ಡಯಟ್‌ಗಾಗಿ ಕಾಫಿ ಬಿಟ್ಟಿದ್ದೀನಿ

ಗುರುವಾರ , ಜೂನ್ 20, 2019
29 °C

ಡಯಟ್‌ಗಾಗಿ ಕಾಫಿ ಬಿಟ್ಟಿದ್ದೀನಿ

Published:
Updated:
ಡಯಟ್‌ಗಾಗಿ ಕಾಫಿ ಬಿಟ್ಟಿದ್ದೀನಿ

ಚಂದನವನದ ಬೋಲ್ಡ್‌ ನಟಿ ನೀತು ಶೆಟ್ಟಿ, ‘ಪೂಜಾರಿ’ ಸಿನಿಮಾ ಮೂಲಕ ಎಲ್ಲರ ಗಮನ ಸೆಳೆದವರು. ನಂತರ ಹಲವು ಸಿನಿಮಾ ಮಾಡಿದರೂ ಇವರಿಗೆ ಬ್ರೇಕ್‌ ಸಿಕ್ಕಿದ್ದು ಬಿಗ್‌ಬಾಸ್‌ ರಿಯಾಲಿಟಿ ಷೋ ಮೂಲಕ. ಗುಂಡುಗುಂಡಾಗಿ ಮುದ್ದಾಗಿದ್ದ ನೀತು ಅವರಿಗೆ ಸಣ್ಣಗಾಗುವ ಆಸೆಯಾಗಿ 40 ದಿನದಲ್ಲಿ 9 ಕೆ.ಜಿ ಇಳಿಸಿಕೊಂಡಿದ್ದಾರೆ.

‘ಯೋಗ, ಹೊರಾಂಗಣ ಆಟಗಳನ್ನು ಆಡಿಕೊಂಡು ಆರಾಮಾಗಿ ಇದ್ದೆ. ನನಗೆ ಈ ಜಿಮ್ ಮಾಡೋದಿಕ್ಕೆ ನಿಜಕ್ಕೂ ಇಷ್ಟವಿಲ್ಲ’ ಎನ್ನುತ್ತಿದ್ದ ನೀತು, ಈಗ ರಘು ರಾಮಪ್ಪ ಅವರ ಬಳಿ ಜಿಮ್‌ ತರಬೇತಿ ಪಡೆಯುತ್ತಿದ್ದಾರೆ. ಸಣ್ಣಗಾಗಲೇ ಬೇಕು ಎಂಬ ಜಿದ್ದಿಗೆ ಅವರು ಬೀದಿಲ್ಲ, ಆರೋಗ್ಯವಂತವಾಗಿರಬೇಕು ಎನ್ನುವ ಧೋರೆಣೆ ಅವರದ್ದು.

ವೈದ್ಯರ ಸಲಹೆ ಮೇರೆಗೆ ಭೇಟಿ ಮಾಡಿ ‘ಕಿಟೋ’ ಎಂಬ ಡಯಟ್‌ ಮಾಡಿದ್ದಾರೆ. ಮೊದಲ 40 ದಿನದಲ್ಲೇ 9 ಕೆ.ಜಿ. ತೂಕ ಇಳಿಸಿಕೊಂಡಿರುವುದು ಈ ಡಯಟ್‌ನ ಹೆಗ್ಗಳಿಕೆ.

‘ಡಯಟ್ ಮಾಡುವುದು ತೀರ ಕಷ್ಟದ ಕೆಲಸವೇನಲ್ಲ. ಆದರೆ ಸರಿಯಾದ ಮಾರ್ಗದರ್ಶನವಿರಬೇಕು. ಹಾಗೇ ನಿಮ್ಮ ದೇಹಕ್ಕೆ ಯಾವುದು ಹೊಂದುತ್ತದೆ ಎಂದು ತಿಳಿದುಕೊಂಡು ಮಾಡಿ. ಜಿಮ್‌, ಈಜು, ಹೊರಾಂಗಣ ಆಟ, ಯೋಗ ಹೀಗೆ ಯಾವುದು ಹೊಂದುತ್ತದೆಯೋ ಅದನ್ನು ಮಾಡಬಹುದು. ಇದಕ್ಕೆ ಆಹಾರದಲ್ಲೂ ನಿಯಂತ್ರಣವಿರಬೇಕು’ ಎನ್ನುತ್ತಾರೆ ನೀತು.

ನೀತುಗೆ ದಕ್ಷಿಣ ಭಾರತೀಯ ಆಹಾರ ತುಂಬಾ ಇಷ್ಟವಂತೆ. ‌ಅದರಲ್ಲೂ ಅನ್ನ, ಚಿಕನ್ ಬಿಟ್ಟಿರಲಾರರು. ‘ಕಿಟೋ’ ಡಯಟ್‌ನಲ್ಲಿ ಅನ್ನ, ಹಾಲು, ಎಣ್ಣೆ ಸೇವನೆ ನಿಷಿದ್ಧ. ಇವರಿಗೆ ಫಿಲ್ಟರ್‌ ಕಾಫಿ ತುಂಬಾ ಇಷ್ಟ. ಆದರೆ ಈಗ ಹಾಲು, ಸಕ್ಕರೆಯಿಲ್ಲದ ಬ್ಲಾಕ್ ಕಾಫಿ ಸೇವಿಸುತ್ತಿದ್ದಾರೆ.

ಚರ್ಮದ ಆರೈಕೆ ಬಗ್ಗೆ ಕೇಳಿದರೆ ‘ಈ ಪ್ರಶ್ನೆಗೆ ಉತ್ತರಿಸಲು ಸರಿಯಾದ ವ್ಯಕ್ತಿ ನಾನಲ್ಲ’ ಎನ್ನುತ್ತಾರೆ. ‘ಹೆಚ್ಚಾಗಿ ಬ್ಯೂಟಿಪಾರ್ಲರ್‌ಗೆ ನಾನು ಹೋಗುವುದಿಲ್ಲ. ಸೌಂದರ್ಯ ಎನ್ನುವುದು ನನ್ನೊಳಗೆ ಇರುತ್ತದೆ. ಇರುವ ದೇಹಸಿರಿಯಲ್ಲೇ ಆತ್ಮವಿಶ್ವಾಸದಿಂದ ಖುಷಿಯಾಗಿ ಇರಬೇಕು’ ಎನ್ನುತ್ತಾರೆ. 

***

ಡಯಟ್‌ ಚಾರ್ಟ್‌

* ವೈಯಕ್ತಿಕ ತರಬೇತುದಾರ: ರಘು ರಾಮಪ್ಪ

*ಇಷ್ಟವಾದ ಆಹಾರ: ಕಾಫಿ, ಅನ್ನ

*ಹವ್ಯಾಸ: ಹೋರಾಂಗಣ ಆಟ, ಯೋಗ

*ಬೆಳಿಗ್ಗೆ: ಬ್ಲಾಕ್‌ ಕಾಫಿ, ಒಂದು ಮೊಟ್ಟೆ

*ಮಧ್ಯಾಹ್ನ: ಗ್ರಿಲ್ ಚಿಕನ್, ತರಕಾರಿ

*ರಾತ್ರಿ: ಹಸಿರು ಸೊಪ್ಪಿನ ಸಲಾಡ್, ಬೇಯಿಸಿದ ತರಕಾರಿ

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry