ಬೆಂಗಳೂರಿಗೆ ಇಂದು ಪ್ರಧಾನಿ; ಬಿಗಿ ಭದ್ರತೆ

ಶುಕ್ರವಾರ, ಮೇ 24, 2019
26 °C

ಬೆಂಗಳೂರಿಗೆ ಇಂದು ಪ್ರಧಾನಿ; ಬಿಗಿ ಭದ್ರತೆ

Published:
Updated:
ಬೆಂಗಳೂರಿಗೆ ಇಂದು ಪ್ರಧಾನಿ; ಬಿಗಿ ಭದ್ರತೆ

ಬೆಂಗಳೂರು: ಅರಮನೆ ಮೈದಾನದಲ್ಲಿ ಇಂದು ನಡೆಯಲಿರುವ ಸೌಂದರ್ಯ ಲಹರಿ ಸಾಮೂಹಿಕ ಪಾರಾಯಣ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪಾಲ್ಗೊಳ್ಳುತ್ತಿರುವುದರಿಂದ ಮೈದಾನದ ಸುತ್ತ ಬಿಗಿ ಪೊಲೀಸ್‌ ಭದ್ರತೆ ಮಾಡಲಾಗಿದೆ.

ಮಧ್ಯಾಹ್ನ 2.30 ಗಂಟೆ ಸುಮಾರಿಗೆ ವಿಶೇಷ ವಿಮಾನದಲ್ಲಿ ಎಚ್‌.ಎ.ಎಲ್ ನಿಲ್ದಾಣಕ್ಕೆ ಬಂದಿಳಿಯಲಿರುವ ಮೋದಿ, ಅಲ್ಲಿಂದ ರಸ್ತೆ ಮಾರ್ಗವಾಗಿ ಅರಮನೆ ಮೈದಾನಕ್ಕೆ ಬರಲಿದ್ದಾರೆ.

‘ಮೂವರು ಹೆಚ್ಚುವರಿ ಪೊಲೀಸ್ ಕಮಿಷನರ್‌ಗಳು, ಏಳು ಡಿಸಿಪಿಗಳು, 28 ಎಸಿಪಿಗಳು ಸೇರಿದಂತೆ ಮೈದಾನದ ಸುತ್ತ 1,200 ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry