ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬೀಳ್ಕೊಡುಗೆ ಪಂದ್ಯ ಕೋರಿರಲಿಲ್ಲ’

ಎಂ.ಎಸ್‌. ಕೆ ಪ್ರಸಾದ್‌ಗೆ ವೇಗಿ ನೆಹ್ರಾ ತಿರುಗೇಟು
Last Updated 2 ನವೆಂಬರ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ‘ಆಯ್ಕೆ ಸಮಿತಿಯ ಅನುಮತಿ ಕೇಳಿ ಕ್ರಿಕೆಟ್ ಆಡಲು ಅಂಗಣಕ್ಕೆ ಇಳಿದಿರಲಿಲ್ಲ. ಆದ್ದರಿಂದ ನಿವೃತ್ತಿ ಪಡೆಯುವಾಗಲೂ ಅವರ ಅನುಮತಿಗೆ ಕಾಯಲಿಲ್ಲ’ ಎಂದು ವೇಗದ ಬೌಲರ್‌ ಆಶಿಶ್ ನೆಹ್ರಾ ಹೇಳಿದ್ದಾರೆ.

ಬುಧವಾರ ಇಲ್ಲಿನ ಫಿರೋಜ್ ಕೋಟ್ಲಾ ಅಂಗಣದಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಟಿ–20 ಪಂದ್ಯದ ನಂತರ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಅವರು ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್‌.ಕೆ ಪ್ರಸಾದ್ ಅವರ ಟೀಕೆಗೆ ಈ ರೀತಿ ಉತ್ತರಿಸಿದರು.

ನ್ಯೂಜಿಲೆಂಡ್ ವಿರುದ್ಧದ ಟ್ವೆಂಟಿ–20 ಸರಣಿಯ ನಂತರ ನೆಹ್ರಾ ಅವರನ್ನು ಆಯ್ಕೆಗೆ ಪರಿಗಣಿಸಲಾಗುವುದಿಲ್ಲ ಎಂದು ಪ್ರಸಾದ್ ಇತ್ತೀಚೆಗೆ ಹೇಳಿದ್ದರು.

‘ನಿವೃತ್ತಿಯ ವಿಷಯವನ್ನು ತಂಡದ ನಾಯಕ ವಿರಾಟ್ ಕೊಹ್ಲಿ ಅವರಿಗೆ ತಿಳಿಸಿದ್ದೆ. ಇದಕ್ಕೆ ಪ್ರತಿಕ್ರಿಯಿಸಿದ ಅವರು ಯಾಕೆ ಇಷ್ಟು ಆತುರ, ಐಪಿಎಲ್‌ನಲ್ಲಿ ಆಡಬಹುದು ಅಥವಾ ಕೋಚ್ ಆಗಿ ಕಾರ್ಯನಿರ್ವಹಿಸಬಹುದಲ್ಲವೇ ಎಂದು ಕೇಳಿದರು. ನಾನು ಇದನ್ನು ನಿರಾಕರಿಸಿದೆ’ ಎಂದು ನೆಹ್ರಾ ಹೇಳಿದರು.

‘ವಿದಾಯದ ಪಂದ್ಯಕ್ಕಾಗಿ ನಾನು ಬೇಡಿಕೆ ಇರಿಸಲಿಲ್ಲ. ಆದರೆ ನ್ಯೂಜಿಲೆಂಡ್ ಎದುರಿನ ಪಂದ್ಯ ಆಕಸ್ಮಿಕವಾಗಿ ನನ್ನ ವಿದಾಯ ಪಂದ್ಯ ಆಯಿತು. ಆ ಪಂದ್ಯ ನನ್ನ ತವರು ನೆಲದಲ್ಲೇ ನಡೆದದ್ದು ಕಾಕತಾಳೀಯ’ ಎಂದು ಹೇಳಿದ ಅವರು ‘ತಂಡದ ವ್ಯವಸ್ಥಾಪನ ಮಂಡಳಿಯಲ್ಲಿ ಕೋಚ್ ರವಿಶಾಸ್ತ್ರಿ ಮತ್ತು ನಾಯಕ ವಿರಾಟ್ ಕೊಹ್ಲಿ ಇದ್ದಾರೆ. ಅವರೊಂದಿಗೆ ನಾನು ಮಾತನಾಡಿದ್ದೇನೆ. ಆಯ್ಕೆ ಸಮಿತಿ ಜೊತೆ ಮಾತನಾಡುವುದೇನಿದೆ’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT