ಪ್ರವೀಣ ಗೋಡ್ಖಿಂಡಿಗೆ ಚೌಡಯ್ಯ ಪ್ರಶಸ್ತಿ

7

ಪ್ರವೀಣ ಗೋಡ್ಖಿಂಡಿಗೆ ಚೌಡಯ್ಯ ಪ್ರಶಸ್ತಿ

Published:
Updated:
ಪ್ರವೀಣ ಗೋಡ್ಖಿಂಡಿಗೆ ಚೌಡಯ್ಯ ಪ್ರಶಸ್ತಿ

ಬೆಂಗಳೂರು: ಅಕಾಡೆಮಿ ಆಫ್‌ ಮ್ಯೂಸಿಕ್, ಚೌಡಯ್ಯ ಸ್ಮಾರಕ ಭವನ ನೀಡುವ 2017ನೇ ಸಾಲಿನ ಅಕಾಡೆಮಿ ಆಫ್ ಮ್ಯೂಸಿಕ್‌ ಚೌಡಯ್ಯ ಪ್ರಶಸ್ತಿಗೆ ಕೊಳಲು ವಾದಕ ಪಂಡಿತ್‌ ಪ್ರವೀಣ ಗೋಡ್ಖಿಂಡಿ ಅವರು ಆಯ್ಕೆಯಾಗಿದ್ದಾರೆ.

ಈ ಕುರಿತು ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸ್ಮಾರಕ ಭವನದ ಸದಸ್ಯ ಪಿ. ರಾಮಯ್ಯ, ‘ನವೆಂಬರ್‌ 5ರಂದು ಚೌಡಯ್ಯ ಸ್ಮಾರಕ ಭವನದಲ್ಲಿ ನಡೆಯುವ ಕೆ.ಕೆ. ಸ್ಮಾರಕ ಸಂಗೀತ ಉತ್ಸವ ಸಮಾರೋಪ ಸಮಾರಂಭದಲ್ಲಿ ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಜಿ.ಕೆ. ವೀರೇಶ್‌ ಅವರು ಗೋಡ್ಖಿಂಡಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಪ್ರಶಸ್ತಿಯು ₹2 ಲಕ್ಷ ನಗದು, ಪ್ರಶಸ್ತಿ ಪತ್ರ ಮತ್ತು ನೆನಪಿನ ಕಾಣಿಕೆಯನ್ನು ಒಳಗೊಂಡಿದೆ’ ಎಂದರು.

‘ನವೆಂಬರ್ 1ರಿಂದ 5ರವರೆಗೆ ನಡೆಯುವ ಸಂಗೀತ ಉತ್ಸವದಲ್ಲಿ ವಿವಿಧ ಕಲಾವಿದರಿಂದ ಸಂಗೀತ ಕಾರ್ಯಕ್ರಮಗಳು ನಡೆಯಲಿವೆ. ಸಾರ್ವಜನಿಕರಿಗೆ ಉಚಿತ ಪ್ರವೇಶವಿರುತ್ತದೆ’ ಎಂದು ಅವರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry