ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

6ನೇ ವೇತನ ಆಯೋಗ ಅನುಷ್ಠಾನಕ್ಕೆ ಒತ್ತಾಯ

Last Updated 27 ಅಕ್ಟೋಬರ್ 2017, 9:47 IST
ಅಕ್ಷರ ಗಾತ್ರ

ಸುರಪುರ: 6ನೇ ವೇತನ ಆಯೋಗ ಅನುಷ್ಠಾನ ಹಾಗೂ ಶೇ 30 ರಷ್ಟು ಮಧ್ಯಂತರ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ತಾಲ್ಲೂಕು ಘಟಕದ ನೇತೃತ್ವದಲ್ಲಿ ಸರ್ಕಾರಿ ನೌಕರರು ಬುಧವಾರ ತಹಶೀಲ್ದಾರ್‌ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ವೇಣುಗೋಪಾಲಸ್ವಾಮಿ ದೇವಸ್ಥಾನದ ಆವರಣದಿಂದ ಮುಖ್ಯ ರಸ್ತೆ, ಮಹಾತ್ಮ ಗಾಂಧೀಜಿ ವೃತ್ತದ ಮಾರ್ಗವಾಗಿ ತಹಶೀಲ್ದಾರ್‌ ಕಚೇರಿವರೆಗೆ ಬೃಹತ್ ಮೆರವಣಿಗೆಯಲ್ಲಿ ತೆರಳಿ ತಹಶೀಲ್ದಾರ್‌ ಕಚೇರಿ ಮುಂದೆ ಸಮಾವೇಶಗೊಂಡರು.

ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಭೀಮಣ್ಣ ಭೋಸಗಿ, ಗೌರವಾಧ್ಯಕ್ಷ ಮಂಗಲಕುಮಾರ ಗುಡಗುಂಟಿ ಇತರರು ಮಾತನಾಡಿ, ‘ಕೇಂದ್ರ ಸರ್ಕಾರದ 7ವೇತನ ಆಯೋಗದ ಶಿಫಾರಸುಗಳನ್ನು ಯಥಾವತ್ತಾಗಿ ರಾಜ್ಯ ಸರ್ಕಾರಿ ನೌಕರರಿಗೂ ಅನುಷ್ಠಾನಗೊಳಿಸುವ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ನೌಕರರ ವೇತನ ಹಾಗೂ ಭತ್ಯೆಗಳಲ್ಲಿ ಸಮಾನತೆಯನ್ನು ತರಬೇಕು’ ಎಂದು ಆಗ್ರಹಿಸಿದರು.

‘ಮುಖ್ಯಮಂತ್ರಿ ತಕ್ಷಣ 6ನೇ ವೇತನ ಆಯೋಗ ವರದಿ ಅನುಷ್ಠಾನ ಹಾಗೂ ಶೇ 30 ರಷ್ಟು ಮಧ್ಯಂತರ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು’ ಎಂದು ಬರೆದ ಮನವಿ ಪತ್ರವನ್ನು ತಹಶೀಲ್ದಾರ್ ಸುರೇಶ ಅಂಕಲಗಿ ಅವರಿಗೆ ಸಲ್ಲಿಸಲಾಯಿತು.

ಪ್ರಧಾನ ಕಾರ್ಯದರ್ಶಿ ಬಸನಗೌಡ ಪೊಲೀಸ್ ಪಾಟೀಲ್, ರಾಜ್ಯ ಪರಿಷತ್ ಸದಸ್ಯ ದೇವರಾಜ್ ಪಾಟೀಲ್, ಎ.ವಿ. ತೀರಂದಾಸ್, ಹಳ್ಳೆಪ್ಪ ಕಾಂಜಾಂಜಿ, ಸೋಮರಡ್ಡಿ ಮಂಗೀಹಾಳ, ಬಸನಗೌಡ ಪಾಟೀಲ ವಠಾರ್, ಶರಣಬಸವ ಗೋನಾಲ, ಚೆನ್ನಮ್ಮ ಪಾಟೀಲ, ಚುನ್ನು ಪಟೇಲ, ಶಾಂತಾ ಅಪ್ಪಗೋಳ, ಶಾಂತಗೌಡ ಪಾಟೀಲ, ಅಶೋಕ ಕೋಳೂರು, ಬಸನಗೌಡ ಬಿರಾದಾರ, ಭೀಮಣ್ಣ ಕಲ್ಯಾಣಿ, ಭೀಮಣ್ಣ ಹುದ್ಧಾರ, ಸಿದ್ದನಗೌಡ ಕೆಂಭಾವಿ, ಬಸನಗೌಡ ಅಂಗಡಿ, ಮಹಾದೇವಪ್ಪ ಗುತ್ತೇದಾರ, ಸಂಗಯ್ಯ ಬಾಚಿಹಾಳ, ಸ್ಯಾಮವೇಲ್, ಚಂದ್ರಶೇಖರಗೌಡ ಪಾಟೀಲ್, ವಿರೇಶ ಗಾದಿ, ಚಂದ್ರಕಾತ ಗುತ್ತೇದಾರ್, ಆರ್.ಕೆ.ಕೋಡಿಹಾಳ, ಮಹೇಶ ಜಹಗೀರದಾರ್, ಸೇರಿದಂತೆ ತಾಲೂಕಿನ ಎಲ್ಲಾ ಇಲಾಖೆಗಳ ನೌಕರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT