ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಡುನುಡಿ ಜನಸಾಮಾನ್ಯರಲ್ಲಿ ಸಾಕ್ಷಾತ್ಕಾರವಾಗಲಿ

Last Updated 2 ನವೆಂಬರ್ 2017, 5:45 IST
ಅಕ್ಷರ ಗಾತ್ರ

ದೇವನಹಳ್ಳಿ: ಪರಂಪರೆಯ ನಾಡುನುಡಿ ಜನಸಾಮಾನ್ಯರಲ್ಲಿ ಸಾಕ್ಷಾತ್ಕಾರವಾಗಬೇಕು ಎಂದು ಜೆಡಿಎಸ್‌ ಪಕ್ಷದ  ತಾಲ್ಲೂಕು ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷ ವಿ.ಹನುಮಂತಪ್ಪ ತಿಳಿಸಿದರು.

ಇಲ್ಲಿನ ಪಕ್ಷದ ಕಚೇರಿಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕನ್ನಡದ ಕುಲದೇವತೆ ಶ್ರೀಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.

ಕರ್ನಾಟಕ ರಾಜ್ಯವೆಂದು ನಾಮಕರಣಗೊಂಡ ನಂತರ ಕನ್ನಡದ ಕಂಪು ಪ್ರಗತಿ ಕಂಡಿಲ್ಲ. ಇಂದು ಕನ್ನಡ ಭಾಷೆ ಉಳಿದಿರುವುದು ಗ್ರಾಮೀಣ ಪ್ರದೇಶದಲ್ಲಿ ಮಾತ್ರ. ಅನ್ಯಭಾಷೆಗಳು ಸುಸಂಸ್ಕೃತ ಕನ್ನಡ ಭಾಷೆಯೊಂದಿಗೆ ಮಿಲನಗೊಂಡು ಕಲುಷಿತ ಭಾಷೆಯಾಗಿ ಮಾರ್ಪಟ್ಟಿದೆ ಎಂದರು.

ಆಂಗ್ಲ ಭಾಷೆಯ ವ್ಯಾಮೋಹ, ರಾಜ್ಯದ ಗಡಿ ಭಾಗದಲ್ಲಿ ಕನ್ನಡ ಕಲಿಕಾ ಶಾಲೆಗಳ ಬಗ್ಗೆ ನಿರ್ಲಕ್ಷ್ಯ, ಭಾಷಾಭಿಮಾನದ ಕೊರತೆಯಿಂದ ಕನ್ನಡ ಬೆಳವಣಿಗೆ ಕವಲು ದಾರಿಯಲ್ಲಿ ಸಾಗಿದೆ. ಕನ್ನಡ ರಾಜ್ಯೋತ್ಸವಗಳು ನೆಪ ಮಾತ್ರಕ್ಕೆ ಎಂಬಂತಾಗಿದೆ ಎಂದರು.

ಜೆಡಿಎಸ್ ಪರಿಶಿಷ್ಟ ಜಾತಿ ಘಟಕದತಾಲ್ಲೂಕು ಕಾರ್ಯಾಧ್ಯಕ್ಷ ಎಂ.ಶಂಕರ್, ಹಿರಿಯ ಉಪಾಧ್ಯಕ್ಷ ಆಂಜಿನಪ್ಪ, ಉಪಾಧ್ಯಕ್ಷರಾದ ಎಂ.ಕೆಂಪರಾಜು, ಮುನಿರಾಜು, ನಾರಾಯಣಪ್ಪ, ಶಿವಾನಂದ, ಪ್ರಧಾನ ಕಾರ್ಯದರ್ಶಿ ಎಂ.ಶ್ರೀನಿವಾಸ್, ಕಾರ್ಯದರ್ಶಿಗಳಾದ ಮುನಿರಾಜು, ರಾಮಣ್ಣ, ವೇಣುಗೋಪಾಲ, ನರಸಿಂಹಮೂರ್ತಿ, ಮುಖಂಡರಾದ ಕೆ. ಮಂಜುನಾಥ್, ಚಂದ್ರನಾಯ್ಕ, ಶ್ರೀನಿವಾಸ್, ವೆಂಕಟೇಶ್, ಚಂದ್ರು, ಸಿ.ನಾಗರಾಜು, ಮುನಿಕೃಷ್ಣ, ಗಣೇಶ್ ಬಾಬು ಕಾರ್ಯಕಾರಿ ಮಂಡಳಿ ಸದಸ್ಯರಾದ ನರಸಿಂಹಮೂರ್ತಿ, ಚನ್ನಕೇಶವ, ಮುನಿಕೃಷ್ಣ, ಜಿ.ಮುನಿಕೃಷ್ಣ, ಮುನಿಯಪ್ಪ, ಮುನಿರಾಜು, ಶಿವಾನಂದ, ರವಿಚಂದ್ರ, ರಂಗಪ್ಪ,ರಮೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT