ನಾಲ್ಕು ಎಕರೆ ಕಬ್ಬು ಸಂಪೂರ್ಣ ಭಸ್ಮ

ಮಂಗಳವಾರ, ಜೂನ್ 25, 2019
30 °C

ನಾಲ್ಕು ಎಕರೆ ಕಬ್ಬು ಸಂಪೂರ್ಣ ಭಸ್ಮ

Published:
Updated:

ಭಾಲ್ಕಿ: ತಾಲ್ಲೂಕಿನ ಉಚ್ಚಾ ಗ್ರಾಮದ ರೈತ ವಿದ್ಯಾಸಾಗರ ಬಾಬುರಾವ ಅವರ ಹೊಲದಲ್ಲಿ ಬೆಳೆದ ಕಬ್ಬು ಶನಿವಾರ ಬೆಂಕಿಗೆ ಆಹುತಿಯಾಗಿದೆ. ಹೊಲದಲ್ಲಿ ಹಾದುಹೋಗಿರುವ ವಿದ್ಯುತ್ ತಂತಿ ಕಡಿದು ಬಿದ್ದು ನಾಲ್ಕು ಎಕರೆ ಪ್ರದೇಶದಲ್ಲಿ ಬೆಳೆಯಲಾಗಿದ್ದ ಕಬ್ಬು ಸಂಪೂರ್ಣ ಸುಟ್ಟು ಹೋಗಿದೆ. ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬರುವ ವೇಳೆಗಾಗಲೇ ಬಹುತೇಕ ಬಹುತೇಕ ಕಬ್ಬು ಸುಟ್ಟು ಭಸ್ಮವಾಗಿದೆ.

ರೈತ ವಿದ್ಯಾಸಾಗರ ಬಾಬುರಾವ ಅವರ ಜಮೀನು ಮೂಲಕ ಬ್ಯಾಲಹಳ್ಳಿ ಡಬ್ಲ್ಯು, ವರವಟ್ಟಿ ಗ್ರಾಮದ ಹೊಲಗಳಿಗೆ ಸಂಪರ್ಕ ಕಲ್ಪಿಸುವ ಎಸ್.ಟಿ ಲೈನ್ ಹಾದು ಹೋಗಿದೆ. ತುಂಬಾ ಹಳೆಯದಾಗಿದ್ದ ತಂತಿಗಳು ಬಹು ದಿನಗಳಿಂದ ಸಡಿಲಗೊಂಡಿವೆ. ನಷ್ಟ ಪರಿಹಾರಕ್ಕೆ ಸರ್ಕಾರ ಸಹಾಯ ಮಾಡಬೇಕು ಎಂದು ರೈತ ವಿದ್ಯಾಸಾಗರ ಆಗ್ರಹಿಸಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry