ಫತೇಪುರ್‌ ಸಿಕ್ರಿಯಲ್ಲಿ ಸ್ವಿಟ್ಜರ್ಲೆಂಡ್ ಪ್ರವಾಸಿಗರ ಮೇಲೆ ಹಲ್ಲೆ; ವರದಿ ಕೇಳಿದ ಸುಷ್ಮಾ ಸ್ವರಾಜ್‌

ಗುರುವಾರ , ಜೂನ್ 20, 2019
27 °C

ಫತೇಪುರ್‌ ಸಿಕ್ರಿಯಲ್ಲಿ ಸ್ವಿಟ್ಜರ್ಲೆಂಡ್ ಪ್ರವಾಸಿಗರ ಮೇಲೆ ಹಲ್ಲೆ; ವರದಿ ಕೇಳಿದ ಸುಷ್ಮಾ ಸ್ವರಾಜ್‌

Published:
Updated:
ಫತೇಪುರ್‌ ಸಿಕ್ರಿಯಲ್ಲಿ ಸ್ವಿಟ್ಜರ್ಲೆಂಡ್ ಪ್ರವಾಸಿಗರ ಮೇಲೆ ಹಲ್ಲೆ; ವರದಿ ಕೇಳಿದ ಸುಷ್ಮಾ ಸ್ವರಾಜ್‌

ನವದೆಹಲಿ: ಉತ್ತರ ಪ್ರದೇಶದ ಫತೇಪುರ್‌ ಸಿಕ್ರಿಯಲ್ಲಿ ಸ್ವಿಟ್ಜರ್ಲೆಂಡ್ ಪ್ರವಾಸಿಗರಿಬ್ಬರ ಮೇಲೆ ಭಾನುವಾರ ಹಲ್ಲೆ ಮಾಡಲಾಗಿದೆ. ಈ ಘಟನೆಯ ಬಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್‌ ಅವರು ಉತ್ತರ ಪ್ರದೇಶ ಸರ್ಕಾರದಿಂದ ವರದಿ ಕೇಳಿದ್ದಾರೆ.

ಸ್ವಿಟ್ಜರ್ಲೆಂಡ್‌ನ ಪ್ರವಾಸಿಗರಾದ ಕ್ವೆಂಟಿನ್‌ ಜೆರಿಮಿ ಕ್ಲೆರ್ಕ್‌ (24) ಮತ್ತು ಅವರ ಗೆಳತಿ ಮೇರಿ ಡ್ರೋಸ್‌ (24) ಮೇಲೆ ಸ್ಥಳೀಯರು ಭಾನುವಾರ (ಅ.22) ಹಲ್ಲೆ ನಡೆಸಿದ್ದಾರೆ. ಸದ್ಯ ಈ ಇಬ್ಬರೂ ದೆಹಲಿಯ ಏಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕ್ವೆಂಟಿನ್‌ ಮತ್ತು ಮೇರಿ ಸೆಪ್ಟೆಂಬರ್‌ 30ರಂದು ಭಾರತ ಪ್ರವಾಸಕ್ಕೆ ಬಂದಿದ್ದರು. ಅ.22ರಂದು ಆಗ್ರಾಕ್ಕೆ ಭೇಟಿ ನೀಡಿದ್ದ ಅವರು ಅಲ್ಲಿಂದ 40 ಕಿ.ಮೀ. ದೂರದಲ್ಲಿರುವ ಮತ್ತೊಂದು ಪ್ರೇಕ್ಷಣೀಯ ಸ್ಥಳ ಫತೇಪುರ್‌ ಸಿಕ್ರಿಗೆ ಹೋಗಿದ್ದರು.

‘ನಮ್ಮನ್ನು ಹಿಂಬಾಲಿಸಿದ ಗುಂಪು ನಮ್ಮ ಬಗ್ಗೆ ಜೋರಾಗಿ ಮಾತನಾಡಲು ಶುರು ಮಾಡಿದರು. ಗುಂಪಿನಲ್ಲಿದ್ದ ಯುವಕರು ತಮ್ಮ ಮೊಬೈಲ್‌ಗಳಲ್ಲಿ ನಮ್ಮ ಚಿತ್ರ ತೆಗೆಯುತ್ತಿದ್ದರು. ಅಲ್ಲದೆ ನನ್ನ ಗೆಳತಿ ಮೇರಿಯ ಮೈ ಮುಟ್ಟಲು ಯತ್ನಿಸಿದರು. ಇದನ್ನು ಪ್ರತಿರೋಧಿಸಿದ ಕಾರಣ ನಮ್ಮ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿದರು’ ಎಂದು ಕ್ವೆಂಟಿನ್‌ ಆರೋಪಿಸಿದ್ದಾರೆ.

ಕ್ವೆಂಟಿನ್‌ ತಲೆ ಭಾಗಕ್ಕೆ ತೀವ್ರ ಪೆಟ್ಟಾಗಿದೆ. ಮೇರಿ ಅವರಿಗೆ ಮೂಳೆ ಮುರಿತವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

‘ಆರೋಪಿಗಳ ಗುರುತು ಪತ್ತೆಯಾಗಿದೆ. ಶಂಕಿತ ಆರೋಪಿಗಳ ಪೈಕಿ ಒಬ್ಬನನ್ನು ಉತ್ತರ ಪ್ರದೇಶ – ರಾಜಸ್ಥಾನದ ಗಡಿ ಭಾಗದಲ್ಲಿ ವಶಕ್ಕೆ ಪಡೆಯಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry