ಟೋಲ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಬಿಜೆಪಿ ಶಾಸಕಿಯ ಪತಿ

ಭಾನುವಾರ, ಜೂನ್ 16, 2019
30 °C

ಟೋಲ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಬಿಜೆಪಿ ಶಾಸಕಿಯ ಪತಿ

Published:
Updated:
ಟೋಲ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಬಿಜೆಪಿ ಶಾಸಕಿಯ ಪತಿ

ರತ್ಲಾಮ್/ಮಧ್ಯಪ್ರದೇಶ: ಬಿಜೆಪಿ ಶಾಸಕಿಯ ಪತಿ ಹಾಗೂ ಅವರ ಗುಂಪು ಇಲ್ಲಿನ ಟೋಲ್ ಸಿಬ್ಬಂದಿಗೆ ಹಿಗ್ಗಾ ಮುಗ್ಗಾ ಥಳಿಸಿದ್ದಾರೆ.

ವಿಜಯ್ ಛಾರಲ್ ಉದ್ಯೋಗಿಗೆ ಥಳಿಸಿದ ವ್ಯಕ್ತಿ. ಇವರು ಸಯ್ಲಾನಾ ಕ್ಷೇತ್ರದ ಬಿಜೆಪಿ ಶಾಸಕಿ ಸಂಗೀತ ಛಾರಲ್ ಅವರ ಪತಿ.

ಈ ಘಟನೆ ಟೋಲ್ ಸಂಗ್ರಹ ಘಟಕದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸಿಸಿಟವಿ ದೃಶ್ಯಾವಳಿಯ ಪ್ರಕಾರ, ಏಕಾಏಕಿ ಟೋಲ್ ಸಂಗ್ರಹ ಘಟಕದ ಒಳಗೆ ನುಗ್ಗಿದ ವಿಜಯ್ ಛಾರಲ್ ಹಾಗೂ ಅವರ ಗುಂಪು ಉದ್ಯೋಗಿಗೆ ನಿರಂತರವಾಗಿ ಹೊಡೆದಿದ್ದಾರೆ. ಇವರ ಈ ದುಷ್ಕೃತ್ಯ ಸಿಸಿಟಿಯಲ್ಲಿ ದಾಖಲಾಗಿದೆ. ಆದರೆ ಇದುವರೆಗೂ ಈ ಹಲ್ಲೆಗೆ ಕಾರಣ ಏನು ಎಂಬುದು ತಿಳಿದು ಬಂದಿಲ್ಲ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry