ಸೋಮವಾರ, ಸೆಪ್ಟೆಂಬರ್ 16, 2019
26 °C

ಕೊಟ್ಟೂರು ತಾಲ್ಲೂಕು ನಕ್ಷೆ ಅಂತಿಮ

Published:
Updated:
ಕೊಟ್ಟೂರು ತಾಲ್ಲೂಕು ನಕ್ಷೆ ಅಂತಿಮ

ಕೂಡ್ಲಿಗಿ: ರಾಜ್ಯ ಸರ್ಕಾರ ಕೊಟ್ಟೂರನ್ನು ನೂತನ ತಾಲ್ಲೂಕನ್ನಾಗಿ ಘೋಷಿಸಿದ ಬಳಿಕ ಕೂಡ್ಲಿಗಿ ತಾಲ್ಲೂಕು ಆಡಳಿತ ಹೊಸ ತಾಲ್ಲೂಕಿನ ನಕ್ಷೆಯನ್ನು ಅಂತಿಮಗೊಳಿಸಿ ಜಿಲ್ಲಾಡಳಿತಕ್ಕೆ ಸಲ್ಲಿಸಿದೆ. ರಾಜ್ಯದಲ್ಲಿಯೇ ಎರಡನೇ ಅತಿ ದೊಡ್ಡ ತಾಲ್ಲೂಕು ಎಂಬ ಹೆಗ್ಗಳಿಕೆ ಪಡೆದಿದ್ದ ಕೂಡ್ಲಿಗಿ ತಾಲ್ಲೂಕನ್ನು ವಿಭಜಿಸಿ ತಾಲ್ಲೂಕಿನ ಪ್ರಮುಖ ವಾಣಿಜ್ಯ, ಧಾರ್ಮಿಕ, ಶೈಕ್ಷಣಿಕ ಕೇಂದ್ರವಾಗಿದ್ದ ಕೊಟ್ಟೂರು ಪಟ್ಟಣವನ್ನು ಕೇಂದ್ರವನ್ನಾಗಿ ಮಾಡಲಾಗಿದೆ. ಆ ಮೂಲಕ ಭಾಗದ ಜನರ ಬಹುದಿನಗಳ ಕನಸು ನನಸಾಗಲಿದೆ.

‘ಕೊಟ್ಟೂರು ಹೋಬಳಿಯ 20, ಹೊಸಹಳ್ಳಿ ಹೋಬಳಿಯ 1 ಹಾಗೂ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಕೋಗಳಿ ಹೋಬಳಿಯ 7 ಕಂದಾಯ ಗ್ರಾಮಗಳು ಸೇರಿ ಒಟ್ಟು 28 ಕಂದಾಯ ಗ್ರಾಮಗಳು, ಮೂರು ಜಿಲ್ಲಾ ಪಂಚಾಯ್ತಿ, 13 ಗ್ರಾಮ ಪಂಚಾಯಿತಿ, 8 ತಾಲ್ಲೂಕು ಪಂಚಾಯಿತಿ ಮತ್ತು ಕೊಟ್ಟೂರು ಪಟ್ಟಣ ಪಂಚಾಯಿತಿಯನ್ನು ಕೊಟ್ಟೂರು ತಾಲ್ಲೂಕು ಕೇಂದ್ರದ ಆಡಳಿತ ವ್ಯಾಪ್ತಿಗೆ ಒಳಪಡಿಸಸಲಾಗಿದೆ’ ಎಂದು ಬಗ್ಗೆ ಕಂದಾಯ ಇಲಾಖೆ ದಾಖಲೆಗಳು ದೃಢಪಡಿಸಿವೆ.

ಕೊಟ್ಟೂರು ಹೋಬಳಿಯ ಹ್ಯಾಳ್ಯಾ, ಹಂಪಾಪುರ, ದೂಪದಹಳ್ಳಿ, ಬೇವೂರು, ಗಜಾಪುರ, ಕಂದಗಲ್ಲು, ತಿಮ್ಮಲಾಪುರ, ಉಜ್ಜನಿ, ರಾಂಪುರ, ಸಿರಿನಾಯಕನಹಳ್ಳಿ, ಹಿರೇವಡರಹಳ್ಳಿ, ಕೋಡಿಹಳ್ಳಿ, ತೂಲಹಳ್ಳಿ, ಚಿರಿಬಿ, ನಾಗರಕಟ್ಟೆ, ಜೋಳದ ಕೂಡ್ಲಿಗಿ, ಕಾಳಾಪುರ, ಕೆ. ಅಯ್ಯನಹಳ್ಳಿ, ಚಪ್ಪರದಹಳ್ಳಿ, ಕನ್ನನಾಯಕಕಟ್ಟೆ ಕಂದಾಯ ಗ್ರಾಮಗಳು ಸೇರಿವೆ.

ಹೊಸಹಳ್ಳಿ ಹೋಬಳಿಯ ಸುಂಕದಕಲ್ಲು ಗ್ರಾಮವನ್ನು ಮಾತ್ರ ಹೊಸ ತಾಲ್ಲೂಕಿಗೆ ಸೇರ್ಪಡೆ ಮಾಡಲಾಗಿದೆ. ಸುಂಕದಕಲ್ಲು ಗ್ರಾಮ ಕೊಟ್ಟೂರು ಹೋಬಳಿಯ ರಾಂಪುರ ಗ್ರಾಮ ಪಂಚಾಯಿತಿಗೆ ಹಾಗೂ ಹಗರಿಬೊಮ್ಮನಹಳ್ಳಿ ವಿಧಾನ ಸಭಾ ಕ್ಷೇತ್ರಕ್ಕೆ ಸೇರಿದೆ. ಈ ಕಾರಣಕ್ಕೆ ಈ ಗ್ರಾಮವನ್ನು ಕೊಟ್ಟೂರು ತಾಲ್ಲೂಕು ವ್ಯಾಪ್ತಿಗೆ ಸೇರಿಸಲಾಗಿದೆ ಎನ್ನಲಾಗಿದೆ.

ಹಗರಿಬೊಮ್ಮನಹಳ್ಳಿ ತಾಲ್ಲೂಕು ಕೋಗಳಿ ಹೋಬಳಿಯ ಕಂದಾಯ ಗ್ರಾಮಗಳಾದ ಕೋಗಳಿ, ಕನ್ನೇಹಳ್ಳಿ, ಅಂಬ್ಳಿ, ಕುಡಿತಿನಮಗ್ಗಿ, ಅಲುಬೂರು, ಕೋಡಿಹಳ್ಳಿ, ಶ್ರೀರಾಮನಗರ ಹೊಸ ತಾಲ್ಲೂಕಿಗೆ ಸೇರಿವೆ.

ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಾದ ಉಜ್ಜನಿ, ಚಿರಿಬಿ, ಕೋಗಳಿ. ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳು: ದೂಪದಹಳ್ಳಿ, ತೂಲಹಳ್ಳಿ, ಚಿರಿಬಿ, ಕಾಳಾಪುರ, ಉಜ್ಜನಿ, ರಾಂಪುರ, ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಕೋಗಳಿ ಹಾಗೂ ಅಲುಬೂರು. ಹಾಗೂ ಗ್ರಾಮ ಪಂಚಾಯಿತಿಗಳಾದ ರಾಂಪುರ, ಉಜ್ಜನಿ, ತೂಲಹಳ್ಳಿ, ಕಾಳಾಪುರ, ಕೆ. ಅಯ್ಯನಹಳ್ಳಿ, ದೂಪದಹಳ್ಳಿ, ಕಂದಗಲ್ಲು, ಹ್ಯಾಳ್ಯಾ. ನಾಗರಕಟ್ಟೆ, ಚಿರಿಬಿ, ಕೋಗಳಿ, ಅಂಬ್ಳಿ, ಅಲುಬೂರು ಹೊಸ ತಾಲ್ಲೂಕಿಗೆ ಸೇರಿವೆ.

ಎ.ಎಂ. ಸೋಮಶೇಖರಯ್ಯ

Post Comments (+)