ಮಂಗಳವಾರ, ಮಾರ್ಚ್ 2, 2021
26 °C

‘ರಾಜರು’ ಬರುವರು ದಾರಿ ಬಿಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ರಾಜರು’ ಬರುವರು ದಾರಿ ಬಿಡಿ

ಒಂದೂವರೆ ವರ್ಷ ನಿರಂತರವಾಗಿ ಬರೆದ ಪರೀಕ್ಷೆಯೊಂದು ಮುಗಿದು ಫಲಿತಾಂಶದ ಹೊಸ್ತಿಲಲ್ಲಿ ನಿಂತ ಆತಂಕ ಮತ್ತು ವಿಶ್ವಾಸ ನಿರ್ದೇಶಕ ಗಿರೀಶ ಮೂಲಿಮನಿ ಅವರ ಮಾತುಗಳಲ್ಲಿ ವ್ಯಕ್ತವಾಗುತ್ತಿತ್ತು. ಅವರ ನಿರ್ದೇಶನದ ಮೊದಲ ಸಿನಿಮಾ ‘ರಾಜರು’ ನವೆಂಬರ್‌ 10ಕ್ಕೆ ಬಿಡುಗಡೆಯಾಗುತ್ತಿದೆ. ಇದಕ್ಕೆ ‘ಅರಮನೆ ಇಲ್ಲ, ರಾಣಿ ಹುಡುಕ್ತವ್ರೆ’ ಎಂಬ ಅಡಿಶೀರ್ಷಿಕೆಯೂ ಇದೆ. ಈ ವಿಷಯವನ್ನು ಹಂಚಿಕೊಳ್ಳಲಿಕ್ಕಾಗಿಯೇ ಚಿತ್ರತಂಡ ಪತ್ರಿಕಾಗೋಷ್ಠಿ ಕರೆದಿತ್ತು.

‘ಇವರು ಸ್ನೇಹಕ್ಕೆ ಪ್ರೀತಿಗೆ ಬದುಕಿಗೆ ರಾಜರು’ ಎಂದು ಒಂದೇ ಸಾಲಿನಲ್ಲಿ ತಮ್ಮ ಸಿನಿಮಾದ ನಾಲ್ಕು ಪ್ರಮುಖ ಪಾತ್ರಗಳ ಕುರಿತು ವ್ಯಾಖ್ಯಾನಿಸಿದರು ಗಿರೀಶ್‌. ಅದರ ಜತೆಗೆ ‘ಈ ನಾಲ್ಕು ರಾಜರಿಗೆ ರಾಣಿ ಒಬ್ಬಳೆ. ಅದೇ ಈ ಸಿನಿಮಾದ ಸ್ವಾರಸ್ಯ’ ಎಂತಲೂ ಹೇಳಿದರು. ಅದರಾಚೆಗೆ ಕಥೆಯ ಒಂದು ಎಳೆಯನ್ನೂ ಅವರು ಬಿಟ್ಟುಕೊಡಲು ಸಿದ್ಧರಿರಲಿಲ್ಲ.

ನಿರಂಜನ್‌ ಶೆಟ್ಟಿ, ಜಗದೀಶ್‌, ಶರಣ್‌, ಪೃಥ್ವಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ನಾಲ್ವರಿಗೂ ರಾಣಿಯಾಗಿ ಹೈದರಾಬಾದ್‌ನ ನಟಿ ಶಾಲಿನಿ ಕಾಣಿಸಿಕೊಂಡಿದ್ದಾರೆ. ಶಾಲಿನಿ ಅವರು ಮತ್ತೊಂದು ತಮಿಳು ಚಿತ್ರದಲ್ಲಿ ಬ್ಯುಸಿ ಇರುವ ಕಾರಣ ಅವರ ಕಾಲ್‌ಶೀಟ್‌ ಹೊಂದಾಣಿಕೆ ಆಗದೆ ಆರು ತಿಂಗಳು ಕಾಯಬೇಕಾಯ್ತಂತೆ. ಸಿನಿಮಾ ತಡವಾಗಲೂ ಇದೇ ಕಾರಣ ಎಂಬ ಸಂಗತಿಯನ್ನೂ ನಿರ್ದೇಶಕರು ಹೇಳಿಕೊಂಡರು.

ಚಿತ್ರಕ್ಕೆ ಸಂಗೀತ ಸಂಯೋಜಿಸಿರುವ ಶ್ರೀಧರ್‌ ಸಂಭ್ರಮ್‌ ತಮ್ಮ ಹಿಂದಿನ ಯಾವ ಸಿನಿಮಾ ಹಾಡುಗಳ ಸಂಯೋಜನೆಯ ಪ್ರಭಾವವೂ ಕಾಣದಂತೆ ಹೊಸ ರೀತಿಯಲ್ಲಿ ಹಾಡುಗಳನ್ನು ಕಟ್ಟಿದ್ದಾರಂತೆ.

‘ಕಥೆಯೇ ಈ ಚಿತ್ರದ ಶಕ್ತಿ. ಸಂಗೀತ ಅದಕ್ಕೆ ಬೆಂಬಲವಾಗಿದೆ’ ಎಂದರು ನಿರಂಜನ್‌ ಶೆಟ್ಟಿ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.