ಚರ್ಚೆಯಲ್ಲಿ ‘ಸಾಹೊ’ ಪೋಸ್ಟರ್‌

ಗುರುವಾರ , ಜೂನ್ 20, 2019
31 °C

ಚರ್ಚೆಯಲ್ಲಿ ‘ಸಾಹೊ’ ಪೋಸ್ಟರ್‌

Published:
Updated:
ಚರ್ಚೆಯಲ್ಲಿ ‘ಸಾಹೊ’ ಪೋಸ್ಟರ್‌

ಪ್ರಭಾಸ್‌ ನಟನೆಯ ‘ಸಾಹೊ’ ಚಿತ್ರದ ಮೊದಲ ಪೋಸ್ಟರ್‌ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಅಭಿಮಾನಿಗಳಲ್ಲಿ ಕುತೂಹಲದ ಪುಳಕ ಹುಟ್ಟಿಸಿದ ಈ ಪೋಸ್ಟರ್‌ ಪ್ರಭಾಸ್‌ ಅವರ ಹುಟ್ಟುಹಬ್ಬದಂದೇ ಬಿಡುಗಡೆಗೊಂಡಿರುವುದು ವಿಶೇಷ.

ಹೊಸ ಚಿತ್ರದ ಪೋಸ್ಟರ್‌ ‘ನಟನಿಗೆ ಹುಟ್ಟುಹಬ್ಬದ ಕೊಡುಗೆ’ ಎಂದು ತಂಡ ಹೇಳಿಕೊಂಡಿದೆ. ಈ ಹಿಂದೆ ಬಾಹುಬಲಿ ಸಿನಿಮಾ ತಂಡ ಕೂಡ ಪ್ರಭಾಸ್‌ ಹುಟ್ಟುಹಬ್ಬದಂದೇ ಚಿತ್ರದ ಪೋಸ್ಟರ್‌ ಬಿಡುಗಡೆ ಮಾಡಿತ್ತು. ಇದೇ ಸಂಪ್ರದಾಯವನ್ನು ಸಾಹೊ ಕೂಡ ಮುಂದುವರೆಸಿದೆ.

ನಿಲುವಂಗಿ ತೊಟ್ಟು ಅರ್ಧ ಮುಖ ಮುಚ್ಚಿಕೊಂಡು ಕತ್ತಲೆಯ ಕೂಪದಿಂದ ನಡೆದು ಬರುತ್ತಿರುವಂತೆ ಕಾಣುವ ಚಿತ್ರ ಪೋಸ್ಟರ್‌ನಲ್ಲಿದೆ. ಹಿಂಭಾಗದಲ್ಲಿ ಕಾರು, ಜನರಿದ್ದು ಪಾತಕ ಲೋಕದ ಹೋಲಿಕೆಯಂತೆ ಕಾಣುತ್ತದೆ. ಪೋಸ್ಟರ್‌ ನೋಡಿ ಜನ ಪ್ರಭಾಸ್‌ ಪಾತ್ರ ಹೇಗಿರಬಹುದು, ಥ್ರಿಲ್ಲರ್‌ ಕಥೆಯ ಸಿನಿಮಾವೇ ಇದು ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

ಮುಂದಿನ ವರ್ಷ ಬಿಡುಗಡೆಯಾಗಲಿರುವ ಈ ಚಿತ್ರದ ಮೊದಲ ಪೋಸ್ಟರ್‌ ಕೆಲವರಲ್ಲಿ ಕುತೂಹಲ ಹುಟ್ಟುಹಾಕಿದರೆ ಇನ್ನು ಕೆಲವರಿಗೆ ಬೇಸರವನ್ನೂ ಮೂಡಿಸಿದೆ. ‘ಇದರಲ್ಲಿ ಹೊಸತನವೇನೂ ಇಲ್ಲ. ಎಕ್ಸೈಟ್‌ ಆಗುವುದಕ್ಕೆ ಕಾರಣವೂ ಇಲ್ಲ. ‘ಬ್ಲೇಡ್‌ ರನ್ನರ್‌ 2014’ ಚಿತ್ರದ ಪೋಸ್ಟರ್‌ ಅನ್ನು ನೇರವಾಗಿ ಕಾಪಿ ಮಾಡಿದಂತಿದೆ. ಪೋಸ್ಟರ್‌ನಲ್ಲಿ ಒಂದೇ ಒಂದು ಬದಲಾವಣೆ ಎಂದರೆ ಪ್ರಭಾಸ್‌ ಮುಖ’ ಎಂದು ಅನೇಕರು ಬೇಸರ ವ್ಯಕ್ತಪಡಿಸಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry