ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

31 ಉಪಗ್ರಹಗಳ ಉಡಾವಣೆ

Last Updated 30 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕಾರ್ಟೊಸ್ಯಾಟ್ ಸರಣಿ– 2 ರ ಸಿ 39 ಉಪಗ್ರಹ ಸೇರಿ ಒಟ್ಟು 31 ಉಪಗ್ರಹಗಳ ಉಡಾವಣೆ ಡಿಸೆಂಬರ್‌ ಎರಡನೇ ವಾರ ನಡೆಯಲಿದೆ ಎಂದು ಇಸ್ರೊ ಅಧ್ಯಕ್ಷ ಎ.ಎಸ್‌.ಕಿರಣ್‌ ಕುಮಾರ್‌ ತಿಳಿಸಿದರು.

‘ಪಿಎಸ್‌ಎಲ್‌ವಿ ರಾಕೆಟ್‌ ಮೂಲಕ ಶ್ರೀಹರಿಕೋಟದಿಂದ ಏಕಕಾಲಕ್ಕೆ ಉಡಾವಣೆ ನಡೆಯಲಿದ್ದು, ಇದರಲ್ಲಿ 28 ಉಪಗ್ರಹಗಳು ಬೇರೆ ದೇಶಗಳದ್ದು. ಉಳಿದ ಮೂರು ಉಪಗ್ರಹಗಳು ಭಾರತದ್ದು’ ಎಂದು ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ವಿವರಿಸಿದರು.

ಐಆರ್‌ಎನ್ಎಸ್‌ಎಸ್‌ ಉಪಗ್ರಹದ ಉಡಾವಣೆ ವೇಳೆ ಕಾಣಿಸಿಕೊಂಡ ಸಣ್ಣ ದೋಷದಿಂದ ಉಡಾವಣೆ ವೈಫಲ್ಯವಾಗಿತ್ತು. ಈ ವೈಫಲ್ಯ ಭವಿಷ್ಯದ ಉಡಾವಣೆಗಳ ಮೇಲೆ ಪರಿಣಾಮ ಬೀರುವುದಿಲ್ಲ. ಉಡಾವಣಾ ವಾಹನ ಪಿಎಸ್ಎಲ್‌ವಿಯ ಉಪಗ್ರಹಗಳನ್ನು ಹೊತ್ತ ಗುಮ್ಮಟ್ಟದ ಕವಚ ಬೇರ್ಪಡದ ಕಾರಣ ಉಪಗ್ರಹಗಳು ಅಲ್ಲಿಯೇ ಉಳಿದುಕೊಂಡಿದ್ದವು. ಅವುಗಳನ್ನು ಕಕ್ಷೆಯಲ್ಲಿ ಸೇರಿಸಲು ಸಾಧ್ಯವಾಗಲಿಲ್ಲ. ಇದಕ್ಕೆ ತಾಂತ್ರಿಕ ಕಾರಣಕ್ಕಿಂತಲೂ  ಬಾಹ್ಯ ಮತ್ತು ನೈಸರ್ಗಿಕ ಕಾರಣಗಳು ಮುಖ್ಯ ಎಂದು ಅವರು ತಿಳಿಸಿದರು.

ಭೂ ವೀಕ್ಷಣೆ ಕಾರ್ಟೊಸ್ಯಾಟ್‌ ಉಪಗ್ರಹದ ಪ್ರಧಾನ ಕಾರ್ಯ. ಭೂ ನಕ್ಷೆ ತಯಾರಿ, ನಗರ, ಗ್ರಾಮಾಂತರ ಮತ್ತು ಕರಾವಳಿ ಪ್ರದೇಶಗಳ ಭೂ ಬಳಕೆ ಗುರುತಿಸುವಿಕೆ, ರಸ್ತೆ ಜಾಲದ ಮೇಲೆ ನಿಗಾ, ಭೌಗೋಳಿಕ ಮಾಹಿತಿ ವ್ಯವಸ್ಥೆ, ಗಡಿ ಭಾಗದಲ್ಲಿನ ಚಲನವಲನಗಳ ಮೇಲೆ ಕಣ್ಣಿಡುವುದಕ್ಕೆ ಬಳಸಲಾಗುತ್ತದೆ.

ಮಾರ್ಚ್‌ನಲ್ಲಿ ಚಂದ್ರಯಾನ–2
ಚಂದ್ರಯಾನ–2 ಮುಂದಿನ ಮಾರ್ಚ್‌ನಲ್ಲಿ ಉಡಾವಣೆ ಆಗಲಿದೆ. ಲ್ಯಾಂಡರ್‌, ರೋವರ್‌ ಮತ್ತಿತರ ಉಪಕರಣಗಳ ಪರೀಕ್ಷೆ ಅಂತಿಮ ಹಂತದಲ್ಲಿದೆ. ಇದಾದ ಬಳಿಕ ಜೋಡಣೆ ಕಾರ್ಯ ನಡೆಯಲಿದೆ ಎಂದು ಕಿರಣ್‌ ಕುಮಾರ್‌ ತಿಳಿಸಿದರು.

ಸೂರ್ಯನ ಅಧ್ಯಯನಕ್ಕಾಗಿ ಆದಿತ್ಯಯಾನ–1 ರ ಉಡಾವಣೆ 2019 ರಲ್ಲಿ ನಡೆಯಲಿದೆ. ಸೌರ ಜ್ವಾಲೆಯ ಪ್ರವಾಹ, ಗ್ರಹಣ ಮತ್ತು ಇತರ ವಿಷಯಗಳಿಗೆ ಸಂಬಂಧಿಸಿದ ಅಧ್ಯಯನ ನಡೆಸಲಾಗುತ್ತದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT