ಶನಿವಾರ, ಫೆಬ್ರವರಿ 27, 2021
31 °C

ಸಾಹಿತಿ ಲಕ್ಷ್ಮಣ್‌ಜೀ ನಿಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾಹಿತಿ ಲಕ್ಷ್ಮಣ್‌ಜೀ ನಿಧನ

ಬೆಂಗಳೂರು: ದಲಿತಪರ ಹೋರಾಟಗಾರ, ಚಿಂತಕ, ಸಾಹಿತಿ ಲಕ್ಷ್ಮಣ್‌ಜೀ (60) ಅವರು ಅನಾರೋಗ್ಯದಿಂದ ನಗರದ ನಂದಿನಿ ಲೇ ಔಟ್‌ ಬಡಾವಣೆಯ ತಮ್ಮ ನಿವಾಸದಲ್ಲಿ ಬುಧವಾರ ರಾತ್ರಿ ನಿಧನರಾದರು.

ಅವರಿಗೆ ಪತ್ನಿ, ಪುತ್ರಿ ಮತ್ತು ಇಬ್ಬರು ಪುತ್ರರು ಇದ್ದಾರೆ. ಸದಾಶಿವನಗರದ ಹೈದರಾಬಾದ್‌–ಕರ್ನಾಟಕ ಎಜುಕೇಷನ್‌ ಸೊಸೈಟಿಯ ಕಾಲೇಜಿನಲ್ಲಿ ಗುಮಾಸ್ತರಾಗಿ ಸೇವೆ ಸಲ್ಲಿಸಿ, ಇತ್ತೀಚೆಗಷ್ಟೇ ಅವರು ನಿವೃತ್ತರಾಗಿದ್ದರು.

ಜಾತಿ ವಿನಾಶ ವೇದಿಕೆಯ ಅಧ್ಯಕ್ಷರಾಗಿ ವಿವಿಧ ಜನಪರ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದರು. ಸಾಹಿತ್ಯ ಪರಿಷತ್ತು, ಸಾಹಿತ್ಯ ಅಕಾಡೆಮಿ, ಸೇರಿ ಹಲವು ಗೌರವಗಳಿಗೆ ಪಾತ್ರರಾಗಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.