ಶುಕ್ರವಾರ, ಸೆಪ್ಟೆಂಬರ್ 20, 2019
22 °C

ದಾರ್ಶನಿಕರ ಆದರ್ಶ ಯುವಕರು ಮೈಗೂಡಿಸಿಕೊಳ್ಳಬೇಕು

Published:
Updated:

ಪರಶುರಾಂಪುರ: ಕೇವಲ ವಾಲ್ಮಿಕಿ ಜಯಂತಿಯನ್ನ ಅದ್ದೂರಿಯಾಗಿ ಆಚರಿಸಿದರೇ ಸಾಲದು ಯುವಕರು ಅವರ ಆದರ್ಶಗಳನ್ನ ಮೈಗೂಡಿಸಿಕೊಳ್ಳಬೇಕು ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ಕೆ ಟಿ ಕುಮಾರಸ್ವಾಮಿ ತಿಳಿಸಿದರು.

ಇವರು ಬುಧವಾರ ಪುಟ್ಲಾರಹಳ್ಳಿಯಲ್ಲಿ ನಡೆದ ವಾಲ್ಮೀಕಿ ಜಯಂತಿಯ ಅಂಗವಾಗಿ ಹಮ್ಮಿಕೊಂಡಿದ್ದ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು ಬೇಡ ಜನಾಂಗದವರು ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತುಕೊಡಬೇಕು ಆಗ ಮಾತ್ರ ನಮ್ಮ ಸಮಾಜ ಮುಖ್ಯವಾಹಿನಿ ಬರಲು ಸಾಧ್ಯ ಎಂದರು.

ಮಾಜಿ ತಾಲ್ಲೂಕು ಪಂಚಾಯ್ತಿ ಸದಸ್ಯ ಇ ಎನ್ ವೆಂಕಟೇಶ್ ಮಾತನಾಡಿ ನಾಯಕ ಸಮಾಜಕ್ಕೆ ಮಾಜಿ ಸಚಿವರಾದ ತಿಪ್ಪೇಸ್ವಾಮಿಯವರು ಅನೇಕ ಸವಲತ್ತುಗಳನ್ನ ಒದಗಿಸಿಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ ಅದಕ್ಕಾಗಿ ಅವರಿಗೆ ಈ ಬಾರಿಯ ವಾಲ್ಮೀಕಿ ರಾಜ್ಯ ಪ್ರಶಸ್ತಿಯನ್ನ ಸರ್ಕಾರ ನೀಡಿದೆ ಅವರ ಮಗ ಕೆ ಟಿ ಕುಮಾರಸ್ವಾಮಿ ಮುಂದಿನ ವಿಧಾನ ಸಭೆಯ ಬಿಜೆಪಿ ಅಭ್ಯರ್ಥಿ ಅವರಿಗೆ ನಿಮ್ಮೇಲ್ಲರ ಆಶೀರ್ವಾದಬೇಕು ಎಂದರು.

ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಬೊಮ್ಮಲಿಂಗಪ್ಪ ಅಧ್ಯಕ್ಷತೆ ವಹಿಸಿದ್ದರು, ಬಿಜೆಪಿ ಮಂಡಲ ಅಧ್ಯಕ್ಷ ಸಿರಿಯಪ್ಪ, ಮುಖಂಡರಾದ ಹಟ್ಟಿರುದ್ರಪ್ಪ, ಕೃಷ್ಣಮೂರ್ತಿ, ಕರೀಕೆರೆ ತಿಪ್ಪೇಸ್ವಾಮಿ, ಯರ್ರಜ್ಜ, ಮಾಜಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ನಲ್ಲಪ್ಪ, ಮಹದೇವ ಮತ್ತಿತರು ಉಪಸ್ಥಿತರಿದ್ದರು

Post Comments (+)