ಕಾಯಕಲ್ಪಕ್ಕೆ ಕಾದಿವೆ ಕೊಂಡವಾಡಿ ದೇವಾಲಯಗಳು

ಮಂಗಳವಾರ, ಜೂನ್ 25, 2019
22 °C

ಕಾಯಕಲ್ಪಕ್ಕೆ ಕಾದಿವೆ ಕೊಂಡವಾಡಿ ದೇವಾಲಯಗಳು

Published:
Updated:
ಕಾಯಕಲ್ಪಕ್ಕೆ ಕಾದಿವೆ ಕೊಂಡವಾಡಿ ದೇವಾಲಯಗಳು

ಕೊಡಿಗೇನಹಳ್ಳಿ: ಮಧುಗಿರಿ ತಾಲ್ಲೂಕಿನ ಪುರವರ ಹೋಬಳಿ ಕೊಂಡವಾಡಿ ದೇವಾಲಯಗಳ ಗ್ರಾಮ ಎಂದೇ ಪ್ರಸಿದ್ಧಿ. ಇಂತಿಪ್ಪ ಗ್ರಾಮದಲ್ಲಿ ಹಲವು ದೇವಾಲಯಗಳು ಮೂಲೆಗುಂಪಾಗಿವೆ. ಕಾಯಕಲ್ಪವನ್ನು ಎದುರು ನೋಡುತ್ತಿವೆ.

ಒಂದು ಸಮಯದಲ್ಲಿ ಮುಮ್ಮಡಿ ಪಟ್ಟಣ ಎನ್ನುವ ಖ್ಯಾತಿ ಗ್ರಾಮಕ್ಕೆ ಇತ್ತು. ಬನಶಂಕರಿ (ಚೌಡೇಶ್ವರಿ), ರಾಮಲಿಂಗೇಶ್ವರ, ಕಾಟಮಲಿಂಗೇಶ್ವರ, ಆಂಜನೇಯ, ಬಿಸಿಲು ಮಲ್ಲೇಶ, ಶನೇಶ್ಚರ ಸ್ವಾಮಿ, ವೀರಭದ್ರ, ಸಪ್ಪಲಮ್ಮ, ಮಾರಮ್ಮ, ಮುಳಕಟ್ಟಮ್ಮ, ಧರ್ಮಮ್ಮ, ಏಳುಮಂದೆಮ್ಮ, ಈರಚಿಕ್ಕಮ್ಮ ದೇವಸ್ಥಾನಗಳು ಸದ್ಯ ಅಸ್ತಿತ್ವದಲ್ಲಿ ಇವೆ. ಆದರೆ ಬಹುತೇಕ ದೇವಾಲಯಗಳಿಗೆ ಅಭಿವೃದ್ಧಿ ಎನ್ನುವುದು ಮರೀಚಿಕೆಯಾಗಿದೆ.

1518ರಲ್ಲಿ ಆದಿಲ್ ಶಾಹಿಗಳು ಗ್ರಾಮದ ಮೇಲೆ ಮುತ್ತಿಗೆ ಹಾಕಿದರು. ಅರಮನೆ, ಗುರುಮನೆ, ಮಠ, ಮಂದಿರಗಳನ್ನು ಧ್ವಂಸ ಮಾಡಿದರು. ಗುರುಗಳಾದ ಸಿದ್ದಯ್ಯ ದೇವರ ಮನವಿ ಮೇರೆಗೆ ರಾಮಲಿಂಗೇಶ್ವರ ಸ್ವಾಮಿ, ವೀರಭದ್ರ ಮತ್ತು ಬನಶಂಕರಿ ದೇವಸ್ಥಾನಗಳನ್ನು ನಾಶಮಾಡಲಿಲ್ಲ.

  ಕಾಲ ಸರಿದಂತೆ ಇಲ್ಲಿನ ದೇವಾಲಯಗಳು ಮೂಲೆಗುಂಪಾಗಿವೆ. ವಿಶೇಷ ಅಂದರೆ ದೇವಾಲಯಗಳು ಸಮುದಾಯವಾರು ಹಂಚಿಕೆಯಾಗಿವೆ. ಕೆಲವು ಪ್ರಬಲ ಸಮುದಾಯಗಳ ದೇವಸ್ಥಾನಗಳು ಅಭಿವೃದ್ಧಿ ಕಂಡರೆ ಇನ್ನು ಕೆಲವು ಸಮುದಾಯಗಳ ದೇವಸ್ಥಾನಗಳು ಅವಸಾನದತ್ತ ಸಾಗಿವೆ. ‌‌ವೀರಗಲ್ಲುಗಳು ರಕ್ಷಣೆ ಇಲ್ಲದೆ ಬಿದ್ದಿವೆ. ಆದ್ದರಿಂದ ನಾಶದ ಹಂತ ತಲುಪಿರುವ ದೇವಾಲಯಗಳ ಅಭಿವೃದ್ಧಿಗೆ ಮುಜರಾಯಿ ಮತ್ತು ಪುರಾತತ್ವ ಇಲಾಖೆ ಮುಂದಾಗಬೇಕು ಎಂದು ಗ್ರಾಮಸ್ಥ ನರಸಪ್ಪ ಆಗ್ರಹಿಸುವರು.

ಚೌಡೇಶ್ವರಿ ದೇವಸ್ಥಾನ ಮಾತ್ರ ಸುಸ್ಥಿತಿಯಲ್ಲಿ ಇದೆ. ಹಿಂದೆ ಮುಮ್ಮಡಿ ಪಟ್ಟಣವನ್ನ ನಾಡಗೌಡ ಎಂಬ ರಾಜ ಆಳ್ವಿಕೆ ಮಾಡುತ್ತಿದ್ದ. ಆಗ ದೇವಿ ಪಾರ್ವತಿ ಕುಂಚಿಟಿಗ ಮತ್ತು ಶೈವ ಬಣಜಿಗರ ಅಗಳಿ ಸಾಹುಕಾರ ಬನಪ್ಪಶೆಟ್ಟರಿಗೆ ಕೊರವಂಜಿ ರೂಪದಲ್ಲಿ ದರ್ಶನ ನೀಡಿದಳು. ಇದರ ಅಂಗವಾಗಿ ‌ ಗ್ರಾಮದ ರಸ್ತೆ ಪಕ್ಕದ ತೋಪಿನಲ್ಲಿ ದೇವಾಲಯ ನಿರ್ಮಿಸಿದ್ದಾರೆ ಎಂದು ಪುರಾಣ ಕಥೆಗಳಲ್ಲಿ ಹೇಳಲಾಗಿದೆ. ಐದು ವರ್ಷಕ್ಕೊಮ್ಮೆ ಬನದ ಹುಣ್ಣಿಮೆ ದಿನ ಅದ್ಧೂರಿಯಾಗಿ ಜಾತ್ರೆ ನಡೆಯುತ್ತದೆ.

 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry