ಕಿರುಕುಳ: ಭಾರತೀಯರ ವಿರುದ್ಧ ದೂರು

ಗುರುವಾರ , ಜೂನ್ 20, 2019
26 °C

ಕಿರುಕುಳ: ಭಾರತೀಯರ ವಿರುದ್ಧ ದೂರು

Published:
Updated:

ಸಿಂಗಪುರ (ಪಿಟಿಐ): ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಇಬ್ಬರು ಭಾರತೀಯರ ವಿರುದ್ಧ ಪ್ರಕರಣ ದಾಖಲಾಗಿದ್ದು, ಆರೋಪ ಸಾಬೀತಾದರೆ ಅವರಿಗೆ ಎರಡು ವರ್ಷಗಳ ಜೈಲು, ದಂಡ ಶಿಕ್ಷೆ ವಿಧಿಸಬಹುದಾಗಿದೆ.

ದಾದ್ಯಾಲ್‌ ಬಲವಿಂದರ್‌ ಸಿಂಗ್‌ ಅವರು ನಗರದ ಪ್ರತಿಷ್ಠಿತ ಆರ್ಕಿಡ್ ಟವರ್‌ನಲ್ಲಿರುವ ಪಬ್‌ನಲ್ಲಿ 2017ರ ಜನವರಿ 29ರಂದು 37 ವರ್ಷದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿದ್ದಾರೆ.

ಇದೇ ಮಾಲ್‌ನ ಇನ್ನೊಂದು ಅಂಗಡಿಯಲ್ಲಿ ಆಗಸ್ಟ್‌ 2ರಂದು 24 ಹಾಗೂ 41 ವರ್ಷದ ಇಬ್ಬರು ಮಹಿಳೆಯರಿಗೆ ಕಿರುಕುಳ ನೀಡಿದ ಆರೋಪವನ್ನು ಭಾರತದ ಜಗಜೀತ್‌ ಸಿಂಗ್‌ ಅವರು ಎದುರಿಸುತ್ತಿದ್ದಾರೆ ಎಂದು ವರದಿಯಾಗಿದೆ.

ಎರಡೂ ಪ್ರಕರಣಗಳ ವಿಚಾರಣೆಯನ್ನು ಮುಂದಿನ ತಿಂಗಳಿಗೆ ಮುಂದೂಡಲಾಗಿದೆ.

ಸಿಂಗಪುರದಲ್ಲಿ ಲೈಂಗಿಕ ಕಿರುಕುಳ ಪ್ರಕರಣಗಳು ಈಚೆಗೆ ಹೆಚ್ಚಾಗಿದ್ದು, ಭಾರತೀಯರು ಮಾತ್ರವಲ್ಲದೇ ಸಿಂಗಪುರದ ಪ್ರಜೆಗಳೂ ವಿವಿಧ ಪ್ರಕರಣಗಳ ವಿಚಾರಣೆ ಎದುರಿಸುತ್ತಿದ್ದಾರೆ.

ದಾಳಿ: 22 ಸಾವು

ಬೈರೂತ್ (ಎಎಫ್‌ಪಿ): ಸಿರಿಯಾದ ಡಿಯರ್ ಎಝೋರ್ ಪೂರ್ವ ನಗರದ ಮೇಲೆ ನಡೆದ ವಾಯುದಾಳಿಯಲ್ಲಿ ಕನಿಷ್ಠ 22 ಜನ ಸಾವನಪ್ಪಿದ್ದಾರೆ.

ಐಎಸ್‌ ವಿರುದ್ಧ ಅಮೆರಿಕ ನಡೆಸುತ್ತಿರುವ ದಾಳಿಯ ಮುಂದು ವರಿದ ಭಾಗ ಇದಾಗಿದ್ದು, ಇದ ರಲ್ಲಿ ಅಮಾಯಕರು ಸತ್ತಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ಆರೋಪಿ ಸಿದ್ದಾರೆ. ಅಲ್ಲದೆ ಅಮೆರಿಕ ಈ ದಾಳಿ ನಡೆಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry