ಗುರುವಾರ , ಫೆಬ್ರವರಿ 25, 2021
31 °C

ಅ‍ಪರೂಪದ ಸಮಾಧಿಗಳು ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅ‍ಪರೂಪದ ಸಮಾಧಿಗಳು ಪತ್ತೆ

ಮೈಸೂರು: ನಂಜನಗೂಡು ತಾಲ್ಲೂಕಿನ ಬಂಕಳ್ಳಿ ಕಾಲೊನಿಯ ಕೆಂಪಯ್ಯ ಅವರ ಹೊಲದಲ್ಲಿ ದೇಶದಲ್ಲೇ ಅತಿ ಅಪರೂಪ ಎನಿಸಿದ ಸಮಾಧಿಕೋಣೆಗಳು ಪತ್ತೆಯಾಗಿವೆ.

ಈ ರೀತಿಯ ಸಮಾಧಿಗಳು ಬ್ರಿಟನ್ ಹಾಗೂ ಇತರ ದೇಶಗಳಲ್ಲಿ ಮಾತ್ರವೇ ಪತ್ತೆಯಾಗಿದ್ದು, ಭಾರತದಲ್ಲಿ ಕೆಲವೇ ಕೆಲವಷ್ಟೇ ಇವೆ ಎಂದು ಕುವೆಂಪುನಗರ ಸರ್ಕಾರಿ ಪ್ರಥಮದರ್ಜೆ ಕಾಲೇಜು ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಎಸ್.ಜಿ.ರಾಮದಾಸರೆಡ್ಡಿ ತಿಳಿಸಿದ್ದಾರೆ.

ಸಮಾಧಿ ರಚನೆ: ಈ ಸಮಾಧಿಯು 5000 ವರ್ಷಗಳಷ್ಟು ಹಳೆಯದಾಗಿದ್ದು, 89 ಅಡಿ ಸುತ್ತಳತೆ ಹೊಂದಿದೆ. ಇದರ ಮೇಲು ಭಾಗದಲ್ಲಿ 122 ಅಡಿ ಸುತ್ತಳತೆಯ ದೊಡ್ಡ ಬಂಡೆಯಿದೆ. ಇದು 25ರಿಂದ 28 ಟನ್ ತೂಕವಿರಬಹುದೆಂದು ಅಂದಾಜು ಮಾಡಲಾಗಿದೆ. ಇದರಲ್ಲಿ 15-30 ಜನರನ್ನು ಒಟ್ಟಿಗೆ ಹಾಕಿ ಸಮಾಧಿ ಮಾಡಲಾಗಿದೆ. ಭಾರತದಲ್ಲಿ ಇಲ್ಲಿಯವರೆಗೂ ದೊರಕಿರುವ ಸಮಾಧಿಗಳಲ್ಲಿ ಇದು ಅಪರೂಪದ್ದು ಎಂದು ಅವರು ಹೇಳಿದ್ದಾರೆ.

ಹೆಡಿಯಾಲ ಅರಣ್ಯ ಉಪವಿಭಾಗ ವ್ಯಾಪ್ತಿಯ ಬೇಲದಕುಪ್ಪೆ ಮಹದೇಶ್ಪರಸ್ವಾಮಿ ದೇವಾಲಯದ ಮುಂಭಾಗದಲ್ಲಿ ನವಶಿಲಾಯುಗ ಸಂಸ್ಕೃತಿಯ ಕುರುಹುಗಳು ಪತ್ತೆಯಾಗಿವೆ. ಕಲ್ಲಿನ ಆಯುಧಗಳು, 3 ಸಾವಿರ ವರ್ಷಗಳಷ್ಟು ಪ್ರಾಚೀನವಾದ ಬೃಹತ್ ಶಿಲಾಯುಗ ಸಂಸ್ಕೃತಿಯ 2 ಶಿಲಾತೊಟ್ಟಿಗಳು, ಒಂದು ಹಾಸು ಬಂಡೆ, ಒಂದು ಕಂಡಿ ಕೋಣೆ ಸಮಾಧಿಗಳು ಸಿಕ್ಕಿವೆ. ಇದೇ ಹೋಬಳಿಯ ಚಿಕ್ಕಬರಗಿ ಗ್ರಾಮದಲ್ಲಿ ಮೂರು ಕಲ್ಲುವೃತ್ತ ಸಮಾಧಿಗಳು ಸಿಕ್ಕಿವೆ ಎಂದು ಅವರು ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.