ಕುಣಿಗಲ್‌– ಮದ್ದೂರು ಹೆದ್ದಾರಿಯ ತೊರೆಶೆಟ್ಟಹಳ್ಳಿ ಬಳಿ ದಿಬ್ಬಣದ ಕ್ಯಾಂಟರ್‌ ಉರುಳಿ 11 ಮಂದಿ ಸಾವು

ಭಾನುವಾರ, ಮೇ 26, 2019
26 °C

ಕುಣಿಗಲ್‌– ಮದ್ದೂರು ಹೆದ್ದಾರಿಯ ತೊರೆಶೆಟ್ಟಹಳ್ಳಿ ಬಳಿ ದಿಬ್ಬಣದ ಕ್ಯಾಂಟರ್‌ ಉರುಳಿ 11 ಮಂದಿ ಸಾವು

Published:
Updated:
ಕುಣಿಗಲ್‌– ಮದ್ದೂರು ಹೆದ್ದಾರಿಯ ತೊರೆಶೆಟ್ಟಹಳ್ಳಿ ಬಳಿ ದಿಬ್ಬಣದ ಕ್ಯಾಂಟರ್‌ ಉರುಳಿ 11 ಮಂದಿ ಸಾವು

ಮಂಡ್ಯ: ಕುಣಿಗಲ್‌– ಮದ್ದೂರು ಹೆದ್ದಾರಿಯ ತೊರೆಶೆಟ್ಟಹಳ್ಳಿ ಗ್ರಾಮದ ಬಳಿ ಭಾನುವಾರ ಕ್ಯಾಂಟರ್‌ ಉರುಳಿಬಿದ್ದು 11 ಮಂದಿ ಮೃತಪಟ್ಟು, 40ಕ್ಕೂ ಹೆಚ್ಚು ಜನರು  ಗಾಯಗೊಂಡಿದ್ದಾರೆ.

ಮೃತರು ತಾಲ್ಲೂಕಿನ ಗಡಿ ಗ್ರಾಮಗಳಾದ ಯಡಾನಹಳ್ಳಿ ಹಾಗೂ ಅವಸರದಹಳ್ಳಿ ಗ್ರಾಮಕ್ಕೆ ಸೇರಿದವರು. ಮದುವೆಯಲ್ಲಿ ಪಾಲ್ಗೊಳ್ಳಲು ಮದ್ದೂರು ಪಟ್ಟಣಕ್ಕೆ ಬರುತ್ತಿದ್ದ ಬೀರಮ್ಮ (51), ಶಿವಣ್ಣ (45), ಸೋನು(4), ರೇಣುಕಮ್ಮ(40), ಮೀನಾಕ್ಷಿ (38), ಜಯಮ್ಮ (47), ಪಾರ್ವತಮ್ಮ(48) ಮಾದಮ್ಮ (63), ಸಣ್ಣಮ್ಮ (60),ಕರಿಯಪ್ಪ(51) ಮೃತಪಟ್ಟಿದ್ದಾರೆ. ಮತ್ತೊಬ್ಬರ ಹೆಸರು ತಿಳಿದು ಬಂದಿಲ್ಲ.

ಮತ್ತೊಂದು ವಾಹನವನ್ನು ಹಿಂದಿಕ್ಕಲು ಹೋಗಿ ಕ್ಯಾಂಟರ್‌ ಮರಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ವಾಹನ ಉರುಳಿ ಬಿದ್ದಿದೆ. ನಾಲ್ವರು ಮದ್ದೂರು ಆಸ್ಪತ್ರೆಯಲ್ಲಿ ಮೃತಪಟ್ಟರೆ, ಐವರು ಜಿಲ್ಲಾಸ್ಪತ್ರೆಯಲ್ಲಿ ಸಾವನ್ನಪ್ಪಿದರು ಎಂದು ಪೊಲೀಸರು ತಿಳಿಸಿದರು. ಗಾಯಗೊಂಡವರನ್ನು ಮದ್ದೂರು ತಾಲ್ಲೂಕು ಆಸ್ಪತ್ರೆ ಹಾಗೂ ಮಂಡ್ಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry