ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಟ ವಿಶಾಲ್ ಕಚೇರಿ ಮೇಲಿನ ಐಟಿ ಶೋಧ ಸಾಮಾನ್ಯ ತಪಾಸಣೆ’

Last Updated 24 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಚೆನ್ನೈ: ತಮಿಳು ಸಿನಿಮಾ ನಿರ್ಮಾಪಕರ ಮಂಡಳಿಯ ಅಧ್ಯಕ್ಷ, ನಟ ವಿಶಾಲ್ ಅವರ ಸಿನಿಮಾ ನಿರ್ಮಾಣ ಸಂಸ್ಥೆಯ ಕಚೇರಿಯಲ್ಲಿ ಸೋಮವಾರ ಶೋಧ ನಡೆಸಿದ್ದ ಆದಾಯ ತೆರಿಗೆ (ಐಟಿ) ಅಧಿಕಾರಿಗಳು, ‘ಇದು ಸಾಮಾನ್ಯ ಟಿಡಿಎಸ್ ತಪಾಸಣೆ’ ಎಂದಿದ್ದಾರೆ.

‘ಆದಾಯ ತೆರಿಗೆ ಪಾವತಿ ಸಂಬಂಧ ತಪಾಸಣೆ ನಡೆಸಲಾಗಿದೆ. 2017–18ರ ಹಣಕಾಸು ವರ್ಷ ಪ್ರಾರಂಭವಾದಾಗಿ
ನಿಂದಲೂ ತಮಿಳುನಾಡು ಹಾಗೂ ಪಾಂಡಿಚೇರಿಯಲ್ಲಿ ಇಂತಹ 400 ತಪಾಸಣೆಗಳನ್ನು ನಡೆಸಿದ್ದೇವೆ’ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

‘ಮರ್ಸಲ್’ ಸಿನಿಮಾಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಎಚ್. ರಾಜಾ ಅವರೊಂದಿಗೆ ವಿಶಾಲ್ ವಾಗ್ವಾದ ನಡೆಸಿದ ನಂತರ ಅವರ ಕಚೇರಿ ಮೇಲೆ ಐಟಿ ಶೋಧ ನಡೆದಿದೆ. ಆದರೆ, ‘ಸಿನಿಮಾ ವಿವಾದಕ್ಕೂ ಐಟಿ ತಪಾಸಣೆಗೂ ಯಾವುದೇ ಸಂಬಂಧವಿಲ್ಲ’ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

‘ತಪಾಸಣೆ ಹಿಂದೆ ರಾಜಕೀಯ ಕಾರಣಗಳಿವೆ ಎಂದು ನನಗೆ ಅನ್ನಿಸುವುದಿಲ್ಲ. ಹಾಗೊಮ್ಮೆ ರಾಜಕೀಯ ಕಾರಣಗಳೇ ಇದ್ದರೂ ಅದನ್ನು ಎದುರಿಸಲು ನಾನು ಸಿದ್ಧನಿದ್ದೇನೆ. ನಾನು ಸರಿಯಾಗಿ ತೆರಿಗೆ ಪಾವತಿಸಿದ್ದೇನೆ’ ಎಂದು ವಿಶಾಲ್ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT