ಬೆಂಗಳೂರು: ಪ್ರಮುಖ ತಂಪು ಪಾನೀಯ ತಯರಿಕಾ ಸಂಸ್ಥೆ ಪೆಪ್ಸಿಕೊ, ವಿಟಮಿನ್ ಒಳಗೊಂಡಿರುವ ಹೊಸ 'ಅಕ್ವಾಫಿನಾ ವಿಟಮಿನ್ ಸ್ಲ್ಪ್ಯಾಷ್' ಪೇಯವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ.

ಬೆಂಗಳೂರಿನ ಮಾರುಕಟ್ಟೆಗೂ ಕೆಲವೇ ದಿನಗಳಲ್ಲಿ ಪರಿಚಯಿಸಲಾಗುವುದು ಎಂದು ಸಂಸ್ಥೆ ತಿಳಿಸಿದೆ. ಇದು ವಿಟಮಿನ್‌ಯುಕ್ತ ಪೇಯವಾಗಿದ್ದು, ಮಿನರಲ್ಸ್‌ಯುಕ್ತ ಕುಡಿಯುವ ನೀರಿಗಿಂತ ತುಂಬಾ ರುಚಿಕರವಾಗಿದೆ ಎಂದು ಹೇಳಿದೆ.

‘ಆರೋಗ್ಯ ಹೆಚ್ಚಿಸುವಂತಹ ಪಾನೀಯವನ್ನು ಗ್ರಾಹಕರಿಗೆ ಪೂರೈಸಬೇಕು ಎಂಬ ಉದ್ದೇಶದಿಂದ ಇದೇ ಮೊದಲ ಬಾರಿಗೆ ನಮ್ಮ ಸಂಸ್ಥೆ ಎರಡು ಸ್ವಾದಗಳಲ್ಲಿ ಈ ರೀತಿಯ ಪೇಯವನ್ನು ಪರಿಚಯಿಸಿದೆ’ ಎಂದು ಸಂಸ್ಥೆಯ ಪಾನೀಯ ವಿಭಾಗದ ಮುಖ್ಯಸ್ಥ ವಿಪುಲ್ ಪ್ರಕಾಶ್ ತಿಳಿಸಿದ್ದಾರೆ.

‘250 ಮಿ.ಲೀ. ಮತ್ತು 500 ಮಿ.ಲೀ. ಮಾದರಿಗಳಲ್ಲಿ ಇವು ಲಭ್ಯ ಇವೆ. ಇವುಗಳ ಬೆಲೆ ಕ್ರಮವಾಗಿ ₹ 30 ಮತ್ತು ₹ 50’ ಇದೆ. ‘ವಿಟಮಿನ್ ಬಿ12, ಬಿ6, ಒಳಗೊಂಡಿದೆ. ಸಕ್ಕರೆ ಪ್ರಮಾಣವೂ ಕಡಿಮೆ ಇದೆ.

‘ದೇಶದ 20 ಪ್ರಮುಖ ನಗರಗಳ ಮಾರುಕಟ್ಟೆಗೆ ನವೆಂಬರ್ 5ರೊಳಗೆ ಈ ಉತ್ಪನ್ನಗಳನ್ನು ಬಿಡುಗಡೆ ಮಾಡಲಾಗುವುದು.

ಇದರೊಂದಿಗೆ ಸಂಸ್ಥೆಯ ಮಾರುಕಟ್ಟೆಯನ್ನು ಮತ್ತಷ್ಟು ವಿಸ್ತರಿಸುವ ಉದ್ದೇಶವಿದೆ’ ಎಂದೂ ಪ್ರಕಾಶ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.