ಸೋಮವಾರ, ಸೆಪ್ಟೆಂಬರ್ 16, 2019
29 °C

ಆಂಧ್ರಪ್ರದೇಶ: ಭೀಕರ ಅಪಘಾತ 6 ಸಾವು, 7 ಮಂದಿ ಸ್ಥಿತಿ ಗಂಭೀರ

Published:
Updated:
ಆಂಧ್ರಪ್ರದೇಶ: ಭೀಕರ ಅಪಘಾತ 6 ಸಾವು, 7 ಮಂದಿ ಸ್ಥಿತಿ ಗಂಭೀರ

ಕಾಕಿನಾಡ: ಗೋದಾವರಿ ಜಿಲ್ಲೆಯ ಕೋಟಾಪೇಟೆ ಮಂಡಲದ ಮೊದೆಕುರು ಗ್ರಾಮದ ಬಳಿ ಲಾರಿ ಮತ್ತು ಆಟೊ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ 6 ಮಂದಿ ಮೃತಪಟ್ಟಿದ್ದು, 7 ಜನರು ಗಾಯಗೊಂಡಿದ್ದಾರೆ.

ಮೃತರನ್ನು ಸಿ.ಜಿ ನಾಗಮಣಿ(46), ಪಿ.ಭವಾನಿ(25), ಪಿ.ಪಾರ್ವತಿ( 48), ಪಿ.ಅನಂತಲಕ್ಷ್ಮೀ(40), ಪುಲಿಮೆ ಅನಂತಲಕ್ಷ್ಮೀ(45), ಪಿ.ದುರ್ಗಾ ಎಂದು ಗುರುತಿಸಲಾಗಿದೆ. ಪ್ರಕರಣ ದಾಖಲಾಗಿದ್ದು, ವಿಚಾರಣೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಒಟ್ಟು14 ಮಂದಿ ಅಲ್ಲಾವರಂನಿಂದ ವಡಾಪಲ್ಲಿಗೆ ಆಟೋದಲ್ಲಿ ಹೋಗುತ್ತಿದ್ದರು. ಆಗ ಅಮಲಾಪುರಕ್ಕೆ ಹೋಗುತ್ತಿದ್ದ ಲಾರಿ ನೇರವಾಗಿ ಆಟೋದ ಮುಂಭಾಗಕ್ಕೆ ಗುದ್ದಿದ ಪರಿಣಾಮ ಅಪಘಾತ ಸಂಭವಿಸಿದೆ.

ಐದು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದರೆ, ಒಬ್ಬರು ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಪ್ರಾಣ ಕಳೆದುಕೊಂಡಿದ್ದಾರೆ. ಗಾಯಗೊಂಡವರ ಪರಿಸ್ಥಿತಿ ಗಂಭೀರವಾಗಿದೆ.

Post Comments (+)