎಂದು ಕರ್ನಾಟಕ ಕುಸ್ತಿ ಸಂಘದ ಅಧ್ಯಕ್ಷ ಬೆಂಗಳೂರಿನ ಎಂ. ಸುರೇಶ್ಚಂದ್ರ ಶೆಟ್ಟಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,‘ಬೇರೆ ಜಿಲ್ಲೆಗಳಿಂದ 150ಕ್ಕೂ ಹೆಚ್ಚು ಕುಸ್ತಿಪಟುಗಳು ಸ್ಪರ್ಧಿಸುವರು. ₹ 2.75 ಲಕ್ಷ ನಗದು ಬಹುಮಾನ ನೀಡಲಾಗುವುದು. ಪುರುಷರ 65 ಕೆ. ಜಿ ವಿಭಾಗದ ವಿಜೇತರಿಗೆ ‘ಆಳ್ವಾಸ್‌ ನುಡಿಸಿರಿ ಕುಮಾರ – 2017’, 86 ಕೆ. ಜಿ ವಿಭಾಗಕ್ಕೆ ‘ಆಳ್ವಾಸ್‌ ನುಡಿಸಿರಿ ಕೇಸರಿ– 2017’ ಮತ್ತು ಮಹಿಳೆಯರ 42 ಕೆ.ಜಿ ವಿಭಾಗಕ್ಕೆ ‘ಆಳ್ವಾಸ್‌ ನುಡಿಸಿರಿ ಕುವರಿ–2017’ ಪ್ರಶಸ್ತಿ, ಬೆಳ್ಳಿ ಗದೆ ನೀಡಲಾಗುವುದು. ನವೆಂಬರ್‌ 30ರಂದು ಮಧ್ಯಾಹ್ನ 3ರಿಂದ ಕುಸ್ತಿಪಟುಗಳ ದೇಹತೂಕ ತಪಾಸಣೆ ಕಾಲೇಜಿನ ವಿದ್ಯಾಗಿರಿ ಆವರಣದಲ್ಲಿ ನಡೆಯಲಿದೆ’ ಎಂದರು. ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರ್‌ ಕುಸ್ತಿ ಸಂಘದ ಅಧ್ಯಕ್ಷ ಪ್ರಕಾಶ್‌ ವಿ. ಕರ್ಕೇರ, ಉಪಾಧ್ಯಕ್ಷ ಸತೀಶ್‌ ರಾವ್‌, ರಂಗ ಕಲಾವಿದ ವಿ. ಜಿ. ಪಾಲ್‌ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry