ಫೇಸ್‍ಬುಕ್‍ನಲ್ಲಿ ಟಿಪ್ಪು ಸುಲ್ತಾನ್, ಸಿದ್ದರಾಮಯ್ಯ ಅವಹೇಳನ

ಸೋಮವಾರ, ಜೂನ್ 24, 2019
26 °C

ಫೇಸ್‍ಬುಕ್‍ನಲ್ಲಿ ಟಿಪ್ಪು ಸುಲ್ತಾನ್, ಸಿದ್ದರಾಮಯ್ಯ ಅವಹೇಳನ

Published:
Updated:

ಉಪ್ಪಿನಂಗಡಿ: ಟಿಪ್ಪು ಸುಲ್ತಾನ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭಾವಚಿತ್ರವನ್ನು ಅಸಹ್ಯಕರ ರೀತಿಯಲ್ಲಿ ಚಿತ್ರಿಸಿ ಫೇಸ್‍ಬುಕ್‍ನಲ್ಲಿ ಹಾಕಿದ್ದಾರೆ ಎಂದು ಇಬ್ಬರ ವಿರುದ್ಧ ಉಪ್ಪಿನಂಗಡಿ ಯುವ ಕಾಂಗ್ರೆಸ್ ಮುಖಂಡರು ಇಲ್ಲಿಯ ಪೊಲೀಸರಿಗೆ ದೂರು ನೀಡಿದ್ದಾರೆ.

‘ಆರೋಪಿಗಳಾದ ಸದಾನಂದ ಕಾರ್ ಕ್ಲಬ್ ಹಾಗೂ ಯೋಗೀಶ್ ಪ್ರಭು ಎಂಬವರು ಈ ಕೃತ್ಯ ಎಸಗಿದ್ದಾರೆ‘ ಎಂದು ಆರೋಪಿಸಲಾಗಿದೆ. ಪುತ್ತೂರು ವಿಧಾನ ಸಭಾ ಯುವ ಕಾಂಗ್ರೆಸ್ ಅಧ್ಯಕ್ಷ ಯು.ಟಿ. ತೌಶೀಫ್ ಈ ದೂರು ನೀಡಿದ್ದಾರೆ.

ಕುಕ್ಕುರಗಾಲಿನಲ್ಲಿ ಕುಳಿತು ಕೊಂಡಿರುವ ಭಂಗಿಯಲ್ಲಿರುವ ನಗ್ನದೇಹದ ಎರಡು ಚಿತ್ರಗಳಿಗೆ ಟಿಪ್ಪು ಸುಲ್ತಾನ್ ಹಾಗೂ ಸಿದ್ದರಾಮಯ್ಯ ಮುಖದ ಚಿತ್ರ ಜೋಡಿಸಿ ‘ಟಿಪ್ಪು ಮತ್ತು ಸಿದ್ದು’ ಎಂದು ತಲೆಬರಹ ನೀಡಿ ಯೋಗೀಶ್ ಪ್ರಭು ಎಂಬವರು ತನ್ನ ಫೇಸ್‍ಬುಕ್‍ನಲ್ಲಿ ಹಾಕಿದ್ದರು. ಇದನ್ನು ಸದಾನಂದ ಕಾರ್‍ಕ್ಲಬ್ ಎಂಬವರು ತಮ್ಮ ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry