ಶುಕ್ರವಾರ, ಸೆಪ್ಟೆಂಬರ್ 20, 2019
23 °C

ಬನ್ಸಾಲಿ ಚಿತ್ರದಲ್ಲಿನ ಮಹಿಳಾ ಪಾತ್ರಗಳ ಚಿತ್ರಣ

Published:
Updated:
ಬನ್ಸಾಲಿ ಚಿತ್ರದಲ್ಲಿನ ಮಹಿಳಾ ಪಾತ್ರಗಳ ಚಿತ್ರಣ

ಸಂಜಯ್‌ ಲೀಲಾ ಬನ್ಸಾಲಿ ನಿರ್ದೇಶನದ ಚಿತ್ರ ‘ಪದ್ಮಾವತಿ’ ಈವರೆಗೂ ಟ್ರೇಲರ್‌, ದೀಪಿಕಾ, ಶಾಹಿದ್‌, ರಣವೀರ್‌ ಜತೆ ಖುದ್ದು ಬನ್ಸಾಲಿ ಅವರ ಕಾರಣಕ್ಕಾಗಿ ಸುದ್ದಿಯಲಿತ್ತು. ಆದರೆ, ಈಗ ಅದಿತಿಯ ಮಾತುಗಳಿಂದಾಗಿ ಮತ್ತೆ ಸುದ್ದಿಯಲ್ಲಿದೆ.

ಚಿತ್ರದಲ್ಲಿ ಅದಿತಿಯದ್ದು ಸಣ್ಣ ಪಾತ್ರವೇ ಆದರೂ ಮಹತ್ವಪೂರ್ಣವಾದುದು ಎಂಬುದು ಅವರಿಗೆ ಸಮಾಧಾನ ತಂದಿದೆ. ಚಿತ್ರದಲ್ಲಿ ರಣವೀರ್‌ ಸಿಂಗ್‌ ಹೆಂಡತಿಯಾಗಿ ಅವರು ಕಾಣಿಸಿಕೊಂಡಿದ್ದಾರೆ. ‘ಈ ಚಿತ್ರಕ್ಕೆ ಸಹಿ ಮಾಡುವಾಗಲೇ ನನ್ನದು ಸಣ್ಣ ಪಾತ್ರವೆಂದು ತಿಳಿದಿತ್ತು. ಆದರೆ ಪಾತ್ರದ ಮಹತ್ವ ಅರಿತು ಒಪ್ಪಿಕೊಂಡೆ. ಅಲ್ಲದೆ ಬನ್ಸಾಲಿ ಯಾವಾಗಲೂ ತಮ್ಮ ಸಿನಿಮಾಗಳಲ್ಲಿ ಮಹಿಳಾ ಪಾತ್ರವನ್ನು ಬಹಳ ಮುತುವರ್ಜಿಯಿಂದ ಹಾಗೂ ಅತ್ಯುತ್ತಮವಾಗಿ ಚಿತ್ರಿಸುತ್ತಾರೆ. ಈ ಎಲ್ಲಾ ಕಾಣಗಳು ಚಿತ್ರ ಒಪ್ಪಿಕೊಳ್ಳಲು ಕಾರಣವಾಯಿತು’ ಎಂದಿದ್ದಾರೆ.

‘ಗೋಲಿಯೋಂ ಕಿ ರಾಸ್‌ಲೀಲಾ ರಾಮ್‌ ಲೀಲಾ’ ಚಿತ್ರದಲ್ಲಿ ರೀಚಾ ಛಡ್ಡಾ ಅವರದ್ದೂ ಸಣ್ಣ ಪಾತ್ರವೇ. ಆದರೂ ಆ ಪಾತ್ರಕ್ಕೆ ಮಹತ್ವಪೂರ್ಣವಾಗಿತ್ತು. ಅಂತೆಯೇ ಈ ಚಿತ್ರದಲ್ಲಿ ನಾನು ಕಾಣಿಸಿಕೊಳ್ಳುವುದು ಕೆಲವೇ ಸಮಯವಾದರೂ ಜನರ ಮನಸ್ಸಲ್ಲಿ ಛಾಪು ಮೂಡಿಸುತ್ತೇನೆ’ ಎಂದು ವಿಶ್ವಾಸದ ಮಾತಾಡುತ್ತಾರೆ ಅದಿತಿ.

Post Comments (+)