ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಸಿ ಕ್ರೀಡೆ ಉಳಿಸಲು ಸಲಹೆ

Last Updated 30 ಅಕ್ಟೋಬರ್ 2017, 6:31 IST
ಅಕ್ಷರ ಗಾತ್ರ

ಲಕ್ಷ್ಮೇಶ್ವರ: ‘ಅಪ್ಪಟ ದೇಸಿ ಕ್ರೀಡೆ ಕಬಡ್ಡಿಗೆ ತನ್ನದೆ ಆದ ಇತಿಹಾಸವಿದೆ. ಪಾಶ್ಚಿಮಾತ್ಯ ಆಟಗಳ ಮೋಹಕ್ಕೆ ಒಳಗಾಗಿರುವ ಯುವಕರು ದೇಸಿ ಕ್ರೀಡೆಗಳನ್ನು ಮರೆಯು
ತ್ತಿದ್ದಾರೆ’ ಎಂದು ಶಾಸಕ ರಾಮಕೃಷ್ಣ ದೊಡ್ಡಮನಿ ಆತಂಕ ವ್ಯಕ್ತಪಡಿಸಿದರು. ಸಮೀಪದ ಸೂರಣಗಿ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಗುರು ರಾಘವೇಂದ್ರ ಯುವಕ ಮಂಡಳದ ಆಶ್ರಯದಲ್ಲಿ ನಡೆದ ಹೊನಲು ಬೆಳಕಿನ ಮುಕ್ತ ಕಬಡ್ಡಿ ಪಂದ್ಯಾವಳಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಕಬಡ್ಡಿಗೆ 400 ವರ್ಷಗಳ ಇತಿಹಾಸ ಇದೆ. ಈ ಕ್ರೀಡೆಯಿಂದ ಯುವಕರಲ್ಲಿ ಗಟ್ಟಿತನ ಹಾಗೂ ಚುರುಕುತನ ಬರುತ್ತದೆ. ವ್ಯಕ್ತಿತ್ವ ವಿಕಾಸಕ್ಕೆ ಪೂರಕವಾಗಿದೆ’ ಎಂದರು.
ಗ್ರಾಮ ಪಂಚಾಯ್ತಿ ಅಧ್ಯಕ್ಷ ವಿರೂಪಾಕ್ಷಪ್ಪ ಶೀರನಹಳ್ಳಿ, ಜಿಲ್ಲಾ ಪಂಚಾಯ್ತಿ ಸದಸ್ಯ ಎಸ್.ಪಿ.ಬಳಿಗಾರ, ತಾಲ್ಲೂಕು ಪಂಚಾಯ್ತಿ ಸದಸ್ಯೆ ಚನ್ನಮ್ಮ ಹಿರೇಮಠ, ಕೋಟೆಪ್ಪ ವರ್ದಿ, ಸುರೇಶ ಛಬ್ಬಿ, ಅಶೋಕ ಇಚ್ಚಂಗಿ, ವೀರಬಸಪ್ಪ ಕಳ್ಳಿಹಾಳ, ರಾಮಣ್ಣ ಮಾಸ್ತಮ್ಮನವರ, ಮಂಜುನಾಥ ಹಾವಳಕೇರಿ, ದುದ್ದುಸಾಬ್‌ ಕೋಲ್ಕಾರ, ವಿರೂಪಾಕ್ಷಪ್ಪ ಶೀರನ
ಹಳ್ಲಿ, ಶಿವಪ್ಪ ಬಸಾಪುರ, ಶರಣಪ್ಪ ಇಚ್ಚಂಗಿ, ಸೋಮಣ್ಣ ದೊಡಗಣ್ಣವರ, ಮಹಾದೇವಪ್ಪ ಗೊಲ್ಲರ, ಬಾಬಣ್ಣ ಲಮಾಣಿ, ನಾಗರಾಜ ಪೂಜಾರ, ಅಶೋಕ ಇಚ್ಚಂಗಿ ಇದ್ದರು.

60 ತಂಡಗಳು ಭಾಗಿ: ರಾಜ್ಯದ ವಿವಿಧ ಜಿಲ್ಲೆಗಳಿಂದ ಒಟ್ಟು 60 ತಂಡಗಳು ಹೊನಲು ಬೆಳಕಿನ ಮುಕ್ತ ಕಬಡ್ಡಿ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು. ಅಂತಿಮ ಹಣಾಹಣಿಯಲ್ಲಿ ದಾವಣಗೆರೆ ತಂಡ ಗದುಗಿನ ಎಂ.ವೈ.ಎಸ್ ಮುಳಗುಂದ ತಂಡವನ್ನು ಮಣಿಸಿ ಗೆಲುವಿನ ನಗೆ ಬೀರಿತು.

ಮುಳಗುಂದ ತಂಡ ದ್ವಿತೀಯ ಮತ್ತು ಹಾವೇರಿ ಜಿಲ್ಲೆಯ ಬಿ.ಎಲ್.ಆರ್ ಕರ್ಜಗಿಯ ಯುವಕ ತಂಡ ತೃತೀಯ ಹಾಗೂ ಕವಲೆತ್ತು ಗ್ರಾಮದ ದುರ್ಗಾಂಬಿಕಾ ಯುವಕ ಮಂಡಳ ನಾಲ್ಕನೆಯ ಸ್ಥಾನ ಗಳಿಸಿದವು. ಕೃಷ್ಣಾಪುರ ಗ್ರಾಮದ ಲಗಾನ್ ಬಾಯ್ಸ್ ಉತ್ತಮ ತಂಡ ಪ್ರಶಸ್ತಿ ಪಡೆದುಕೊಂಡಿತು. ಸೂರಣಗಿಯ ರಾಘವೇಂದ್ರ ಯುವಕ ಮಂಡಳದ ಸಂತೋಷ ಮೂಲಿಮನಿ ಮತ್ತು ದಾವಣಗೆರೆ ತಂಡದ ಮನೋಹರ ಉತ್ತಮ ದಾಳಿಗಾರ ಪ್ರಶಸ್ತಿ ಗಳಿಸಿದರು. ಬಿ.ಎಚ್.ಹಡಪದ, ಎಂ.ಎನ್.ಮಲ್ಲಾಡದ, ಎಸ್.ಪಿ.
ಮಾದರ, ಎಸ್.ಎಸ್.ರವದಿ ಎಸ್.ಎಸ್.ಪಾಟೀಲ ಮುಖ್ಯ ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT