ಒರಾಂಗುಟನ್ ಪ್ರಬೇಧ ಪತ್ತೆ

ಜಕಾರ್ತ: ಇಂಡೊನೇಷ್ಯಾದ ದಟ್ಟಾರಣ್ಯದಲ್ಲಿ ಒರಾಂಗುಟನ್ (ನರವಾನರ) ಪ್ರಬೇಧವೊಂದನ್ನು ಪತ್ತೆಹಚ್ಚಲಾಗಿದೆ. ಅಳಿವಿನ ಅಂಚಿನಲ್ಲಿರುವ ದೊಡ್ಡ ಕೋತಿ ಇದಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.
‘ನೂರು ವರ್ಷಗಳ ನಂತರ ಪತ್ತೆಯಾಗಿರುವ ಮೊದಲ ನರವಾನರ ಇದಾಗಿದೆ’ ಎಂದು ಸುಮಾತ್ರಾ ಒರಾಂಗುಟನ್ ಸಂರಕ್ಷಣೆ ಕಾರ್ಯಕ್ರಮದ ನಿರ್ದೇಶಕ ಮತ್ತು ಅಧ್ಯಯನದ ಸಹ ಲೇಖಕ ಇಯಾನ್ ಸಿಂಗಲ್‌ಟನ್ ಹೇಳಿದ್ದಾರೆ.
ಈ ನರವಾನರ ಪ್ರಬೇಧವನ್ನು ‘ತಪಾನುಲಿ ಓರಾಂಗುಟನ್’ ಎಂದು ಕರೆಯಲಾಗುತ್ತದೆ. ಸುಮಾತ್ರಾ ದ್ವೀಪದ ಬಟಂಗ್ ಟೊರು ಅರಣ್ಯದಲ್ಲಿ ಇವು ವಾಸಿಸುತ್ತವೆ.
ಆನುವಂಶಿಕವಾಗಿ ವಿಭಿನ್ನವಾಗಿರುವ ಬೋರ್ನಿಯನ್ ಮತ್ತು ಸುಮಾತ್ರನ್ ಎರಡು ನರವಾನರಗಳು ಇತ್ತೀಚಿನವರೆಗೆ ಕಂಡುಬಂದಿವೆ ಎಂದು ವಿಜ್ಞಾನಿಗಳು ಭಾವಿಸಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.