ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರದ ಮನೆಯಲ್ಲಿ ಜೀಕಿ...

Last Updated 1 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಪ್ರವಾಸ ಹೋದಾಗ ಅಥವಾ ನಮ್ಮಿಷ್ಟದ ಸ್ಥಳಗಳಿಗೆ ಹೊರಟಾಗ ಅಲ್ಲೇ ಕೂತು ಪ್ರಕೃತಿಯೊಂದಿಗೆ ಕಾಲ ಕಳೆಯುವುದು ಸುಂದರ ಅನುಭವ. ಆದರೆ ಕೂರಲು, ಕಾಲ ಕಳೆಯಲು ಸರಿಯಾದ ಜಾಗ ಸಿಗದೇ ಇರಬಹುದು. ಹಾಗೆಂದು ಆ ಸುಂದರ ಅನುಭವವನ್ನು ಕಳೆದುಕೊಳ್ಳುವುದೇಕೆ?

ಇದೇ ನಿಟ್ಟಿನಲ್ಲೇ ಪ್ರವಾಸಕ್ಕೆ ಅನುವಾಗುವ ಹಲವು ಪರಿಕರಗಳು ಮಾರುಕಟ್ಟೆಯಲ್ಲಿ ಬೇಕಾದಷ್ಟಿವೆ. ಅದಕ್ಕೀಗ ಹೊಸ ಸೇರ್ಪಡೆ ಟ್ರೀ ಪಾಡ್. ಪ್ರಕೃತಿಯೊಂದಿಗೆ ತುಸು ಗಾಳಿಯಲ್ಲಿ ಜೀಕುತ್ತಾ ಅದರ ಸೌಂದರ್ಯದಲ್ಲಿ ಮೈ ಮರೆಯುವುದೇ ಖುಷಿ ಸಂಗತಿ. ಇದು ಪ್ರವಾಸದ ಅನುಭವಕ್ಕೆ ಇಂಬು ಕೊಟ್ಟಂತೆ.

ನದಿಗಳ ಬದಿಯೋ, ಕಾಡಿನ ನಡುವೆ ಕ್ಯಾಂಪಿಂಗ್‌ಗಾಗೋ, ಬೆಟ್ಟದ ಮೇಲೋ ತೂಗಾಡುತ್ತಾ ನಿಸರ್ಗದ ಸೌಂದರ್ಯವನ್ನು ಸವಿಯುವ ಸಲುವಾಗಿ ಟ್ರೀಪಾಡ್ ವಿನ್ಯಾಸಗೊಂಡಿದೆ. ಮರದಲ್ಲಿನ ಪುಟ್ಟ ಮನೆಯಂತೆಯೇ ನೇತುಹಾಕಿ ಅದರೊಳಗೆ ಆರಾಮವಾಗಿ ಕೂತು ಸುತ್ತಲ ಪ್ರಪಂಚವನ್ನು ನೋಡಿ ಕಾಲ ಕಳೆಯಬಹುದು.

ಇದನ್ನು ಮೊಬೈಲ್ ಮರದ ಮನೆ ಎಂದೂ ಕರೆಯಬಹುದು. ಪ್ಯಾಕ್ ಮಾಡಿಕೊಂಡು ಎಲ್ಲಿಗೆ ಬೇಕಾದರೂ ಕೊಂಡೊಯ್ಯಬಹುದಾದಷ್ಟು ಸುಲಭ. ಐದರಿಂದ ಆರು ಅಡಿ ಜಾಗ ಲಭ್ಯ. ಪುಟ್ಟ ಮಕ್ಕಳು ಇಬ್ಬರು, ದೊಡ್ಡವರು ಇಬ್ಬರು ಕೂರಬಹುದಾದಷ್ಟು ಜಾಗವಿದೆ. 15 ಪೌಂಡ್ ತೂಕವಿದ್ದು, 250 ಕೆ.ಜಿವರೆಗೂ ಭಾರ ತಡೆಯಬಲ್ಲದು.

ಭಾರ ತಡೆಯಲೆಂದೇ ವಿಶೇಷ ಸ್ಟೀಲ್ ಫ್ರೇಮ್ ಬಳಸಲಾಗಿದೆ. ದೀರ್ಘ ಕಾಲ ಬಾಳಿಕೆ ಬರಲೆಂದು ಮೆಶ್‌ನಿಂದ ತಯಾರಿಸಲಾಗಿದೆ. ಯುವಿ ಕಿರಣಗಳನ್ನು ತಡೆಹಿಡಿಯಬಲ್ಲ ಶಕ್ತಿ ಇದಕ್ಕಿದೆ. ಜೋಡಿಸುವುದೂ ಬಲು ಸುಲಭ.

ನಾಲ್ಕು ಅಡಿಗಿಂತ ಹೆಚ್ಚು ಎತ್ತರ ತೂಗು ಹಾಕುವಂತಿಲ್ಲ. ಪ್ಲಶ್ ಕುಶನ್, ಮಸ್ಕಿಟೊ ನೆಟ್, ರೇನ್ ಕವರ್ ಮತ್ತು ಸ್ಟ್ಯಾಂಡ್ ಆಯ್ಕೆಯೂ ಇದರಲ್ಲಿರುತ್ತದೆ. ಟೆಂಟ್‌ಸೈಲ್, ಟ್ರೀಝ್‌ನಂಥ ಕಂಪನಿಗಳು ಈ ಟ್ರೀ ಪಾಡ್‌ ವಿನ್ಯಾಸದತ್ತ ಗಮನಹರಿಸಿ ಇವನ್ನು ಇನ್ನಷ್ಟು ಪ್ರವಾಸಿಸ್ನೇಹಿಯಾಗಿ ಪರಿವರ್ತನೆಗೊಳಿಸುವತ್ತ ಯೋಚಿಸುತ್ತಿವೆಯಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT